ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿನೇಶ್ ಮಡಗಾಂವ್ಕರ್ ಜೊತೆ ‘ಫಟಾ ಫಟ್’

ಪತ್ರಕರ್ತ ದಿನೇಶ್ ಮಡಗಾಂವ್ಕರ್ ಹೊಸ ಕಥಾ ಸಂಕಲನದೊಂದಿಗೆ ನಮ್ಮ ಮುಂದೆ ಬಂದಿದ್ದಾರೆ.

ಅವರ ‘ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು’ ಸಾಕಷ್ಟು ಸುದ್ದಿ ಮಾಡಿದೆ.

ಕೃತಿಯ ಸಂಭ್ರಮದಲ್ಲಿದ್ದ ಅವರನ್ನು ‘ಅವಧಿ’ ಫಟಾ ಫಟ್ ಮಾತಿಗೆಳೆಯಿತು.

ಗೆಂಡೆಹಳ್ಳಿ ರಾಮ ವನವಾಸಕ್ಕೆ ಏಕೆ ಹೋಗಿದ್ದು ?

 ಈಗಿರೋ ಪರಿಸ್ಥಿತಿಯಲ್ಲಿ ನಾಡನಲ್ಲಿ ಇರುವುದಕ್ಕಾಗಲ್ಲಾ ಅದಕ್ಕೆ.

ಮೊದಲ ಪುಸ್ತಕ ಬರೆದ ಅನುಭವ ಹೇಗಿತ್ತು ?

‌ ಇದು ತುಂಬಾ ವರ್ಷಗಳಿಂದ ನಾನು ಆಗಾಗ ಬರೆದ ಕಥೆಗಳ ಪುಸ್ತಕ. ತುಂಬಾ ಕುತೂಹಲ ಇತ್ತು ಮತ್ತು ಇದೆ.

ಈ ಕಥಾಸಂಕಲನಕ್ಕೆ ಸ್ಪೂರ್ತಿ ಏನು ?

ಸಮಾಜದಲ್ಲಿ ತುಂಬಾ ಕಾಡುವಂತ ಜಾತಿ, ಧರ್ಮ. ಶ್ರೀಮಂತ ಬಡವರ ನಡುವಿನ ವ್ಯತ್ಯಾಸ ಹಾಗೂ ನಾನು ನೋಡಿರುವ ಕೆಲವು ಘಟನೆಗಳು ಮತ್ತು ವ್ಯಕ್ತಿತ್ವಗಳು.

ಗೆಂಡೆಹಳ್ಳಿ ಎಲ್ಲಿದೆ ?

 ಗೆಂಡೆಗಳ್ಳಿ ಎಲ್ಲರ ಮನಸಲ್ಲಿದೆ.

ಮುಂದಿನ ಕೃತಿ ಯಾವುದು ?

 ಡಿ.ಹೆಚ್.ಲಾರೆನ್ಸ್ ಅವರ ‘ರಾಕಿಂಗ್ ಹಾರ್ಸ್ ವಿನ್ನರ್’ ಎನ್ನುವ ಇಂಗ್ಲೀಷ್ ಕಥೆಯನ್ನ ಕನ್ನಡಕ್ಕೆ ಅನುವಾದ ಮಾಡಿ ಆಗಿದೆ. ಅದನ್ನ ಪ್ರಕಟಿಸಬೇಕು.

‍ಲೇಖಕರು Avadhi

1 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading