ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೆಹಲಿ ಕನ್ನಡ ಸಂಘಕ್ಕೆ ಹೊಸ ನೇತೃತ್ವ

[caption id="attachment_26753" align="aligncenter" width="114" caption="ಅಧ್ಯಕ್ಷ ವೆಂಕಟಾಚಲ ಹೆಗಡೆ "][/caption] [caption id="attachment_26754" align="aligncenter" width="108" caption="ಕಾರ್ಯದರ್ಶಿ ಸಿ ಎಂ ನಾಗರಾಜ್ "][/caption] ಜನವರಿ ಒಂಬತ್ತರಂದು ನಡೆದ ದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಗೆದ್ದ ಹೊಸ ಕಾರ್ಯಕಾರಿ ಸಮಿತಿಯು ಅಧಿಕಾರ ವಹಿಸಿಕೊಂಡಿದೆ. ಹೊಸ ಸಮಿತಿಯಲ್ಲಿ ಅಧ್ಯಕ್ಷ ಡಾ. ವೆಂಕಟಾಚಲ ಹೆಗಡೆ, ಉಪಾಧ್ಯಕ್ಷ ಬಿ.ಕೆ. ಬಸವರಾಜ್ ಮತ್ತು ಉಷಾ ಭರತಾದ್ರಿ, ಕಾರ್ಯದರ್ಶಿ ಸಿ.ಎಂ. ನಾಗರಾಜ್, ಜಂಟಿ ಕಾರ್ಯದರ್ಶಿ ಎನ್.ಆರ್.ಶ್ರೀನಾಥ್ ಮತ್ತು ರೇಣುಕಾ ನಿಡಗುಂದಿ ಮತ್ತು ಕೋಶಾಧಿಕಾರಿ ಕೆ.ಆರ್. ರಾಮಮೂರ್ತಿ ಅವರಿದ್ದಾರೆ. ಅಲ್ಲದೆ ಸಮಿತಿಯಲ್ಲಿ ಅಂಜನಿ ಗೌಡ, ಎಸ್.ಸಿ. ಹೇಮಲತಾ, ಟಿ.ಎಂ. ಮೈಲಾರಪ್ಪ, ಪಿ.ಸಿ. ಶ್ರೀನಿವಾಸ, ಸಿ.ಆರ್. ಶ್ರೀನಿವಾಸ್, ಜಿ.ಬಿ. ಹೆಗಡಿ, ಆನಂದ ಮುರುಗೋಡ್, ಬಿ. ನಾರಾಯಣ ಅವರು ಸೇರಿ ಎಂಟು ಸದಸ್ಯರಿದ್ದಾರೆ. ಸುಮಾರು ೩೭೦೦ ಅಜೀವ ಸದಸ್ಯರಿರುವ ದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಸುಮಾರು ೮೦೦ ಸದಸ್ಯರು ಮತದಾನ ಮಾಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿ ಎರಡು ಮತಗಳ ಅಂತರದಲ್ಲಿ ಡಾ. ಹೆಗಡೆಯವರು ವಿಜಯ ಗಳಿಸಿದರು. (ಕೆಂಪು ಕೋಟೆ ವರದಿ)

]]>

‍ಲೇಖಕರು G

23 January, 2011

3 Comments

  1. ಎಚ್ಚೆಸ್ವಿ

    ಪ್ರೀತಿಯ ಹೆಗಡೆಗೆ ಹೃದಯಪೂರ್ವಕ ಶುಭಾಶಯಗಳು. ನೀವು ನನ್ನ ವಿದ್ಯಾರ್ಥಿಯಾಗಿದ್ದಾಗ ಕಾಲೇಜಿನಲ್ಲಿ ಕನ್ನಡ ಸಂಘಕಟ್ಟಿ ಬೆಳೆಸಿದ್ದು ನೆನಪಾಗುತ್ತಿದೆ. ದೊಡ್ಡ ಜವಾಬುದಾರಿ ನಿಮ್ಮ ಹೆಗಲ ಮೇಲಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿ ಕನ್ನಡಸಂಘದ ಘನತೆಯನ್ನು ಇನ್ನಷ್ಟು ಹೆಚ್ಚಿಸಿ. ಪ್ರೀತಿಪೂರ್ವಕ ಅಭಿನಂದನೆಗಳು ನಿಮಗೂ ಮತ್ತು ಇತರ ಪದಾಧಿಕಾರಿಗಳಿಗೂ.
    ಎಚ್ಚೆಸ್ವಿ

  2. ಲಕ್ಷ್ಮೀನಾರಾಯಣ ವಿ ಎನ್

    ದೆಕಸ ದ ಎಲ್ಲಾ ನೂತನ ಪದಾಧಿಕಾರಿಗಳಿಗೂ ಹಾರ್ದಿಕ ಅಭಿನಂದನೆಗಳು. ಅವರೆಲ್ಲರೂ ಈ ವರ್ಷ ಕಡೆಯಪಕ್ಷ ಒಂದೊಂದು ಹೊಸ ಕನ್ನಡ ಪುಸ್ತಕವನ್ನು ಓದಿ/ಬರೆದು/ಪ್ರಕಟಿಸಲಿ ಎಂದು ಹಾರಯಿಸುತ್ತೇನೆ
    ವಿಎನ್ಎಲ್, ಮೈಸೂರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading