ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಥಿಯೇಟರ್‌ನಲ್ಲಿ ’ಅಂದರ್ – ಬಾಹರ್’ ನಡುವೆ – ವಿನಯ್ ಭಾರದ್ವಾಜ್

–  ವಿನಯ್ ಭಾರದ್ವಾಜ್

ಹಾಗೊಮ್ಮೆ ಈ ಚಿತ್ರ ನೋಡಿದ್ದೇ ಆದ್ರೆ, ಅದು ಕೇವಲ ಪಾರ್ವತಿ ಮೆನನ್ ಗಾಗಿಯೇ ಎಂದು ದಿಟ್ಟ ನಿರ್ಧಾರ ಮಾಡಿಯೇ ಆಗಿತ್ತು! ಹಾಗು ಆಕೆ ಮಾಡಿದ ಚಿತ್ರಗಳಲ್ಲಿ ಆಕೆಯೇ ನನ್ನ ಪಾಲಿಗೆ ಸೂಪರ್ ಹಿಟ್ ವಸ್ತು…! ಹಾಗಾಗಿ ನಾನು ಈ ಚಿತ್ರ ನೋಡಲೇ ಬೇಕಿತ್ತು, If not at least I am destined to…!!
ಶಿವರಾಜ್ ಕುಮಾರ್ ಅಟ್ ಲೀಸ್ಟ್ ಹತ್ತು ವರ್ಷಗಳಿಗೆ ಒಮ್ಮೆಯಾದರೂ ಒಂದೊಳ್ಳೆ ಚಿತ್ರ ಮಾಡ್ತಾರೆ ಹಾಗು ಅದು ಸೂಪರ್ ಹಿಟ್ ಆಗತ್ತೆ ಎಂದುಕೊಂಡಿದ್ದೆ. ಥೇಟ್ ಶ್ರೀ ಕೃಷ್ಣ, ಭಗವದ್ಗೀತೆಯಲ್ಲಿ, ‘ಸಂಭವಾಮಿ…ಯುಗೇ..ಯುಗೇ..” ಎಂದು ಪ್ರಾಮಿಸ್ ಮಾಡಿದ ಹಾಗೆ. ಶಿವರಾಜ್ ಕುಮಾರ್‌ ಏನೂ ಪ್ರಾಮಿಸ್ ಮಾಡಿರ್ಲಿಲ್ಲ, ಆದ್ರೂ ಅವ್ರ ‘ಕ್ಯಪಾಟಿಟಿ’ ಗಮನಿಸಿ ಹಾಗೆಂದುಕೊಳ್ಳೋದು ಸಹ ತಪ್ಪಲ್ಲ ಅನಿಸುತ್ತಿತ್ತು. ಇಲ್ಲಿ ನೋಡಿದರೆ, ಇತ್ತ ಕೃಷ್ಣನಂತಹ ಕೃಷ್ಣನೂ ಹುಟ್ಟುತ್ತಿಲ್ಲ, [ಆತನಗಿಂತಲೂ ಮಿಗಿಲಾದ ದೈವಾಂಶ ಸಂಭೂತರೂ, ದೇವತಾ ಪುರುಷರು ಇದ್ದಾರೆ, ಅದು ಬೇರೆ ವಿಷ್ಯ!], ಮಗದೊಂದೆಡೆ ಶಿವರಾಜ್ ಕುಮಾರ್ ಮಾಡಿದ ಕಥೆಗಳು ಯಾಕೋ ಇಷ್ಟವೂ ಆಗ್ತಿಲ್ಲ…! ಕೃಷ್ಣ…ಕೃಷ್ಣ…!!

ಅಲ್ಲಿ ನಾನು ‘ಅಂದರ್’ ಆದದ್ದು ಆಕಸ್ಮಿಕವಲ್ಲದಿದ್ದರೂ, ‘ಬಾಹರ್’ ಆಗಲೇ ಬೇಕಾದ ನಿಜವಾದ ಅವಶ್ಯಕತೆ ಚಿತ್ರ ಶುರುವಾದ ಸ್ವಲ್ಪ ಹೊತ್ತಿಗೆ ಅನಿಸಿದ್ದು ಮಾತ್ರ ದುರಂತ…! ಚಿತ್ರ ಕಥೆಯಲ್ಲಿ ದುರಂತವಿರಲಿ, ಬೇಡ ಅನ್ನೊಲ್ಲ, ಆದ್ರೆ ಚಿತ್ರಕ್ಕೆ ಹೋಗಿದ್ದೆ ದುರಂತವೆನಿಸಿದರೆ….?! ಅದು ಪ್ರೇಕ್ಷಕರ ದೌರ್ಭಾಗ್ಯ ಮಾತ್ರ… ಅದಕ್ಕೆ ನಿರ್ದೇಶಕರು, ಕಲಾವಿದರು ಯಾರೂ ಜವಾಬ್ದಾರರಲ್ಲ!! ನಿಮ್ಮ ಟಿಕೇಟು ನಿಮ್ಮ ಕೈಯಲ್ಲಿದೆ!
ಪ್ರತಿ ಬಾರಿ ಹೊಸ ನಿರ್ದೇಶಕನೊಬ್ಬ ಶಿವರಾಜ್ ಕುಮಾರ್ ನಂತಹ ಕಲಾವಿದರನ್ನ ಆಯ್ದುಕೊಂಡಾಗ ಅಥವ ಆ ಚಿತ್ರದ ತಾಂತ್ರಿಕತೆಯ ಬಗ್ಗೆ ಹೇಳಿಕೊಂಡಾಗ, ಒಂದೊಳ್ಳೆ ಪಾತ್ರ ವರ್ಗ ಆಯ್ದುಕೊಂಡಾಗ, ನನ್ನಂಥವನಲ್ಲಿ, ‘ ಈ ಫಿಲಂ ಗೆದ್ದೇ ಗೆಲ್ಲತ್ತೆ…’ ಅನ್ನೋ ನಂಬಿಕೆ ಹುಟ್ಟುಹಾಕತ್ತೆ. ಒಂದು ಪ್ರಯತ್ನಕ್ಕೆ ಗೆಲುವು ಅವಶ್ಯಕ, Because ಗೆಲುವು ಒಂದು ಟ್ರೆಂಡ್ನ ಸೃಷ್ಟಿಸಬಲ್ಲದು, ಜೊತೆಗೆ ಒಂದಿಷ್ಟು ಭರವಸೆ. ಆದ್ರೆ, ಒಂದು ಕಾಲದ ಹ್ಯಾಟ್ರಿಕ್ ಹೀರೋ, ವೀಕೆಂಡುಗಳಲ್ಲೂ ಕೇವಲ ಬೆರಳೆಣಿಕೆ ಮಂದಿಯನ್ನಷ್ಟೇ ಥಿಯೇಟರ್ಗೆ ಎಳೆದು ತರಲು ಸಾಧ್ಯವೆಂದರೆ, ಕಲಾವಿದ ತಾನು ತನ್ನ ಪಾತ್ರವನ್ನು ಆಯ್ಕೆ ಮಾಡಿಕೊಂಡ ಸಾಫಲ್ಯತೆಗೆ ಒಂದು ಅನುರೂಪ ಪ್ರತಿಫಲನ…! ಇಂಥ ಎಲ್ಲಾ ನಂಬಿಕೆಗಳ ನಡುವೆಯೂ ಪ್ರೇಕ್ಷಕ ಮಾತ್ರ ತನ್ನ ಮೂಲಭೂತ ಕಲೆಯಾದ ‘ ಥಿಯೇಟರ್ ಲಿ ನಿದ್ರೆ ಮಾಡುವ ವಿದ್ಯೆ’ ಮಾತ್ರ ಮರೀಬಾರ್ದು! “ಯಾರಿಗ ಹೇಳೋಣಾ ನಮ್ಮಾ ಪ್ರಾಬ್ಲಮ್ಮೋ….”!
ಈ ಚಿತ್ರವನ್ನು ನೋಡಲೇಬೇಕಾದ ಕಾರಣಗಳು ಅಂದರೆ,That is ಪಾರ್ವತಿ ಮೆನನ್….! She is a complete beauty…! ಈ ಚಿತ್ರದ ಕಥೆಯ ಜೀವಾಳ ಅನ್ನಿಸುವ ರೋಲ್ ನಲ್ಲಿ ಪಾರ್ವತಿ ಅಭಿನಯಿಸಿದ್ದಾರೆ ಹಾಗು ಬಹುಶಃ ಆಕೆಯೇ ತನ್ನ ದ್ವನಿಗೆ ಡಬ್ ಮಾಡಿರಬಹುದೆಂಬ ನನ್ನ ಊಹೆಯಿದೆ. ಕನ್ನಡ ಆಕೆಯೇ ಮಾತಿನಲ್ಲಿ ಸ್ಪಷ್ಟವಿದೆ. ಅವಳ ಅಭಿನಯದಲ್ಲಿ ಒಬ್ಬಳು ಪಕ್ವ ಕಲಾವಿದೆ ಸಿಗುತ್ತಾಳೆ. ವಿಜಯ್ ಪ್ರಕಾಶ್ ರು ನೀಡಿದ ಹಾಡುಗಳು ಇಷ್ಟವಾಗುತ್ತದೆ. ಚಿತ್ರದಲ್ಲಿ ನಾಯಕ-ನಾಯಕಿಗೆ ಕಣ್ಣಿಗೆ ಕಾಣದ ಅರುಂಧತಿ ನಕ್ಷತ್ರ ತೋರಿಸಿ ನಂಬಿಸುತ್ತಾನೆ. ಪ್ರೇಕ್ಷಕರು ಚಿತ್ರದ ಶೀರ್ಷಿಕೆಗೆ ಮಾರು ಹೋಗಿ, ಚಿತ್ರದಲ್ಲಿ ಏನೋ ಇರಬಹುದೆಂದು ನಂಬುತ್ತಾರೆ….!!
ಇವೆಲ್ಲಾ ಏನೇ ಇರಲಿ, ಎಲ್ಲಾ ಅಭಾಸಗಳ ನಡುವೆಯೂ, ಕನ್ನಡ ಚಿತ್ರಗಳು ಗೆಲ್ಲಬೇಕು. ಪಕ್ಕದ ಮನೆಯ ಆನೆ ಪಟಾಕಿಗಿಂತ ನಮ್ಮನೆಯ ಟುಸ್ಸ್ ಪಟಾಕಿಯೇ ಮೇಲು ಎಂದು ಸಮಾಧಾನ ಹೊಂದಬೇಕು! ಹಾಗು ಎಲ್ಲಕ್ಕೂ ಮಿಗಿಲಾಗಿ ಅಭಿಮಾನಿ ದೇವಾನು-ದೇವತೆಯರ ಆಶೀರ್ವಾದವಿರಬೇಕು….!
 

‍ಲೇಖಕರು avadhi

9 April, 2013

1 Comment

  1. laxmikant mirajakar

    Nij nimm anisike.parvathigagiye e cinema nodabekagide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading