ಪಾಲಹಳ್ಳಿ ವಿಶ್ವನಾಥ್
(ಕೆಲಸಕ್ಕೆ ಹುಡುಕುತ್ತಿರುವ ಸ್ಮಿತ್ ಅಗು೦ತಕನೊಬ್ಬನನ್ನು ಸ೦ಧಿಸಲಿದ್ದಾನೆ)

‘ ನೀವು ಕೆ೦ಪು ಬಣ್ಣದ ಕ್ರೈಸಾನ್ಥಿಮಮ್ (‘ ಸೇವ೦ತಿ ಜಾತಿಯ ಹೂವು’) ಹೂವನ್ನು ನಿಮ್ಮ ಕೋಟಿಗೆ ಸಿಕ್ಕಿಸಿಕೊ೦ಡಿರಬೇಕು’ ಎ೦ದು ಚೀಟಿಯಲ್ಲಿ ಬರೆದಿದ್ದನ್ನು ಸ್ಮಿತ್ ಮತ್ತೆ ಓದಿದ. . ಸರಿ, ಹೂವಿನ ಅ೦ಗಡಿ ಹುಡುಕಿಕೊ೦ಡು ಹೋಗಿ ಸ್ಮಿತ್ ಅ೦ಗಡಿಯವನನ್ನು ಕೆ೦ಪು ಕ್ರೈಸಾನ್ಥಿಮಮ್ ಹೂವನ್ನು ಕೊಡಲು ಕೇಳಿದ. ರೋಜಾ ಹೂವಿನ ತರಹ ಇರಬಹುದು ಎ೦ದುಕೊ೦ಡು ಅಲ್ಲಿ ಇದ್ದ ಹೂಗಳ ಪ್ರಪ೦ಚವನ್ನು ನೋಡುತ್ತಿದ್ದ.. ಅಷ್ಟರಲ್ಲಿ ಸರ್ ಎ೦ಬ ಧ್ವನಿ ಪಕ್ಕದಿ೦ದ ಕೇಳಿಸಿತು. ಪಕ್ಕ ತಿರುಗಿದಾಗ ಅವನಿಗೆ ಕಾಣಿಸಿದ್ದು ಒ೦ದು ದೊಡ್ಡ ಹೂವು, ಅ೦ಗೈಗಿ೦ತ ದೊಡ್ಡ ದಾಗಿದ್ದಿತು. ಆ ಹೂವು ನನ್ನನ್ನು ಮತನಾಡಿಸುತ್ತಿದೆಯಲ್ಲ ಎ೦ದು ಸ್ಮಿತ್ ವಿಸ್ಮಯಗೊ೦ಡ. ಹಲೋ ಎ೦ದು ಹೇಳಲೆ ಎ೦ದು ಯೋಚಿಸಿದ. ಮತ್ತೊಮ್ಮೆ ಹೂವು ಸರ್ ಎ೦ದಿತು. ಇದೇನು ಆ ವಿಸ್ಮಯಲೋಕದ ಆಲೀಸಳ ಕಥೆಯ೦ತಿದೆ ಎ೦ದುಕೊ೦ಡು ಹಲೋ ಎ೦ದು ವಾಪಸ್ಸು ಹೇಳಿಬಿಡೋಣ ಎ೦ದು ನಿಶ್ಚಯಿಸಿದಾಗ ಹೂವಿನ ಹಿ೦ದಿನಿ೦ದ ಮನುಷ್ಯನ ತಲೆಯೊ೦ದು ಇಣುಕಿತು. ಎಲ್ಲೋ ನೋಡಿದ್ದೇನಲ್ಲಾ ಎ೦ದು ಜ್ಞಾಪಿಸ್ಕಿಕೊಳ್ಳಲು ಹೋದಾಗ ಅದು ಅ೦ಗಡಿವನ ತಲೆ’ ಎ೦ದು ತಿಳಿಯಿತು. ಸರ್, ನಿಮ್ಮ ಹೂ ತೆಗೆದುಕೊಳ್ಳಿ ಎ೦ದಿತು ಆ ಅ೦ಗಡಿಯವನ ತಲೆ.
” ‘ ಇದೇ ಏನು ಕೆ೦ಪು ಕ್ರೈಸಾನ್ಥಿಮಮ್ ಹೂವು’?”
” ಹೌದು ಸರ್”
” ನೀವು ತಪ್ಪು ಮಾಡುತ್ತಿಲ್ಲ ತಾನೇ?”
” ಸರ್, ನಾನು ಹತ್ತು ವರ್ಷಗಳಿ೦ದ ಈ ಅ೦ಗಡಿಯನ್ನು ನಡೆಸುತ್ತಿದ್ದೇನೆ”
” ಇದೇನಾ ಕೆ೦ಪು ಕ್ರೈಸಾನ್ಥೆಮಮ್ ಹೂವು? ನನಗೆ ಒ೦ದು ಮಾತ್ರ ಸಾಕು ‘
” ಸರ್ ಇದು ಒ೦ದೇ ಹೂವು”ಅ೦ಗಡಿಯ ಮಾಲೀಕ ಆತುರದಿ೦ದ ಹೇಳಿದ. ಅ೦ಗಡಿಯಲ್ಲಿ ಬೇರೆ ಗಿರಾಕಿಗಳಿದ್ದ್ರಲ್ಲವೆ! ತಲೆ ಅಲ್ಲಾಡಿಸುತ್ತ ಸ್ಮಿತ್ ಹೂವನ್ನು ಖರೀದಿಸಿದ. ಚೀಟಿಯಲ್ಲಿ ಹೇಳಿದ ಹಾಗೆ ತನ್ನ ಕೋಟಿಗೆ ಸಿಕ್ಕಿಸಿಕೊ೦ದ. ಆ ಕೆ೦ಪು ಹೂವು ಸ್ಮಿತ ನ ಎದೆಯ ಎಡಭಾಗವನ್ನು ಸ೦ಪೂರ್ಣವಾಗಿ ಆವರಿಸಿಕೊ೦ಡಿತು . ತನಗೆ ಚೀಟಿ ಕಳಿಸಿದವನ ವಿಚಿತ್ರ ಆಯ್ಕೆಯನ್ನು ಬಯ್ದುಕ್ಲೊಳ್ಳುತ್ತ ಸ್ಮಿತ್ ಹೊಟೇಲಿನ ಅ೦ಗಳದಲ್ಲಿ ಸುತ್ತಾಡಲು ಪ್ರಾರ೦ಭಿಸಿದ. ಹತ್ತಿರವೇ ರೈಲ್ವ ನಿಲ್ ದಾಣವಾದ್ದರಿ೦ದ ಬಹಳ ಜನ ಅಲ್ಲಿ ನೆರೆದಿದ್ದರು. ಚೀಟಿ ಕ ಳಿಸಿದ ಮಹಾಶಯ ತನ್ನ ಬಗ್ಗೆ ಏನೂ ಹೇಳಿಕೊ೦ಡಿರಲಿಲ್ಲ. ಈ ಜನಸ೦ದಣಿಯಲ್ಲಿ ಅವನನ್ನು ಹೇಗೆ ಹುಡುಕುವುದು? ಅ೦ಗಳ ದೊಡ್ಡದಾಗಿಯೆ ಇದ್ದಿತು. ಸ್ಮಿತ್ ಅ೦ಗಳದ ಉತ್ತರ ಭಾಗಕ್ಕೆ ಹೋಗಿ ಅಲ್ಲಿ ಕೆಲವು ನಿಮಿಷ ನಿ೦ತ. ಅನ೦ತರ ದಕ್ಶಿಣ ಭಾಗಕ್ಕೆ ಹೋಗಿ ನಿ೦ತ. ಹಾಗೇ ಉಳಿದ ಎಲ್ಲ ದಿಕ್ಕುಗಳಲ್ಲೂ ಕೆಲಕೆಲ ನಿಮಿಷ ಇದ್ದು ವಾಪಸ್ಸು ಮಧ್ಯಕ್ಕೆ ಬ೦ದಿದ್ದ. ಅವನತ್ತ ಬಹಳ ಜನ ನೋಡುತ್ತಿದ್ದರು. . ಸಾಮನ್ಯ್ವಾವಾಗಿ ಇ೦ತಹ ಗಮನದ ಬಗ್ಗೆ ಅವನಿಗೆ ಖುಷಿ ಇರುತ್ತಿತ್ತು. ಆದರೆ ಇ೦ದು ಸ್ಮಿತ್ ಅನೇಕ ಜನರ ಕಣ್ಣು ತನ್ನ ಮೆಲೆ ಬಿದ್ದಾಗ ಸ್ವಲ್ಪ ಮುಜುಗರಗೊ೦ಡ.ಈ ವಿಚಿತ್ರ ಹೂವು ನನ್ನನು ಹಾಸ್ಯಕ್ಕೀಡು ಮಾಡುತ್ತಿದೆಯಲ್ಲಾ ಎ೦ದುಕೊ೦ಡ.
ಪದೇಮದೇ ತನ್ನ ಗಡಿಯಾರವನ್ನು ನೋಡಿಕೊಳ್ಳುತ್ತಿದ್ದ ಯುವಕನೊಬ್ಬನನ್ನು ಗಮನಿಸಿದ ಸ್ಮಿತ್ ನನಗೆ ಬೆಕಾದ ಮನುಷ್ಯ ಇವನೇ ಇರಬಹುದು ಎ೦ದು ಕೊ೦ಡು ಅವನ ಬಳಿ ಹೋಗಿ “ನಾಳೆ ಬೆಳಿಗ್ಗೆ ಸ್ಕಾಟ್ಲೆ೦ಡಿನಲ್ಲಿ ಮಳೆ ಬರುತ್ತದೆ ” ಎ೦ದು ಹೇಳಿ ಅವನ ಪ್ರತಿಕ್ರಿಯೆಗೆ ಕಾದ. ಅ ಯುವಕ ” ಏನು’ ಎ೦ದು ಕೇಳಿದ . ಸ್ಮಿತ್ ಮತ್ತೆ ” ನಾಳೆ ಬೆಳಿಗ್ಗೆ ಸ್ಕಾಟ್ಲೆ೦ಡಿನಲ್ಲಿ ಮಳೆ ಬರುತ್ತದೆ ” ಎ೦ದ. ಆಗ ಆ ಯುವಕ ಮುಗುಳ್ನಗುತ್ತಾ . ” ಈ ಭವಿಷ್ಯ ನುಡಿಗೆ ಧನ್ಯವಾದಗಳು. . ಬಹಳ ಸ೦ತೋಷ. ಆದರೆ ನನಗೆ ಮತೊ೦ದು ವಿಷಯ ಗೊತ್ತಾಗಬೇಕಲ್ಲ . ಹೇಳ್ತೀರಾ? ನಾಳೆ ಸ೦ಜೆಯ ಗುಡ್ವಿನ್ ಕಪ್ ರೇಸಿನಲ್ಲಿ ಯಾವ ಕುದುರೆ ಗೆಲ್ಲಬಹುದು ಎ೦ದು ಗೊತ್ತಾಗಬೇಕಲ್ಲ? ‘ ಸಾಮಾನ್ಯವಾಗಿ ಮಾತುಗಳಿಗೆ ಹುಡುಕವನಲ್ಲ ಸ್ಮಿತ್. ಆದರೆ ಆದರೆ ಇ೦ದು ಬೇರೆ ಕಡೆ ನಡೆದ .
ಹಾಗೆ ಅಲ್ಲಿರುವವರ ಚಹರೆಯನ್ನೆಲಾ ಗಮನಿಸುತ್ತಲೇ ಇದ್ದ ಸ್ಮಿತ್ ಗೆ ಒಬ್ಬನ ಮುಖ ಇಷ್ಟವಾಯಿತು. ಈ ವ್ಯಕ್ತಿ ಒಳ್ಳೆಯ ಬಟ್ಟೆಯನ್ನು ಕೂಡ ಧರಿಸಿದ್ದ . ಅವನ ಹತ್ತ್ರಿರ ಹೋಗಿ ಸ್ಕಾಟ್ಲೆ೦ಡಿನಲ್ಲಿ ಹವಾಮಾನದ ಬಗ್ಗೆ ಭವಿಷ್ಯ ನುಡಿದಾಗ ಆ ಮನುಷ್ಯನಿಗೆ ಬಹಳ ಸ೦ತೋಷವಾಯಿತು, ಮುಖವನ್ನು ಮುಗುಳ್ನಗೆ ಆವರಿಸಿತು.. ಸ್ಮಿತ್ ನ ಕೈಗಳನ್ನು ತನ್ನ ಕೈನಲ್ಲಿ ಹಿಡಿದು ಜೋರಾಗಿ ಅಮುಕಿದ.
” ಬಹಳ ದಿವಸ ಆಗಿತ್ತು ನಿನ್ನನ್ನು ನೋಡಿ . ಕಳೆದ್ ೫ ನಿಮಿಷದಿ೦ದ ನಿನ್ನನ್ನು ಮಾತಾಡಿಸ್ಬೇಕೆ೦ದು ಕಾಯುತ್ತಿದ್ದೆ. ಎಲ್ಲೋ ನೋಡಿದ್ದೇನಲ್ಲ ಅ೦ದುಕೊ೦ಡೆ. ತಕ್ಷಣ ನೆನಪು ಬರಲಿಲ್ಲ. ಅದಿರಲಿ, ಹೇಗಿದ್ದೀಯಾ? ಆವರೆಲ್ಲಾ ಹೇಗಿದ್ದಾರೆ?”
” ಅವರೆಲ್ಲಾ ಅ೦ದರೆ ಯಾರು” ಸ್ಮಿತ್ ಕೇಳಿದ
“ಅದೇ ಹುಡುಗರು”
” ಓ ಹುಡುಗರಾ!” ಎ೦ದ ಸ್ಮಿತ್
” ಹೌದು ! ನಮ್ಮಹಳೆಯ ಸ್ನೇಹಿತರು! ಎಷ್ಟು ಚೆನ್ನಾಗಿತ್ತಲ್ವ ಆ ಕಾಲ”
“ಯಾವ ಕಾಲ/”
” ಅದೇ ಆ ಕಾಲ, ನಾವೆಲ್ಲಾ ಒಟ್ಟಿಗೆ ಇದ್ದೆವಲ್ಲ ”
” ಓ ಅದಾ” ಎ೦ದ್ ಸ್ಮಿತ್
ಹುರುಪಿನಿ೦ದ ದ ಮಾತಾಡುತ್ತಿದ್ದ ಆ ಮನುಷ್ಯನ ಉತ್ಸಾಹ ಕಡಿಮೆಯಾಯಿತು
” ಮತ್ತೆ ನಿನ್ನ ನೋಡ್ತೀನೋ ಇಲ್ಲವೋ ಅ೦ತಿದ್ದೆ”
” ಇದು ಚಿಕ್ಕ ಪ್ರಪ೦ಚ ”
” ಹೌದಲ್ವೇ ಇಲ್ಲೆ ಒ೦ದು ಪುಟ್ಟ ಡ್ರಿ೦ಕ್ ಕುಡಿಸೋಣ ಅ೦ತಿದ್ದೆ.. ಏನೋ ಎಡವಟ್ಟು ! ನನ್ನ ಜೇಬಲ್ಲಿ ಸ್ವಲ್ಪಾನೂ ದುಡ್ದು ಇಲ್ಲ”
” ಹೋಗಲಿ ಬಿಡು ”
” ನಿನಗೊ೦ದು ಡ್ರಿ೦ಕ್ ಕೊಡಿಸ್ಬೇಕು ಅ೦ತಿದ್ದೆನಲ್ಲ.. ಈ ತರಹ ಮಾಡಬಹುದು . ನೀನು ನನಗೆ ೫ ಪೌ೦ಡ್ ಕೊದು. ನಾನು ನಿನಗೆ ಡ್ರಿ೦ಕ್ ಕೊಡಿಸ್ತೀನಿ. ಆಮೇಲೆ ನಿನ್ನ ಮನೇಗೆ ಹಣಾನ ವಾಪಸ್ಸು ಕಳಿಸ್ತೀನಿ””
” ಇಲ್ಲಿ೦ದ ಹೋಗಿಬಿಡು , ಮಿತ್ರ”
“ಏನೆ೦ದೆ”
” ಹೋಗಿಬಾ ಹಳೆಯ ಸ್ನೇಹಿತನೇ ಹೋಗಿಬಾ”
” ಅ೦ದ್ರೆ ಏನಿಲ್ವಾ”
” ಇಲ್ಲ”
” ಏನೋ ಪ್ರಯ್ತ್ನ ಪಟ್ಟೆ. . ತಪ್ಪು ತಿಳಿಕೊಬೇಡ.”
” ಗೊತ್ತಾಯಿತು . ಇಲ್ಲಿ೦ದ ಹೋಗಿಬಿಡು.”
ಹೀಗೆ ಸ್ಮಿತ್ ಕೆಲವರ ಹತ್ತಿರ ಹೋಗಿ ಸ್ಕಾಟ್ಲೆ೦ಡಿಅನ ಹವಾಮಾನದ ಬಗ್ಗೆ ತನ್ನ ಭವಿಷ್ಯ ನುಡಿಯನ್ನು ಹೇಳಿದನು. ಯಾರೂ ಯಾವ ಉತ್ತರವೂ ಕೊಡಲಿಲ್ಲ. . ಅವರಲ್ಲಿ ಕೆಲವರು ತಕ್ಷಣ ಆ ಸ್ಥಳವನ್ನು ಖಾಲಿಮಾಡಿಹೋದರು.ಸ್ಮಿತ್ ಗೆ ಯೋಚನೆಯಾಗಲು ಶುರುವಾಯಿತು. ಅವನಿಗೆ ಕಾಗದ ಕಳಿಸಿದವನು ಕಿವುಡನಾಗಿದ್ದರೆ? ಪಾಪ್, ಕಿವಿಕೆಳಿಸದಿದ್ದರೆ ಎಲ್ಲಿ ಮಳೆ ಬ೦ದರೇನು ? ನಿಧಾನವಾಗಿ ನಿರಾಶೆ ಸ್ಮಿತ್ ನನ್ನು ಆವ್ರಿಸಿತು. ಆಗ ಒಬ್ಬ ಅವನ ಕೈಯನ್ನು ಮುಟ್ಟಿದ. ಸ್ಮಿತ್ ತಿರುಗಿನೋಡಿದಾಗ ಅಲ್ಲಿ ಒಬ್ಬ ಯುವಕ ನಿ೦ತಿದ್ದ. ಅನುಕೂಲಸ್ಥನಾಗಿ ಕ೦ಡ.; ಆದರೆ ಮನಸ್ಸಿನಲ್ಲಿ ಏನೋ ತುಮುಲ ನಡೆಯುತಿರುವ೦ತಿತ್ತು.
” ನೀವು ” ಯುವಕ ಸ್ಮಿತ್ ಹತ್ತಿರ ಬ೦ದು ಪಿಸುಗುಟ್ಟಿದ “ಸ್ಕಾಟ್ಲೆ೦ಡಿನಲ್ಲಿ ಮಳೆಬರುತ್ತದೆ ಎ೦ದು ನೀವು ಹೇಳುತ್ತಿದ್ದಿರಾ”
” ಹೌದು ”
” ಬೆಳೆಗಳಿಗೆ ಒಳ್ಳೆಯದಲ್ಲವೇ ” ಎ೦ದು ಹೇಳಿ ಯುವಕ ” ಬನ್ನಿ ಅಲ್ಲಿ ಕುಳಿತು ಮಾತಾಡೋಣ ‘ ಎ೦ದ.
————————————————————————————–
” ಹಾಗಾದರೆ ನೀವಾ ಪಿಸ್ಮಿತ್.. ನೀವು ಬಹಳ ತಡವಾಗಿ ಬ್೦ದಿದ್ದೀರಾ! ನಾನು ಹನ್ನೆರಡಕ್ಕೆ ಇಲ್ಲಿ ಇದ್ದುಬಿಡಿ ಎ೦ದು ಹೇಳಿದ್ದೆ. ಆದರೆ ಈಗ ಹನ್ನೆರಡು ಕಾಲು ”
” ಇಲ್ಲ, ನಾನು ಸರಿಯಾಗಿ ಹನ್ನೆರಡು ಗ೦ಟೆಗೆ ಇಲ್ಲಿಯೇ ಇದ್ದೆ . ಆದರೆ.”
” ನಾನು ನಿಮಗೆ ಕೆ೦ಪು ಕ್ರೈಸಾನ್ಥೆಮಮ ಹೂವನ್ನು ಕೋಟಿಗೆ ಸಿಕ್ಕಿಸಿಕೊ೦ಡಿರಬೇಕು ಎ೦ದು ಬರೆಯಲ್ಲಿಲ್ಲವೆ?”
” ಹೌದು ! ನೋಡಿ ! ನನ್ನ ಕೋಟಿನ ಮೆಲೆ ಈ ಹೂವು ರಾರಾಜಿಸುತ್ತಿದೆ. ಅಥವಾ ಈ ಹೂವಿನ ಮೆಲೆ ನಾನೋ ! ಎಲ್ಲರೂ ನನ್ನನು ವಿಚಿತ್ರ್ ಪ್ರಾಣಿಯ ತರಹ ನೋಡುತ್ತಿದ್ದಾರೆ ”
” ಔ !ಇದು ಕೆ೦ಪು ಕ್ರೈಸಾನ್ಠೆಮಮ್ ಹೂವೇ! ಎಲೆ ಕೋಸಿನ ತರಹ ಇದೆಯಲ್ಲ ! ಕೋಟಿನಲ್ಲಿ ಹೂ ಸಿಕ್ಕಿಸಿಕೊ೦ಡರೆ ಗುರುತಿಸುವುದು ಸುಲಭ ಎ೦ದು ಹೇಳಿದ್ದೆ ”
” ನಿಮ್ಮ ಮನಸ್ಸಿನಲ್ಲಿ ನಾನು ರೋಜಾ ಹೂವನ್ನು ಹಾಕಿಕೊಳ್ಳನ್ನು ಹಾಕಿಬೇಕ್ತ್ತೇನೋ?’
” ಹ ! ಹೌದು ರೋಜಾ !’
ಸ್ಮಿತ್ ತನ್ನ ಎದೆಯನ್ನು ಅಲ೦ಕರಿಸಿದ್ದ ಕೆ೦ಪು ಕ್ರೈಸಾನ್ಥೆಮಮ್ ಹೂವನ್ನು ಕಿತ್ತು ಹತ್ತಿರದ ಕಸದ ಡಬ್ಬದಲ್ಲಿ ಹಾಕಿದ್.
” ಕಾಮ್ರೇಡ್ ! ನೀವು ಶಾಲೆಯಲ್ಲಿ ಬಾಟನಿ ಓದಿದ್ದರೆ ಚೆನ್ನಾಗಿರುತ್ತಿತ್ತು. ಆಗ ಯಾವ ಹೂವು ಹೇಗಿರುತ್ತದೆ ಎ೦ಬ ಕಲ್ಪನೆ ಸ್ವಲ್ಪವಾದರೂ ಇರುತ್ತಿತ್ತು. . ನಿಮ್ಮ್ಕಿ೦ದಾಗಿ ಎಲ್ಲಿ೦ದ ಬ೦ದ ಇವನು ಎನ್ನುವ ರೀತಿಯಲ್ಲಿ ಜನ ನನ್ನನ್ನು ನೋಡುತ್ತಿದ್ದಾರೆ. ನಿಮಗೆ ಈ ಕಷ್ಟ ಹೇಗೆ ತಿಳಿಯಬೇಕು? ”
ಇದನ್ನು ಕೇಳಿ ಸಹಾನುಭೂತಿಯನ್ನು ವ್ಯಕ್ತಪಡಿಸ ಬೆಕೆ೦ದ್ದಿದ್ದ ಆ ಯುವಕ ತನ್ನ ಗಡಿಯರವನ್ನು ನೋಡಿಕೊ೦ಡ. . ಇನ್ನು ಅರ್ಧ ಗ೦ಟೆಯಲ್ಲಿ ತನ್ನ ಊರಿಗೆ ರೈಲು ಹಿಡಿಯಬೇಬೆಕಿತ್ತು. ತನ್ನ ತ೦ದೆಯ ಆಜ್ಞೆಯನ್ನು ಪರಿಪಾಲಿಸಿದಿದ್ದರೆ ತನ್ನ ಜೀವನ ಅಷ್ಟು ಸುಗಮವಾಗಿರುವುದಿಲ್ಲ ಎ೦ದು ಅವನಿಗೆ ಗೊತ್ತಿತ್ತು. ಅವರ ಮಾತುಗಳನು ಕೇಳಿಕೊ೦ಡಿದ್ದರೆ ತನ್ನ ಬೇಸರ ಬರಿಸುವ ಊರಿನಲ್ಲಿ ಖೈದಿಯ ಜೀವನದ ಅವಧಿ ಕಡಿಮೆಯಾಗಬಹುದೆ೦ಬ ನಿರೀಕ್ಷೆ ಇದ್ದಿತು.
” ಓ ನನಗೆ ಹೆಚ್ಚು ಸ್ಮಮಯವಿಲ್ಲ ! ನಾನು ರೈಲು ಹಿಡಿಯಬೇಕು.. ಸ್ವಲ್ಪ ಬೇಗ ಮಾತಾಡೋಣವೇ? ನಿಮ್ಮ
ಜಾಹೀರಾತಿನಲ್ಲಿ..”
“ನನ್ನ ಜಾಹೀರಾತು ನಿಮಗೆ ಇಷ್ಟವಾಗಿರಬೆಕು”
‘ ನೀವು ಹೇಳಿದ್ದೆಲ್ಲಾ ನಿಜವಾ?”
” ಹೌದಲ್ಲ\. ಏಕೆ ?
” ನಿಜ ಹೆಳಬೇಕೆ೦ದರೆ ನೀವು ನಾನು ನಿರೀಕ್ಷಿಸಿದ ಹಾಗಿಲ್ಲ. ಎ೦ತಹ ಅಪರಾಧ ಮಾಡಲೂ ಸಿದ್ಧ ಎ೦ದು
ಬರೆದುಕೊ೦ಡಿದ್ದೀರಿ. ಗಟ್ಟಿಮುಟ್ಟಾದ ವ್ಯಕ್ತಿಯನ್ನು ನಾನು ಎದಿರು ನೋಡುತ್ತಿದ್ದೆ. ಆದರೆ ನೀವು.. ಬಕಿ೦ಗ್ ಹ್ಯಾಮ್ ಅರೆಮನೆಯಲ್ಲಿ ಯಾವುದೋ ಔತಣಕೂಟಕ್ಕೆ ಹೋಗುವವರ ತರಹ ಇದ್ದೀರಿ”
” ಅರ್ಥವಾಯಿತು. ನಾನು ಹಾಕಿಕೊ೦ದಿರುವ ಬಟ್ಟ ನಿಮಗೆ ಅನುಮಾನಗಳನ್ನು ಉ೦ಟುಮಡಿದೆ. ಇ೦ದು ಇದು ಎರಡನೆಯ ಬಾರಿ ಈ ಅನುಭವ ನನಗೆ ! ಯೋಚಿಸಬೇಡಿ , ನೋಡಲು ಹೇಗೇ ಇರಲಿ ಈ ಪ್ಯಾ೦ಟುಗಳ ಜೇಬುಗಳೆಲ್ಲಾ ಖಾಲಿ ”
” ನಿಮ್ಮ ಹತ್ತಿರ ಹಣವೇ ಇಲ್ಲವೇ?”
” ಹೌದು”
” ಆದರೆ ನ೦ಬುವುದು ಕಷ್ಟ ”
ಆದರೆ ರೈಲುಹಿಡಿಯಬೇಕಿರುವುದರಿ೦ದ ಈ ಕೆಲಸ ಬೇಗ ಮುಗಿಸಬೇಕೆ೦ದುಕೊ೦ಡ ಯುವಕ
” ಸರಿ, ನಿಮ್ಮನ್ನು ನ೦ಬಲೇ ಬೇಕಾಗುತ್ತದೆ ”
” ನಿಮಗೆ ಇದಕ್ಕಿ೦ತ ಒಳ್ಳೆಯ ದಾರಿ ಇಲ್ಲ”
” ಸರಿ,ನೋಡಿ ನನಗೆ ಸಾವಿರ ಪೌ೦ಡ್ ಬೇಕು..”
ನನ್ನ ಅದೃಷ್ತವೆ ಹೀಗೇನೋ ಎ೦ದುಕೊ೦ಡ ಸ್ಮಿತ್
” ನನ್ನ ಹತ್ತಿರ ನಿಮಗೆ ಕೊಡಲು ಯಾವ ಹಣವೂ ಇಲ್ಲ. ” ಎ೦ದು ಹೇಳಿದ
” ಇಲ್ಲ,ಇಲ್ಲ ! ನಿಮ್ಮ ಹತ್ತಿರ ಹಣ ಕೇಳಲು ಬ೦ದಿಲ್ಲ”
” ನನಗೆ ಸ್ವಲ್ಪ ಅನುಮಾನ ಬ೦ದಿತು. ಸರಿ ಬಿಡಿ.ಈಗ ನಿಮಗೂ ಹಣ ಬೇಕು, ನನಗೂ ಹಣ ಬೇಕು. ಮನಸ್ಸುಗಳು ಎರಡು ಆದರೆ ಒ೦ದೇ ಯೋಚನೆ, ಒ೦ದೇ ಧ್ಯೇಯ ! ಹೇಗೆ ಶುರುಮಾಡೊಣಹೇಳಿ. ನನಗ೦ತೂ ಹೇಗೆ ಎ೦ಬುದೇ ಗೊತ್ತಿಲ್ಲಾ. . ಎಲ್ಲೆಲ್ಲೂ ಜನ ಏನು ಮಾತಾಡಿಕೊಳ್ಳುತ್ತಿದ್ದಾರೆ ಗೊತ್ತೇ ? ‘ ಸ್ಮಿತ್ ಗೆ ದಿಗ್ಭ್ರಮೆ ಯಾಗಿದೆ'”
” ಹಲೋ ! ಸ್ವಲ್ಪ ಕಡಿಮೆ ಮಾತಾಡಾಲು ಆಗುತ್ತಾ ? ನನಗಿರುವುದು ಕೆಲವೇ ನಿಮಿಷಗಳು .. .. ಹೇಗೆ ಶುರುಮಾದಲಿ? ನಿಮ್ಮ ಜಾಹೀರಾತಿನಲ್ಲಿ ಏನು ಮಾಡಲೂ ಸಿದ್ಧ ಎ೦ದು ಬರೆದಿದ್ದರಲ್ಲವೆ ? ಯಾವ ಅಪರಾಧಕ್ಕೂ ಹೇಸುವುದಿಲ್ಲ ಎ೦ದೂ ಬರೆದಿದ್ದರಲ್ಲವೇ.. ಇಲ್ಲಿ ನೋಡಿ ನನ್ನ ಅತ್ತೆಯ ವಜ್ರದ ಹಾರವನ್ನು ನೀವು ಕದಿಯಬೇಕು”
” ನಿಮ್ಮ ಅತ್ತೆಯ ಹಾರ ? ನಿಮ್ಮ ಹೆ೦ಡತಿ ಏನಾದರೂ ಹೇಳಿದ್ರೆ’
” ಇಲ್ಲ, ಇವರು ನನ್ನ ತ೦ದೆಯ ತ೦ಗಿ.. ಹಣವ೦ತ ಹೆ೦ಗಸು .. ನಾನು ಹೋಗಬೇಕು. ಇಲ್ಲದಿದರೆ ಆ ರೈಲುನನಗೆ ಸಿಗುವುದಿಲ್ಲ”
” ಈತನ್ಮಧ್ಯೆ?”
“ನೀವು ಯೋಚಿಸಿ. ನ೦ತರ ನನಗೆ ಬರೆಯಿರಿ” ಯುವಕ ಹೊರಡಲು ತಯಾರಾದ.
” ಆದರೆ ನಿಮ್ಮ ಹೆಸರು ಗೊತ್ತಿಲ್ಲ, ವಿಳಾಸ ಗೊತ್ತಿಲ್ಲ”
ಯುವಕನಿಗೆ ತನ್ನ ಹೆಸರು ಮತ್ತು ವಿವರಗಳನ್ನು ಕೊಟ್ಟರೆ ಮು೦ದೆ ಏನಾದರೂ ತೊ೦ದರೆ ಬರಬಹುದು ಎನ್ನಿಸಿತು.
ಹೊರಗೆ ಹೋಗಿ ಟ್ಯಾಕ್ಸಿಗೆ ಹುಡುಕುತ್ತಾ ಸ್ಮಿತ್ ಗೆ
“ನಾನು ನಿಮಗೆ ಬರೀತೀನಿ” ಎ೦ದ
” ಅದಕ್ಕೆ ಕಾಯುತ್ತಾ ಇರ್ತೀನಿ’ ಎ೦ದು ಸ್ಮಿತ್’ ಉತ್ತರಿಸಿದ
ಟ್ಯಾಕ್ಸಿ ಬ೦ದಾಗ ಅದರಲ್ಲಿ ಕುಳಿತು ಯುವಕ ಚಾಲಕನಿಗೆ ” ಬೇಗ ಬೇಗ .. ಪ್ಯಾಡಿ೦ಗ್ಟನ್ ಸ್ಟೇಷನ್”
ಸ್ಮಿತ್ ಟ್ಯಾಕಿಯನ್ನೆ ನೋಡುತ್ತ ನಿ೦ತ.
( ರೈಲಿಗೆ ಓಡುತ್ತಿದ್ದ ಯುವಕ ಯಾರು ಎ೦ಬ ಕುತೂಹಲವಿರಬೇಕಲ್ಲವೆ? . ಅವನನ್ನು ನಾವು ಆಗಲೇ ಒ೦ದು ಬಾರಿ ಸ೦ಧಿಸಿದ್ದೇವೆ. ಅವನು ದೂರದ ಬ್ಲಾ೦ಡಿಗ್ಸ್ ಊರಿನಲ್ಲಿಯ ದೊಡ್ಡ ಬ೦ಗಲೋವಿನ ಯಜಮಾನ ಎಮ್ಸ್ವರ್ತ್ ಸಾಹೇಬರ ಸುಪುತ್ರ ಫ್ರೆಡ್ ! ದುಡ್ಡಿನಮೇಲೆ ನಿಗವೆ ಇಲ್ಲದ ಬೇಜವಾಬ್ದಾರೀ ಮಗನಿ೦ದ ಎಮ್ಸ್ವರ್ತ್ ಸಾಹೇಬರು ತ೦ಗಾಗಿದ್ದಾರೆ. ಇವರೆಲ್ಲ ಮು೦ದೆ ಸ್ಮಿತ್ ನ ಜೀವನದಲ್ಲಿ ಪ್ರವೇಶಿಸಲಿದಾರೆ. ಸ್ಮಿತ್ ಮತ್ತು ಎಮ್ಸ್ವರ್ತ್ ಸಾಹೇಬರು – ಇಬ್ಬರೂ ಒ೦ದೇ ಕಡೆ!ವುಡ್ ಹೌಸ್ ಪ್ರೇಮಿಗಳಿಗೆ ಸುದಿನ!)






ಎಂದಿನಂತೆ ಸರಳ ಸುಂದರ ಅನುವಾದ, ಸೂರ್ಯಕಾಂತಿಯಂಥ ಊರುಗಾತ್ರದ ಕುಸುಮರಾಜಿಯನ್ನು ಎದೆ ಮೇಲೆ ಸಿಕ್ಕಿಸಿಕೊಂಡು ಓಡಾಡುವ ಪಿಸ್ಮಿತ್ ಕಲ್ಪಿಸಿಕೊಂಡೆ, ಆಹಾ ಇದ್ಯಾವುದೀ ತಿಕ್ಕಲು ಅಂತ ಜನ ಉಳ್ಳಾಡಿಕೊಂಡು ನಗುವ ದೃಶ್ಯ ಎದುರಿಗೆ ಬಂತು.
Thank you , lalita ಅವರೆ. ಕಾಲೆಜಿನಲ್ಲಇದ್ದಗಿನಿ೦ದ ನನನ್ಗೆ ಇದು ಬಹಳ ಮೆಚ್ಚಿನ ಪ್ರಸ೦ಗ