ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದಿನಿ ಹೆದ್ದುರ್ಗ ಹೊಸ ಕವಿತೆ: ಕವಿತೆ ದ್ರೌಪದಿಯಂತೆ

-ನಂದಿನಿ ಹೆದ್ದುರ್ಗ

ಕವಿತೆ 

ದ್ರೌಪದಿಯಂತೆ

ಸೆಳೆಸೆಳೆದು ಸೋಲಬೇಕಷ್ಟೆ

ವಿವಸ್ತ್ರವಾದಾಳೆಂದು

ಕಾಯುವುದು ವೇಸ್ಟೇ

ಲೋಕದುದ್ದಕ್ಕೂ ಅವಳಿಚ್ಚೆಯ

ಚೆನ್ನರು

ಸಾವಕೆಡುವ ಗಂಡಂದಿರು

ಒಳಗೊಳಗೆ ಒಲಿದ 

ಮಿಂಡಂದಿರು

ಸೊಲ್ಲೆತ್ತದೆ ಸಲ್ಲಾಪಿಸೋ

ಪ್ರೇಮಿಗಳು

ತೊಡೆ ತೆರೆಸುವ,

ತೆರೆತೆರೆದು ತೋರಿಸುವ

ಕಾಮಿಗಳು

ಮೊನ್ನೆ.. 

ಬದಿಗೆ ಕರೆದು ಕೇಳಿತ್ತು ಕವಿತೆ

ಕಿವಿಯಲ್ಲಿ ಮೆಲ್ಲಗೆ,

ಸ್ಖಲನದ್ರವ ಹರಿಯುತಿತ್ತು

ಹೊಳೆಯಂತೆ.

“ಬೆತ್ತಲಲ್ಲಿ ಮಿಲನ

ಹೇಗಿರುತ್ತದೆಯೇ ಒಡತಿ?

ಆಳಿಸಿಕೊಳ್ಳುವುದೆಂದರೆ

ಏನೇ?

ತುತ್ತ ತುದಿಯಲ್ಲಿ ಏನಾಗುತ್ತದೆಯೇ?”

ಕೋಟಿ ಹರಕೆ

ತೀರಿಸಿಕೊಂಡ ಮೇಲೂ

ಕೋಟಿ ವಿಟರು

ಮುಟ್ಟಾಡಿದ ಮೇಲೂ

ಕೋಟಿ ಚಿಟ್ಟೆ

ಕುಡಿದಾದ ಮೇಲೂ

ಅತೃಪ್ತ ಅರೆಹೊಟ್ಟೆಯ

ಹುಟ್ಟಾ ಹೆಣ್ಣು ಇವಳು

ಅಕ್ಷಯದಾಯಿನಿ

ಚಿರಕನ್ನೆ 

ಎಂದೂ ತುಂಬದ ದೊನ್ನೆ!!

ಉತ್ತರಿಸಲಾಗದೆ ನಿಟ್ಟುಸಿರಿಟ್ಟೆ.

‍ಲೇಖಕರು avadhi

30 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading