ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ದಯೆಯಿಲ್ಲದ ಲೋಕಕ್ಕೆ ಅರುಣಾ ವಿದಾಯ’ – ನಾ ದಿವಾಕರ

ನಾ ದಿವಾಕರ

ಮಾನವನ ಬದುಕೇ ಜೀವನ್ಮರಣದ ನಡುವಿನ ಒಂದು ಸಂಘರ್ಷದ ನೆಲೆಯಲ್ಲಿ ರೂಪುಗೊಳ್ಳುತ್ತದೆ. ಬದುಕುವ ಇಚ್ಚೆ ಇಲ್ಲದೆ ಹೋಗಿದ್ದಲ್ಲಿ ಬಹುಶಃ ಮಾನವ ಸಮಾಜ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿರುತ್ತಿತ್ತು. ಕೊನೆಯ ಉಸಿರಿರುವವರೆಗೂ ಜವರಾಯನೊಡನೆ ಹೋರಾಡಲು ಬಯಸುವ ಮಾನವ ಜೀವಿಗೆ ಬದುಕೆಂದರೆ ಪ್ರಿಯ. ಏಕೆಂದರೆ ಇದು ಆಕಸ್ಮಿಕವಾಗಿ ಒದಗಿಬಂದ ಅವಕಾಶ. ಸಾವನ್ನು ಸಂತೋಷದಿಂದ ಸ್ವೀಕರಿಸುವವರೂ ಒಂದು ಕ್ಷಣ ತಾನು ಮತ್ತೊಮ್ಮೆ ಹಿಂದಿರುಗಿ ಬರಲಾರೆ ಎಂಬ ಭೀತಿಯಿಂದ ದುಃಖಿಸುವುದು ಸಹಜ. ಇಂತಹ ಮಾನವ ಸಮಾಜದಲ್ಲಿ ತನ್ನೆಲ್ಲಾ ದೈಹಿಕ-ಮಾನಸಿಕ ಶಕ್ತಿಯನ್ನೂ ಕಳೆದುಕೊಂಡು, ನಿಷ್ಕ್ರಿಯತೆಯಿಂದ ಬಳಲುತ್ತಾ ಪರಾವಲಂಬಿಯಂತೆ ಉಸಿರು ಹಿಡಿದು ಬದುಕುತ್ತಿರುವ ರೋಗಿಗೆ ಬದುಕುವ ಹಕ್ಕು ಇದೆಯೋ ಇಲ್ಲವೋ ಎಂಬ ಜಿಜ್ಞಾಸೆ ಮಾನವ ಸಮಾಜವನ್ನು ಬಹುಕಾಲದಿಂದ ಕಾಡುತ್ತಲೇ ಇದೆ.

ಕಳೆದ 42 ವರ್ಷಗಳಿಂದ ಇಹಲೋಕದ ಪರಿವೆಯೇ ಇಲ್ಲದೆ ಬದುಕಿನೊಂದಿಗೆ ಹೋರಾಡುತ್ತಿದ್ದ 65 ವರ್ಷದ ಮಹಿಳೆ ಅರುಣಾ ಶಾನಭಾಗ್ ಕೊನೆಗೂ ವಿದಾಯ ಹೇಳಿದ್ದಾರೆ. ಲೌಕಿಕ ಜಗತ್ತಿಗೆ ಅರುಣಾ ಬದುಕಬೇಕೋ ಬೇಡವೋ ಎಂಬ ಜಿಜ್ಞಾಸೆಯೇ ಮುಖ್ಯವಾಗಿತ್ತು. ಆದರೆ ಅರುಣಾಳಿಗೆ ಲೌಕಿಕ ಜಗತ್ತಿನ ಪರಿವೆಯೇ ಇರಲಿಲ್ಲ. ಕಣ್ತೆರೆದು ನೋಡುತ್ತಿದ್ದರೂ ಏನೂ ಕಾಣುತ್ತಿರಲಿಲ್ಲ್ಲ. ಬಾಯಿ ತೆರೆಯುತ್ತಿದ್ದರು ಏನನ್ನೂ ಸೇವಿಸಲಾಗುವುದಿಲ್ಲ. ಮಾತಿಗೆ ಮೌನವಾಗಿ ಪ್ರತಿಕ್ರಯಿಸುತ್ತಿದ್ದರು ಆದರೆ ಏನನ್ನೂ ಗ್ರಹಿಸುತ್ತಿರಲಿಲ್ಲ.. ಇದನ್ನು ವೈದ್ಯಕೀಯ ಭಾಷೆಯಲ್ಲಿ ಇದನ್ನು ಕಜಡಿಟಚಿಟಿಜಟಿಣ ತಜರಜಣಚಿಣತಜ ಣಚಿಣಜ ಎಂದು ಕರೆಯಲಾಗುತ್ತದೆ. ಅಂದರೆ ಹೆಚ್ಚು ದಿನ ಇಟ್ಟರೆ ಕೊಳೆತುಹೋಗಬಹುದಾದ ತರಕಾರಿಯಂತೆ ಎಂದು ಅಥರ್ೈಸಬಹುದು. ಆದರೆ ವೈದ್ಯರ ಪ್ರಕಾರ ಆಕೆಯ ಮಿದುಳು ಸತ್ತಿರಲಿಲ್ಲ. ಹಾಗಾಗಿ ಆಕೆಯನ್ನು ಜೀವಂತ ಶವ ಎಂದು ಪರಿಗಣಿಸುವಂತೆಯೂ ಇಲ್ಲ. ಸಹೋದ್ಯೋಗಿಯೊಬ್ಬನ ಕಾಮುಕ ದೃಷ್ಟಿಗೆ ಬಲಿಯಾದ ಅರುಣಾ ಶಾನಭಾಗ್ಗೆ ಕಳೆದ 40 ವರ್ಷಗಳಿಂದ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುತ್ತಿದ್ದ ಕೆಎಲ್ಇ ಆಸ್ಪತ್ರೆಯ ಸಿಬ್ಬಂದಿಯ ಪಾಲಿಗೆ ಆಕೆ ಒಬ್ಬ ಅಥಿತಿಯಾಗಿದ್ದಳು. 1966 ಹೊನ್ನಾವರದ ಹಳದಿಪುರದಲ್ಲಿ ಜನಿಸಿದ ಅರುಣಾ ಶಾನಭಾಗ್ ಮುಂಬೈನ ಕೆಎಲ್ಇ ಆಸ್ಪತ್ರೆಯಲ್ಲಿ ನಸರ್್ ವೃತ್ತಿಯಲ್ಲಿದ್ದರು. 1973ರ ನವಂಬರ್ 27ರಂದು ವಾಡರ್್ಬಾಯ್ ಸೋಹನ್ಲಾಲ್ನಿಂದ ಅರುಣಾ ಮೇಲೆ ಅತ್ಯಾಚಾರ ನಡೆದಿತ್ತು. ಸರಪಳಿಯಿಂದ ಕತ್ತು ಬಿಗಿದ ಕಾರಣ ಅರುಣಾಗೆ ಮಾನಸಿಕ ಸ್ಥಿಮಿತ ನಷ್ಟವಾಗಿತ್ತು. ನಂತರ ಸೋಹನ್ಗೆ ಕೇವಲ ಏಳು ವರ್ಷಗಳ ಸಜೆ ಆದರೂ ಅತ್ಯಾಚಾರ ಆರೋಪದಿಂದ ಮುಕ್ತನಾಗಿದ್ದ. ಇಲ್ಲಿ ಉದ್ಭವಿಸುವುದು ಅರುಣಾ ಅವರ ಬದುಕು ಸಾವಿನ ಪ್ರಶ್ನೆಯಲ್ಲ.
ಭಾರತದ ಸೇನಾ ಪಡೆಗಳ ದೌರ್ಜನ್ಯವನ್ನು ವಿರೋಧಿಸಿ ಕಳೆದ ಹದಿನಾಲ್ಕು ವರ್ಷಗಳಿಂದ ಉಪವಾಸ ನಡೆಸುತ್ತಿರುವ ಇರೋಮ್ ಶಮರ್ಿಳಾ ಒಂದು ಬದಿಯಲ್ಲಿ ಮಹಿಳಾ ಆಕ್ರಂದನದ ಸಂಕೇತವಾಗಿ ಕಂಡರೆ ಅರುಣಾ ಶಾನಭಾಗ್ ಮತ್ತೊಂದು ಮಜಲಿನಲ್ಲಿ ಸಾಂಕೇತಿಕವಾಗಿ ನಿಲ್ಲುತ್ತಾರೆ. ಮನೋರಮಾ ಎಂಬ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಸೇನಾ ಸಿಬ್ಬಂದಿಯೂ ಶಿಕ್ಷೆಗೊಳಗಾಗಿಲ್ಲ. ಅರುಣಾ ಮೇಲೆ ದೌರ್ಜನ್ಯ ಎಸಗಿ ಹತ್ಯೆ ಮಾಡಲೆತ್ನಿಸಿ, ಅರೆಜೀವವನ್ನಾಗಿ ಮಾಡಿದ ಆರೋಪಿಗೂ ಶಿಕ್ಷೆಯಾಗಲಿಲ್ಲ. ಇದು ನಮ್ಮ ಸಾಮಾಜಿಕ ಚೌಕಟ್ಟಿಗೆ ಕಳಂಕವಲ್ಲವೇ ? ಸಂವಿಧಾನಕ್ಕೆ ಕಳಂಕವಲ್ಲವೇ ? ನಾಗರಿಕ ಪ್ರಜ್ಞೆಗೆ ಕಳಂಕವಲ್ಲವೇ ? ನ್ಯಾಯ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ದೇಶವ್ಯಾಪಿ ಚರ್ಚೆ ನಡೆಯುತ್ತಿದೆ. ಹತ್ತಾರು ವರ್ಷ ಕಳೆದರೂ ಒಂದು ಪ್ರಕರಣದ ಇತ್ಯರ್ಥವಾಗುವುದಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಆದರೆ ಅರುಣಾ ಶಾನಭಾಗ್ ಪ್ರಕರಣ, ಮನೋರಮಾ ಪ್ರಕರಣ ಶೀಘ್ರವಾಗಿ ಇತ್ಯರ್ಥವಾಗುತ್ತವೆ. ಏಕೆ ಹೀಗೆ ? ಇದು ನಮ್ಮ ಸಮಾಜ, ಸಂವಿಧಾನ, ನಾಗರಿಕ ಪ್ರಜ್ಞೆ, ನ್ಯಾಯಾಂಗ ವ್ಯವಸ್ಥೆ ಮತ್ತು ಸಾಮಾಜಿಕ ಚೌಕಟ್ಟು ಪುರುಷ ಪ್ರಧಾನ ಮನಸ್ಥಿತಿಯಲ್ಲಿರುವುದನ್ನು ಸೂಚಿಸುವುದಿಲ್ಲವೇ ?

ಅಂದು ದುರಾಚಾರಿಯೊಬ್ಬನಿಂದ ಆಕ್ರಮಣಕ್ಕೊಳಗಾದ ಅರುಣಾ 42 ವರ್ಷಗಳ ಸಜೆ ಅನುಭವಿಸಿದ್ದಾಳೆ. ಆದರೆ ಆಕೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ಶಿಕ್ಷೆ ಸಜೆ ಆಗಲಿಲ್ಲ. ಹೆಚ್ಚೆಂದರೆ ವಿಹಾರವಾಯಿತಷ್ಟೆ. ಅರುಣಾ ಇಂದು ವಿಮೋಚನೆ ಪಡೆದಿದ್ದಾಳೆ. ತನ್ನ ಮೇಲೆ ನಡೆದಿರುವ ಆಕ್ರಮಣದ ಪರಿವೆಯೂ ಆಕೆಗಿರಲಿಲ್ಲ. ಅರುಣಾಳ ಪರವಾಗಿ ದೇಶಾದ್ಯಂತ ವಿಭಿನ್ನ ದನಿಗಳು ಕೇಳಿಬಂದವು. ಆಕೆ ಬದುಕಬೇಕು ಎಂಬ ಕೂಗು ಮುಗಿಲು ಮುಟ್ಟಿತ್ತು. ಈಗ ಎಲ್ಲವೂ ಮೌನ. ಅರುಣಾ ಅಥವಾ ಆಕೆಯಂತೆಯೇ ಅತ್ಯಾಚಾರಕ್ಕೊಳಗಾಗಿ ನ್ಯಾಯ ದೊರಕದೆ ನೋವನ್ನು ಅನುಭವಿಸುತ್ತಿರುವವರ ಆಕ್ರಂದನ ಮತ್ತು ಅಳಲು ಸದಾ ಅರಣ್ಯ ರೋದನವೇ ಆಗಿರುವ ದೇಶದಲ್ಲಿ ಅರುಣಾ ಪುರುಷ ಸಮಾಜದ ದೌರ್ಜನ್ಯ ಮತ್ತು ಪ್ರಭುತ್ವದ ನಿಷ್ಕ್ರಿಯತೆಗೆ ಸಂಕೇತವಾಗಿ ನಿಲ್ಲುತ್ತಾಳೆ. ಪ್ರಜ್ಞಾವಂತ ಸಮಾಜ, ನ್ಯಾಯಾಂಗ ಹಾಗು ದೇಶದ ಪ್ರಭುತ್ವ ಕೂಡಲೇ ಕೊಲ್ಲಬೇಕಿರುವುದು ಅರುಣಾ ಪ್ರಕರಣದ ಹಿಂದಿರುವ ಕ್ರೌರ್ಯವನ್ನು, ಪುರುಷ ಸಮಾಜದ ದೌರ್ಜನ್ಯವನ್ನು. ಇದು ಇಡೀ ಪ್ರಕರಣದ ಸಂದೇಶ.

‍ಲೇಖಕರು G

20 May, 2015

1 Comment

  1. ಅಕ್ಕಿಮಂಗಲ ಮಂಜುನಾಥ

    ಲೇಖನ ಮನಸ್ಸನ್ನು ಕಲಕುವಂತ್ತಿದೆ.ಹುಟ್ಟಿದ ದಿನಾಂಕ ತಪ್ಪಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading