’ದಿವಾಕರ್ ಸಾರಸ್ವತ ಲೋಕದ ಆಲ್ ರೌಂಡರ್’ – ಕುಂ ವೀ ಬರೀತಾರೆ

ಕುಂವೀ

ಎಸ್ ದಿವಾಕರ್ ಕಳೆದ ಮೂರುವರೆ ದಶಕಗಳಿಂದ ಕನ್ನಡದಲ್ಲಿ ಬರೆಯುತ್ತಿದ್ದಾರೆ. ಈ ಗೆಳೆಯನ ಆಸಕ್ತಿಯ ಟಿಸಿಲುಗಳು ಹತ್ತು ಹಲವು, ಇವರ ಬೇರುಗಳು ಜಗತ್ತಿನ ನೂರಾರು ಭಾಷೆಗಳ ಕಡೆಗೆಲ್ಲ ಹರಡಿವೆ, ಎಲ್ಲಾ ಮೂಲಗಳಿಂದ ದಕ್ಕಿದ ಅನನ್ಯತೆಯನ್ನು, ಜ್ಞಾನವನ್ನು ಅನುವಾದದ ಮೂಲಕ ಕನ್ನಡ ವಾಚಕರಿಗೆ ದಣಿವರಿಯದೆ ಉಣಬಡಿಸುತ್ತಿದ್ದಾರೆ. ಕ್ರೌರ್ಯ ಕನ್ನಡದ ಬಹುಮುಖ್ಯ ಕಥೆಗಳಲ್ಲೊಂದು. ಇವರ ಹಲವು ಕಥೆಗಳಲ್ಲಿ ಇದೂ ಒಂದು. ಒಂದೊಂದು ಓದಿಗೂ ಒಂದೊಂದು ಅನುಭವವನ್ನು ಕೊಡುವುದಲ್ಲದೆ ನಮ್ಮನ್ನು ಪುನಃ ಪುನಃ, ಚೇತನಗೊಳಿಸುತ್ತಲೇ ಇದು ಮುಂದುವರೆದಿದೆ, ಹಾಗೂ ಬೆಳೆಯುತ್ತಲೇ ಇದೆ. ದಿವಾಕರ್ ಎಷ್ಟು ಪ್ರಾಂಜಲ ಮುಕ್ತ ಮನಸ್ಸಿನ ಲೇಖಕರೆಂದರೆ ತಮ್ಮ ವಿಸ್ತಾರ ಜಾಗತಿಕ ಓದಿನ ತಿಳವಳಿಕೆಯನ್ನು ಅನುವಾದದ ಮೂಲಕ ಹಂಚಿಕೊಳ್ಳುತ್ತಲೇ ಇದ್ದಾರೆ.

ಸಿಂಗರ್, ಹೆಮಿಂಗವೆ, ಬೊರಿಸ್. ಕಾಫ್ಕಾ, ಕಾವಾಬಾಟಾ, ದೆನೀವಿ, ಮಾರ್ಕೇಸ್, ಮಹ್ಪೂಜ್ ಸೇರಿದಂತೆ ಜಗತ್ತಿನ ನೂರಾರು ಲೇಖಕರ ನೂರಾರು ಕಥೆಗಳನ್ನು ಹತ್ತಾರು ಕಾದಂಬರಿಗಳನ್ನು ಅನುವಾದಿಸಿದ್ದಾರೆ, ಕನ್ನಡದ ಅರಿವಿನ ಕ್ಷಿತಿಜವನ್ನು ವಿಸ್ತರಿಸಿದ್ದಾರೆ. ಇವರು ಅನುವಾದಿಸಿರುವ ‘ಜಗತ್ತಿನ ಅತಿ ಸಣ್ಣ ಕತೆಗಳು’ ಈ ಕೃತಿಯನ್ನು ನಾನು ಕೇವಲ ಓದುತ್ತಿಲ್ಲ, ದಿನಂಪ್ರತಿ ಪಾರಾಯಣ ಮಾಡುತ್ತಿರುವೆ, ಈ ಜಾಡಿನ ನನ್ನ ಹಲವು ವಿಭಿನ್ನ ಕಥೆಗಳು ಪ್ರಕಟವಾಗಿವೆ, ಅವೆಂದರೆ ಪರ್ಯಾವಸಾನ, ರುದ್ರಪ್ಪನ ಖಡ್ಗ, ಪಾಲು, ಸವಾರಿ. ಇಂಥ ಕಥೆಗಳ ಹಲವು ಬೀಜಗಳು ಮನಸ್ಸಿನಲ್ಲಿ ಮೊಳೆಯುತ್ತಿವೆ.

ಹೊಸ ಕಥೆಗಾರರು ಪ್ರಿಜಂ ಪ್ರಕಾಶನ ಪ್ರಕಟಿಸಿರುವ ಜಗತ್ತಿನ ಅತಿ ಸಣ್ಣ ಕತೆಗಳು, ಹಾಗೂ ಮಿತ್ರ ಗುರುಪ್ರಸಾದ್ ತಮ್ಮ ಆಕೃತಿ ಪ್ರಕಾಶನದಿಂದ ಪ್ರಕಟಿಸಿರುವ ಇವರ ‘ಹಾರಿಕೊಂಡು ಹೋದವನು’ ಈ ಪುಸ್ತಕಗಳನ್ನು ನೀವು ಓದಲೇಬೇಕು. ಇತ್ತೀಚಿಗೆ ನನ್ನನ್ನು ರೋಮಾಂಚನಗೊಳಿಸಿದ ದಿವಾಕರ್ ಅವರ ಮತ್ತೊಂದು ಕೃತಿಯೆಂದರೆ ‘ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ’ ಲೇಖಕರು ತಮ್ಮ ಈ ಕೃತಿಯನ್ನು ಪ್ರಬಂಧ ಸಂಕಲನವೆಂದು ಕರೆದಿದ್ದಾರೆ. ಆದರೆ ಇದು ಅವೆಲ್ಲಕ್ಕೂ ಮೀರಿದ ಕೃತಿ. ಈ ಸಂಕಲನದಲ್ಲಿರುವ ಹದಿನೆಂಟು ಲೇಖನಗಳು ಹದಿನೆಂಟು ರೀತಿಯ ತಿಳವಳಿಕೆಯನ್ನು ನೀಡುತ್ತವೆ, ಪ್ರಾಣಿಶಾಸ್ತ್ರ, ಸಂಗೀತ ಶಾಸ್ತ್ರ, ಮನೋವಿಜ್ಞಾನ, ನಿಘಂಟು ಕುರಿತಂತೆ ಅಪೂರ್ವ ಮಾಹಿತಿ ನೀಡುತ್ತವೆ, ಗಾಂಧೀಜಿಯವರ ಪ್ರಸಿದ್ಢ ಗಡಿಯಾರ ಯಾರಿಗೆ ತಾನೆ ತಿಳಿಯದು, ಅದಕ್ಕಿಂತ ಹೆಚ್ಚಿನ ಮಾಹಿತಿ ಇಲ್ಲಿದೆ,ಹಾಗೆ ಅನಕೊಂಡ ಕುರಿತಂತೆ ಸಹ.

ಅಷ್ಟೆ ಅಲ್ಲದೆ ರಾಜಾಜಿ ಬರೆದ ಒಳ್ಳೆಯ ಕಥೆ ಇದರಲ್ಲಿದೆ, ನಾವು ಅಂದುಕೊಂಡಿರುವುದೇ ಬೇರೆ, ದಿವಾಕರ್ ಇರುವುದೇ ಬೇರೆ, ಚಿತ್ರಕಲೆ, ಸಂಗೀತ ಕುರಿತಂತೆ, ಸುಪ್ರಸಿದ್ದ ವ್ಯಕ್ತಿಗಳ ಒಡನಾಟ, ಅಧ್ಯಯನ ಕುರಿತಂತೆ ಸರ್ವನ್ನೊಂದು ಮಾಹಿತಿಯ ಕಣಜ ಇದರಲ್ಲಿದೆ, ಈ ನಮ್ಮ ದಿವಾಕರ್ ಸಾರಸ್ವತ ಲೋಕದ ಆಲ್ ರೌಂಡರ್, ಇವರು ಬರೆದಿರುವುದು, ಅನುವಾದಿಸಿರುವುದು, ಬರೆಯಲಿರುವುದು ಎಲ್ಲಾ ಮೌಲಿಕವೆ. ಇಂಥ ಅಪೂರ್ವ ಬರಹಗಾರನಿಗೆ ಯಾವುದೇ ಪ್ರಶಸ್ತಿ, ಸೂಕ್ತಸ್ಥಾನಮಾನ ದೊರಕಿಲ್ಲದಿರುವುದು ಸಮಕಾಲೀನ ದುರಂತ, ವ್ಯಂಗ್ಯ, ಇದ್ಯಾವುದೂ ಬೇಡ, ಒಂದು ಒಳ್ಳೆಯ ವಿಮರ್ಶೆ, ಚರ್ಚೆ! ಹ್ಹು ಹ್ಹೂಂ ಇಲ್ಲವೇ ಇಲ್ಲ.

 

‍ಲೇಖಕರು avadhi

March 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

 1. sarala

  tumbida koda tulukuvudilla annovudakke Divakar avare saakshi. avarashtu tilidu konduvaru avara haage humility iruva vyaktigalu bahala bahala aparoopa. krishnaleeleyinda ramarajakke halavaaru asaktikara vishayagalannu interesting agi odugarige daatisuttade.

  ಪ್ರತಿಕ್ರಿಯೆ
 2. narayan raichur

  kumvee anisikegalannu sampoornavaagi anumodisi lekahanada koneya mooru saalugalau nijakkoo maarmikavagi moodive yendu helebayasutta ee hiriya geleyana “Krishna leeleyinda… ” odalu kutoohaliyaagiddene.

  ಪ್ರತಿಕ್ರಿಯೆ
 3. satyanarayan

  ಬೇಂದ್ರೆಯವರ ಬಾಯಿಂದ ಅವರ ಕವಿತೆಗಳನ್ನಂತೂ ನಾವು ಕೇಳಿರಲಿಲ್ಲ. ಆದರೆ, ದಿವಾಕರ ಅವರ ಬಾಯಿಂದ ಬೇಂದ್ರೆಯವರ ಕವಿತೆಗಳನ್ನು ಕೇಳುವ ಅವಕಾಶ ಒಮ್ಮೆ ಸಿಕ್ಕಿತ್ತು. ಅಷ್ಟೊಂದು ಅದ್ಭುತವಾಗಿ ಬೇಂದ್ರೆಯವರ ಕವಿತೆಗಳನ್ನು ವಾಚಿಸುವವರನ್ನು ನಾನು ಇದುವರೆಗೆ ಮತ್ತೆ ಕಂಡಿಲ್ಲ. ಧ್ವನಿಯ ಏರಿಳಿತದಿಂದಲೇ ಒಂದು ಅದ್ಭುತ ರಸಲೋಕವನ್ನು ಸೃಷ್ಟಿಸಿಬಿಡುತ್ತಾರೆ ದಿವಾಕರ್ ಅವರು.
  ಇನ್ನು ಪ್ರಶಸ್ತಿ ಪುರಸ್ಕಾರಗಳ ವಿಚಾರ. ಅದರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ನಮ್ಮ ವ್ಯವಸ್ಥೆಯ ದುರಂತವೇ ಅದು. ಅರ್ಹರನ್ನು ಹುಡುಕುವುದರಲ್ಲಿ, ಸಕಾಲದಲ್ಲಿ ಪ್ರಶಸ್ತಿ ಕೊಡುವುದರಲ್ಲಿ ಎಲ್ಲಿಯೂ ನಮ್ಮ ವ್ಯವಸ್ಥೆ ರಚನಾತ್ಮಕವಾಗಿಯೇ ಇಲ್ಲವೇ ಇಲ್ಲ. ರಾಜ್ಯೋತ್ಸವ ಪ್ರಶಸ್ತಿಯನ್ನು ಜಾತಿಯಾಧಾರಿತ ಮೀಸಲಾತಿಯಂತೆ ಹಂಚುವ ವ್ಯವಸ್ಥೆ ನಮ್ಮದು!! ನಾಚಿಕೆಗೇಡು….. ಪ್ರಶಸ್ತಿಯ ಆಯ್ಕೆಯಲ್ಲೂ ತಮ್ಮ ತೆವಲನ್ನು ತೀರಿಸಿಕೊಳ್ಳುವವರು ಇರುವವರೆಗೂ ಬದಲಾವಣೆ ಕನಸಿನ ಮಾತು

  ಪ್ರತಿಕ್ರಿಯೆ
 4. parashuram boner

  ಅವಧಿಯ ಮುಖಪುಟದಲ್ಲಿ ಪ್ರಕಟವಾಗಿರುವ ಫೋಟೋ ತುಂಬಾ ಚೆನ್ನಾಗಿದೆ ಸರ್‌. ಎಸ್‌. ದಿವಾಕರ್ ಬಗ್ಗೆ ಕುಂ.ವೀ. ಸರ್‌ ಬರೆದ ಲೇಖನ ತುಂಬಾ ಚೆನ್ನಾಗಿದೆ. ಅವಧಿ ದಿನದಿನವೂ ನೂತನವಾಗಿ ಬರುತ್ತಿದೆ. ಮುಖಪುಟದಲ್ಲಿ ಬಳಸುವ ಕೆಲ ಅಪರೂಪದ ಫೋಟೋಗಳು ತುಂಬಾ ಚೆನ್ನಾಗಿರುತ್ತವೆ.
  -ಪರಶುರಾಮ ಬೋನೇರ, ಪತ್ರಕರ್ತ, ಗಂಗಾವತಿ

  ಪ್ರತಿಕ್ರಿಯೆ
 5. kaligananath Gudadur

  Sir,
  You have pictured the life and works of S.Divakar much heartily. When I wrote my first story ‘Udiyalliya Uri’ and got the first prize for it in 1997, S.Divakar wrote a letter to me from Chennai. I followed his words now and then. I am indebted to him very much. Thank you very much for portraying a master of literature.
  -Kaligananath Gudadur

  ಪ್ರತಿಕ್ರಿಯೆ
 6. suma

  Sir, you are absolutely right. I too have read ‘jagatthina athi sanna kathegalu’ many times, it is a reference collection in many ways. His versatility reminds us of the old world scholars..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: