ನೀವು ನೋಡಲೇ ಬೇಕು…
ಟಿ ಕೆ ದಯಾನಂದ್
ಇಂಡಿಯಾದ ಹೊಸ ತಲೆಮಾರಿನ ಅದ್ಭುತ ನಿರ್ದೇಶಕ “ಬಾಲಾ” ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ತಲ್ಲಣಗಳನ್ನು ಸೆಲ್ಯುಲಾಯಿಡ್ ತೆರೆಯ ಮೇಲೆ ಚಿತ್ರಗಳಾಗಿ ರೂಪಿಸುವುದರಲ್ಲಿ ಸಿದ್ಧಹಸ್ತರು. ಅವರ ಸೇತು, ಪಿತಾಮಗನ್ ಚಿತ್ರಗಳು ಕನ್ನಡಕ್ಕೂ ರಿಮೇಕಾಗಿವೆ. ನಾನ್ ಕಡವುಳ್ ಮತ್ತು ಅವನ್ ಇವನ್ ನಂತರ ಬಾಲಾ 1939ರಲ್ಲಿ ಬ್ರಿಟಿಷರ ಒಡೆತನದಲ್ಲಿದ್ದ ಟೀ ಎಸ್ಟೇಟೊಂದರಲ್ಲಿ ಗುಲಾಮಗಿರಿಯ ಕೂಲಿಯಲ್ಲಿ ಬಂಧಿಗಳಾಗಿದ್ದ ತಳವರ್ಗದವರ ನೈಜಕಥೆಯನ್ನು ಆಧರಿಸಿ “ಪರದೇಸಿ” ಎಂಬ ಹೊಸ ಚಿತ್ರವನ್ನು ಕಟ್ಟಿದ್ದಾರೆ. ಕನ್ನಡದ ನಟ ಮುರಳಿಯವರ ಮಗ ಅಥರ್ವ ನಾಯಕನಾಗಿರುವ ಈ ಚಿತ್ರದ ಟ್ರೈಲರ್, ಕೆಮೆರಾವರ್ಕ್ ಎರಡೂ ಬಾಲಾ ತಾಕತ್ತಿಗೆ ಹಿಡಿದ ಕನ್ನಡಿಯಂತಿವೆ. ಟೇಕ್ ಎ ಲುಕ್.
ಚಿತ್ರದ ಟ್ರೇಲರ್ ಗಾಗಿ ಇಲ್ಲಿ ಕ್ಲಿಕ್ಕಿಸಿ :






ಕಲಕಿ ಹೋಯಿತು ಮನಸು…
waiting. thanks for the info.