ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಪ್ರವರ್ತಿತ ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಕಾರದೊಂದಿಗೆ, “ವರ್ಷ” ಕ್ರಿಯೇಷನ್ಸ್ ಪ್ರಸ್ತುತಿಯ “ದೂರ ತೀರ ಯಾನ” ಕನ್ನಡ ಹಾಡುಗಳ ವಿಡಿಯೋ ಆಲ್ಬಂ ಜುಲೈ 23ರಂದು ಬೆಳಗ್ಗೆ 9ಗಂಟೆಗೆ ವಿದ್ಯಾಗಿರಿಯಲ್ಲಿರುವಪತ್ರಿಕೋದ್ಯಮ ಸೆಮಿನಾರ್ ಹಾಲ್ ನಲ್ಲಿ ಬಿಡುಗಡೆಗೊಳ್ಳಲಿದೆ.
ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ “ಗುಬ್ಬಚ್ಚಿಗಳು” ನಿರ್ದೇಶಕ ಅಭಯ ಸಿಂಹ ಈ ಹಾಡುಗಳ ವಿಡಿಯೋ ಆಲ್ಬಂ ಬಿಡುಗಡೆಗೊಳಿಸಲಿದ್ದಾರೆ. ಅಧ್ಯಕ್ಷತೆಯನ್ನು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸುವರು. ಸಂಸ್ಥೆಯ ಆಡಳಿತಾಧಿಕಾರಿ ಸ್ಮಿತಾ ಪಿ.ಐತಾಳ್ ಹಾಗೂ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಉಪಸ್ಥಿತರಿರುವರು.







0 Comments