ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದನ್ ಇಂಗ್ಲಿಶ್!

ನಂದನ್ ನ ನಗೆ ಹನಿಗಳು

ಗೋಪಾಲ ವಾಜಪೇಯಿ

ಕವಯಿತ್ರಿ ಮಂಜುಳಾ ಬಬಲಾದಿಯವರ ಮತ್ತೊಂದು ಬ್ಲಾಗ್ ‘ನಂದನ-ವನ.’ ಇದರಲ್ಲಿ ತಮ್ಮ ಪುಟ್ಟ ಮಗ ನಂದನನ ಕುರಿತ ಕೆಲವು ಲೇಖನಗಳು, ಅನಿಸಿಕೆಗಳು, ಆತನ ಆಟಗಳು, ಆತನ ನಗೆಮಾತುಗಳು ಇತ್ಯಾದಿ ಇವೆ. ಇಲ್ಲಿವೆ ನೋಡಿ ನಂದನ್ ಜೊತೆಗಿನ ರಸ-ನಿಮಿಷಗಳು.

ಮನೆಯಲ್ಲಿ ಸರಸ್ವತಿಯ ತೈಲ ಚಿತ್ರವೊಂದನ್ನು ಹೊಸದಾಗಿ ತಂದಿದ್ದೆವು.

ಮೊದಲ ಬಾರಿಗೆ ನಂದನ್ ಗೆ ಸರಸ್ವತಿಯ ಪರಿಚಯ, ಸರಸ್ವತಿಗೆ ನಂದನ್ ನ ಇಂಟ್ರಡಕ್ಷನ್.

ಅದಾದ ಮೇಲೆ…

ಅಮ್ಮ : ಪುಟ್ಟಾ… ಸರಸ್ವತಿ ಕೈಯಲ್ಲಿ ಏನು ಹಿಡ್ಕೊಂಡಿದಾಳೆ…?

ನಂದನ್ : ಗಿಟಾರ್…!

ಅಮ್ಮ : ಸರಸ್ವತಿಯ ಹಿಂದೆ ನೀರು ಹರೀತಿದೆಯಲ್ಲ ಏನದು?

ನಂದನ್ : ಸ್ವಿಮಿಂಗ್ ಪೂಲ್…!

-0-0-0-

ಅಡಿಗೆ ಮನೆಯಲ್ಲಿ ಅಮ್ಮ ಕೆಲಸದಲ್ಲಿ ನಿರತೆ. ನಂದನ್ ಗೆ ಈಗ ಅಡಿಗೆ ಮನೆಯಲ್ಲೇ ಅತಿಯಾದ ಕೆಲಸ…!

ಅಮ್ಮ : ಸ್ವಲ್ಪ ಕೋಪದಿಂದ, ನಂದನ್ ಹೊರಗೆ ಹೋಗು.

ನಂದನ್ : ಹೋಗಲ್ಲ…

ಅಮ್ಮನಿಗೆ ಕೋಪ ಬಂತು. ಇಂಗ್ಲೀಷ್ ನಲ್ಲಿ ಹೇಳಿದರೆ ಮಗ ಮಾತು ಕೇಳಬಹುದು ಅನಿಸಿತು.

ಅಮ್ಮ : ನಂದನ್, ಗೋ…

ಅದಕ್ಕೆ ನಂದನ್ ಇಂಗ್ಲೀಷ್ ನಲ್ಲೆ ಉತ್ತರ ಕೊಟ್ಟ.

ನಂದನ್ : ಗೋಗಲ್ಲಾ…!

‍ಲೇಖಕರು G

21 November, 2012

1 Comment

  1. sudheendra

    gogalla, nice reply

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading