
-ವೀಣಾ ಭಟ್.
ಭಾಗ __೧
” ಅಮ್ಮಾ ”
” ಏನು..?”
“ಇವತ್ತು ಸ್ಕೂಲ್ ನಲ್ಲಿ ಒಂದು ಹೊಸ ಪ್ರಾಜೆಕ್ಟ್ ಕೊಟ್ಟಿದಾರೆ ..”
“ಯಾವುದರ ಬಗ್ಗೆ ? ”
“ದೀಪಾವಳಿ ಹತ್ರ ಬಂತಲ್ವ …,ಅದಕ್ಕೇ ..anti cracker ಪ್ರಾಜೆಕ್ಟ್ .ಕೆಲವು ಸ್ಕೆಚ್ ಕೂಡಾ ಮಾಡಬೇಕು .ನಾನು ಕ್ಲಾಸ್ನಲ್ಲಿ ಎಲ್ಲರ ಎದುರು
ಪಟಾಕಿಗಳಿಂದಾಗುವ ಹಾನಿಗಳ ಬಗ್ಗೆ ಹೇಳಬೇಕು .ಅಮ್ಮಾ …ಪ್ಲೀಸ್ ಹೆಲ್ಪ್ ಮಾಡಬೇಕು .ಹಾಂ …ಮತ್ತೆ ನಂಗೆ ಮಾತ್ರ ಪಟಾಕಿ ಬೇಕೇ ..ಬೇಕು .”
” ಸರಿ .ನಾನು ನಿಂಗೆ ಹೇಳ್ಕೊಡ್ತೀನಿ .ಆದರೆ ನನ್ನದೊಂದು ಶರತ್ತಿದೆ .ನಾನು ಹೇಳಿದ್ದನ್ನು ನೀನು ಬರೆದಾದ ಮೇಲೆ ನೀನು ಪಟಾಕಿ ಬೇಡ ಅಂತ ಹೇಳ್ತೀಯ .
ಇದು ನಿಜವಾದ್ರೆ ನೀನು ಸೋತ ಹಾಗೆ.ಪಟಾಕಿ ತರೋದು ಕ್ಯಾನ್ಸಲ್ .ಇಲ್ಲಾಂದ್ರೆ ,ನಾನು ಸೋತೆ,ಪಟಾಕಿ ತರೋಣ .ಏನಂತೀಯಾ ..? ”
“ಸರಿ. Done ….ಬಾಸ್ …”
“ನಾನು ಹೇಳಿದ್ದು ಎಲ್ಲಾ ಬರ್ಕೊ…”

ಭಾಗ —೨
ಸ್ನೇಹಿತರೇ….ನಾನಿವತ್ತು ಪಟಾಕಿಯಿಂದಾಗುವ ಹಾನಿಯ ಬಗ್ಗೆ ಹೇಳುತ್ತಿದ್ದೇನೆ .ಪಟಾಕಿಯ ಬೆಳಕಿನ ಹಿಂದಿರುವ ಕತ್ತಲ ಬಗ್ಗೆ ನಿಮಗೆಷ್ಟು ಗೊತ್ತು..?
ಹೇಳುತ್ತೇನೆ …ಕೇಳಿ….
೧.ಪಟಾಕಿ ತಯಾರು ಮಾಡುವ ಕಾರ್ಖಾನೆಗಳಲ್ಲಿ ದುಡಿಯುವವರೆಲ್ಲ ಮಕ್ಕಳು .
೨.ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಈ ಕೆಲಸದಲ್ಲಿ ತೊಡಗಿದ್ದಾರೆ .
೩.ಈ ಮಕ್ಕಳಿಗೆ ಬದುಕಿನ ಮೇಲೆ ಭರವಸೆ ,ಭವಿಷ್ಯದ ಬಗ್ಗೆ ಕನಸುಗಳಿಲ್ಲ .
೪.ಈ ಮಕ್ಕಳು ಕೆಲಸ ಮಾಡುವ ಪಟಾಕಿ ಕಾರ್ಖಾನೆಗಳಲ್ಲಿ ಹೆಚ್ಚಿನವು ಕಾನೂನು ಬಾಹಿರ .
೫.ಇಲ್ಲಿ ಆಗುವ ಅವಘಡಗಳ ಬಗ್ಗೆ ವರದಿಯನ್ನು ಬಹಿರಂಗಗೊಳಿಸುವುದಿಲ್ಲ.
೬.ಈ ಮಕ್ಕಳು ವಿಷಕಾರಿ ರಾಸಾಯನಿಕ ಗಳನ್ನು ಸೇವಿಸಿ ..ಸೇವಿಸಿ ..ಶ್ವಾಸಕೋಶದ ತೊಂದರೆ ,ಚರ್ಮದ ಕಾಯಿಲೆಗಳು ..ಇತ್ಯಾದಿ
ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ .
೭. ವಾತಾವರಣದ ಉಷ್ಣತೆಯನ್ನು ಹೆಚ್ಚಿಸುತ್ತದೆ .
೮.ಶಬ್ದ ಮತ್ತು ಹೊಗೆಯಿಂದ ಪರಿಸರ ಕಲುಷಿತವಾಗುತ್ತದೆ .
೯.ಪ್ರಾಣಿ ಪಕ್ಷಿಗಳಿಗೆ ಕೂಡಾ ತೊಂದರೆಯಾಗುತ್ತದೆ .
೧೦. ಆರೋಗ್ಯ ವಂತರಿಗೂ ಕೂಡಾ ಹೊಸದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು .
೧೧.ಬೆಂಕಿ ಅನಾಹುತಗಳಾಗಬಹುದು.
೧೨.ಪಟಾಕಿ ಸಿಡಿದು ಆಗುವ ಅನಾಹುತಗಳಿಂದ ಜೀವನ ಪರ್ಯಂತ ಅಂಗವಿಕಲರಾಗಬಹುದು.

ನಾವು ಏನು ಮಾಡಬಹುದು:
೧.ಪಟಾಕಿ ಹೊಡೆಯುವುದನ್ನು ನಿಲ್ಲಿಸಿ .ಈ ಸಂದೇಶ ನಿಮ್ಮ ಸ್ನೇಹಿತರಲ್ಲೂ ಹರಡಿ .
೨.ಮನೆಯಲ್ಲಿ ದೀಪ ಬೆಳಗಿ ಸ್ನೇಹಿತರೊಂದಿಗೆ ಸಿಹಿ ಹಂಚಿಕೊಳ್ಳಿ .
೩.ಸಮಾಜ ಸೇವಕರು ಸಾರ್ವಜನಿಕ ಸಮಾರಂಭಗಳು ,ಹಬ್ಬ -ಹರಿದಿನಗಳು ..ಇತ್ಯಾದಿಗಳಲ್ಲಿ ಈ ಸಂದೇಶವನ್ನು ಜನರಿಗೆ ಸಾರಬೇಕು .
೪.ಟಿವಿ ಮತ್ತು ಪತ್ರಿಕೆಗಳಲ್ಲಿ ಈ ಸಂದೇಶವನ್ನು ಏಕಕಾಲದಲ್ಲಿ ಸಾವಿರಾರು ಜನರಿಗೆ ತಲುಪಿಸಬಹುದು .
ಫ್ರೆಂಡ್ಸ್ …..ಇಷ್ಟೆಲ್ಲಾ ವಿಷಯಗಳನ್ನು ತಿಳಿದುಕೊಂಡ ಮೇಲೆ ನನಗನ್ಸುತ್ತೆ …ಈ ದೀಪಾವಳಿಯನ್ನು ನಾವೂ ಪಟಾಕಿ ಇಲ್ಲದೆ ದೀಪ ಬೆಳಗಿ ಆಚರಿಸಬೇಕೂಂತ … .ನಾನು ಇನ್ನು ಪಟಾಕಿ ಹೊಡೆಯೊಲ್ಲ ಅಂತ ತೀರ್ಮಾನ ಮಾಡಿದೀನಿ .
ನೀವು …?
ಥ್ಯಾಂಕ್ಸ್ ಮಾಮ್…ನನಗೆ ಈ ಸಬ್ಜೆಕ್ಟ್ ಕೊಟ್ಟಿದ್ದಕ್ಕೆ …
ನಿಮಗೆಲ್ಲ ದೀಪಾವಳಿಯ ಶುಭಾಶಯಗಳು ….”
ಓ …….ಚಪ್ಪಾಳೆ ……….
ಭಾಗ —೩
“ಅಮ್ಮಾ . ………ನನಗೆ ಪ್ರಾಜೆಕ್ಟ್ನಲ್ಲಿ A + ಸಿಕ್ತು …… ”
“ವಾವ್ …ಮಾರ್ಕ್ಸ್ ನಂಗೇ …..”
“ಎಸ್ ….ಮಾ …ನಿನಗೇ…ಯಾಕಂದ್ರೆ ನಾನು ಸೋತೆ .ಪಟಾಕಿ ತರೋದು ಬೇಡ ಅಂತ ಈಗ ನಾನೇ ಹೇಳ್ತಾ ..ಇದೀನಿ ..ಫ್ರೆಂಡ್ಸ್ ಜೊತೆ ಸೇರಿ ದೀಪ ಹಚ್ಚೋಣ .
ಹೊಸ ಡ್ರೆಸ್ ತಗೋಬೇಕು .ಮತ್ತೆ ದೊಡ್ಡ ಗಿಫ್ಟ್ ತಗೋಬೇಕು.ನೀನು ನನ್ನ ಇಷ್ಟದ ಸ್ವೀಟ್ ಮಾಡು .ನಾನು ಎಲ್ಲರಿಗೂ ಈ ವಿಷಯ ಹೇಳ್ಬೇಕು …..”
“ಇಲ್ಲ ಕಣೋ ..ನೀನು ಸೋಲಲಿಲ್ಲ … ..ನೀನೂ ಗೆದ್ದಿ …ನಾನೂ ಗೆದ್ದೆ….!!!! ”






“ಅವಧಿ ಮಾಗ್” ಬರಹಗಳನ್ನು ಓದಿ ಮೂಕ ವಿಸ್ಮಿತನಾದೆ. ಈ ಬ್ಲಾಗ್ ಲೋಕದಲ್ಲಿ ಮಾನ್ಯ ಎಸ್. ವೀಣಾ ಭಟ್ ಅವರ ದೀಪಾವಳಿ ಪ್ರಾಜೆಕ್ಟ್ ಮಾತುಗಳು ನನ್ನವೇ ಅಂತ ಭಾಸವಾಯಿತು. ಎದೆಗಿಳಿದು ಭಾವದ ಸುಮಗಳನ್ನು ಅರಳಿಸುವಂತವು. ಅಭಿನಂದನೆಗಳು.
ತುಂಬಾ ಉತ್ತಮ ಉದ್ದೇಶವನ್ನಿಟ್ಟು ಕೊಂಡು ಬರೆದ ಲೆಖನವಿದು. ಇದನ್ನು ಓದಿದ ಮೇಲೆ ನನಗನಿಸಿದ್ದು ಏನೆಂದರೆ ಬಾಲಕಾರ್ಮಿಕರ ಪುನರ್ವಸತಿಗಾಗಿ ಏನಾದರೂ ಕಾರ್ಯಕ್ರಮ ಹಮ್ಮಿಕೊಳ್ಳಲು ಎಲ್ಲರೂ ಮುಂದಾಗಬೇಕು. ಪಟಾಕಿ ಹಚ್ಚುವುದನ್ನು ಬಿಟ್ಟು ಉಳಿಸಿದ ಹಣವನ್ನು ಉಳಿತಾಯವೆಂದು ಭಾವಿಸದೇ ಈ ಉದ್ಯಮದಲ್ಲಿ ಸಿಲುಕಿ ನರಳುತ್ತಿರುವ ಸಾವಿರಾರು ಬಾಲ ಕಾರ್ಮಿಕರ ಕನಸುಗಳು ಕಮರುವ ಮೊದಲೇ ಅವರ ಭವಿಷ್ಯವನ್ನು ದೃಡಪಡಿಸಲು ವಿನಿಯೋಗಿಸ ಬೇಕು.
ಈ ಉತ್ತಮ ವಿಚಾರವನ್ನು ಇಲ್ಲಿ ಪ್ರಸ್ತುತಪಡಿಸಿದ್ದಾಕ್ಕಗಿ ಶ್ರೀಮತಿ ವೀಣಾ ಅನಂತ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು. 🙂
madam,your concept and social thinking is verygood,do u believe it or not i had zeroxed your article and distributed to 10 members, but one of my best friend what he said ” irodu obbale magalu,ake ashe na nanu yakri halumadodu,as a father i am not disxcharging my duty ,on many occasions because of my work and other pressure,at least let her be happy on this occasion with her crackers,i know it is temporaru satisfaction, but at least let her have it” andru,i kept mum,i feel this is purely a middle class problem,no labour family will be in a position to sphere money for crackers, but they also wander in front of the houses of rich,and search for crackers,veena madam your thinking and approach to to the reality of the life is very much astonishing and appreciating, i dont have any words, neevu aa pataki factorili kelasa mado makkala photo jotege jeevanta lekhana baredidderi,but iam surprising nimage ee thara alochane hyage barutte,ofcourse nanagantu pAtaki alergy, hagu adara shabhavantu untollerable. nimma lekhana estu mandi alochane badalayisuttoda gottilla, adre idu arthapoorna haagu manamuutuva avedane,but estujanaru artha madikoltaro, hagoo palistoro nanage gottilla,nimagu nimma chinategu diwali habbada subhashayagalu, nimminda,ee tharada belaku chelluva barahagalannu apeksisuuta,,, ee dil mange moore.
D.RAVI varma hospet
naavu pataki taruvudannu nillisiddeve.
ನಿಮ್ಮ ಮಾತಿಗೆ ನನ್ನದೂ ಒಂದು ಓಟು ಇದೆ
Like this initiative from schools and the family support.
ಸ್ನೇಹದಿಂದ ,ಆತ್ಮೀಯತೆಯಿಂದ ಪ್ರತಿಕ್ರಿಯೆ ಬರೆದವರಿಗೆಲ್ಲರಿಗೂ ಧನ್ಯವಾದಗಳು …
ರವಿ ವರ್ಮಅವರೆ ..,ನಿಮಗೇ ಸ್ಪೆಷಲ್ ಥ್ಯಾಂಕ್ಸ್ …ನೀವು xerox ಮಾಡಿ ಹಂಚಿದ ನಿಮ್ಮ ಕಾಳಜಿಗೆ ವಂದನೆ ,ಧನ್ಯವಾದಗಳು .
ನನ್ನ ಲೇಖನದ ಸಂದೇಶ ನಿಮಗೆ ತಲುಪಿದೆ .