ಮಹೇಶ ಹಳ್ಳಿಗದ್ದೆ
ಶಿರಸಿ ಹತ್ತಿರ ಹಳ್ಳಿಗದ್ದೆ. ಬೆಂಗಳೂರು ನಿವಾಸಿ. ಔಷಧ ಕಂಪೆನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದಾರೆ. ಓದುವುದು, ಗಝಲ್, ಕವನ, ರುಬಾಯಿ, ಹಾಯ್ಕು, ಚುಟುಕು, ಹನಿಗವನ ಹೀಗೆ ಹಲವಾರು ಸಾಹಿತ್ಯದ ವಿಭಾಗಗಳಲ್ಲಿ ಬರಹ. ಸಂಗೀತದಲ್ಲಿ ಆಸಕ್ತಿಯಿಟ್ಟುಕೊಂಡಿದ್ದಾರೆ.
ಪದಗಳಲಿ ನಿನ್ನ ಪ್ರೀತಿಯನು ಅಳೆದದ್ದು ನನ್ನದೇ ತಪ್ಪು
ಬರಡು ಮಾತುಗಳಲಿ ವಾದಕೆ ಇಳಿದದ್ದು ನನ್ನದೇ ತಪ್ಪು
ನಿನ್ನೊಳಗೆ ಇಳಿದು ಅಂತರಂಗ ತಿಳಿಯುವಲ್ಲಿ ವಿಫಲನಾದೆ ನಾನು
ಸದಾ ಜೊತೆಗಿರುವ ಒಲವನು ಅಲ್ಲಿ ಅರಸಿದ್ದು ನನ್ನದೇ ತಪ್ಪು
ಕೊಡುವ ಮನಸಿದ್ದರೆ ಮರೆಯದೇ ಬಂದು ಕೊಡುತ್ತಿದ್ದೆ ನೀನು
ಶುಭೋದಯಕೆ ದಿನವೂ ಹೂ ಬಯಸಿದ್ದು ನನ್ನದೇ ತಪ್ಪು
ಎದೆಯ ಪೀಠದಲಿ ಕೂರಿಸಿ ಆರಾಧಿಸಿದೆ ಪ್ರತಿನಿತ್ಯ ನೀನು
ಶುದ್ಧ ಪ್ರೀತಿಯ ಅರಿಯದೆ ಅನುಮಾನಿಸಿದ್ದು ನನ್ನದೇ ತಪ್ಪು
ಆಸೆಗಳೆಲ್ಲ ಒಳಗೊಳಗೇ ಸುತ್ತಿ ಸೆರೆಗೈದವೇನು ಶಿವ
ಬಿಡುಗಡೆಯೆಡೆಗೆ ನಡೆದ ನಿನ್ನನ್ನು ತಡೆದದ್ದು ನನ್ನದೇ ತಪ್ಪು
ವಿನೂತನ ಪ್ರಯೋಗ ಇದು. ಗಜ಼ಲ್ ಸಾಹಿತ್ಯದ ಜನಪ್ರಿಯತೆಯನ್ನು ಇನ್ನಷ್ಟು ಬೆಳೆಸುವ ಪ್ರಯಾಸ ಮತ್ತು ಕಳಕಳಿಗೆ ನನ್ನ ಸಲಾಂ.