ಕಾಯುವೆಯಾ ಕಾಲ ನನಗಾಗಿ ಒಂದಿಷ್ಟು ಹೊತ್ತು
– ಅ೦ಜಲಿ ರಾಮಣ್ಣ
ಸೆರಗತುದಿಗೆ ಜೋತು ಬಿದ್ದ ಕಂದನ
ಸುಟ್ಟ ರೊಟ್ಟಿ ಒಲ್ಲೆಯೆನುವ ಅವರಪ್ಪನ
ನಿದ್ದೆಗಣ್ಣಿಗೆ ಲಾಲಿ ಹಾಡುವುದನ್ನು
ಕತ್ತಲಲ್ಲಿ ಕೈತಾಗಿಸಿ ಬೇಡುವುದನ್ನು
ಇಗೋ ಇದೀಗ ತೀರಿಸಿ ಬಂದೆ;
ಕಾಯುವೆಯಾ ಕಾಲ ನನಗಾಗಿ ಒಂದಿಷ್ಟೇ ಹೊತ್ತು
ಬೇಕಿದೆ ನನಗೂ, ಕನಸ ಹೊದೆಯುವುದು
ಮನಸ ಗೆಲುವುದು
ಹಬ್ಬದ ಹೊಸ್ತಿಲಲಿ ನೀರೊಲೆ ಒಟ್ಟುವುದು
ಗಾಜಿನ ಬಳೆಗೆ ಕೈ ಮುನ್ನೀಡುವುದು
ಧಾವಂತದಲ್ಲೂ ದಿಗಂತ ಮುಟ್ಟುವುದು
ನನಗೂ ಬೇಕಿದೆ,
ಕಾಯುವೆಯಾ ಕಾಲ ನನಗಾಗಿ ಇನ್ನೊಂದಿಷ್ಟು ಹೊತ್ತು…..
]]>
….ತ೦ದೆ ಮಗುವ ತಬ್ಬಿದಾಕೆ..
ನಿಮಗೆ ಇವೂ ಇಷ್ಟವಾಗಬಹುದು…





ಇದು ಎಷ್ಟು ಚೆನ್ನಾಗಿದೆ ಅಂದ್ರೆ ಇಷ್ಟೇ ಇಷ್ಟು ಬರೆದು ಕೈ ಜಾಡಿಸಿ ಬಿಟ್ಟರಲ್ಲಾ ಅಂತ ಬರೆದವರ ಮೇಲೆ ಸಿಟ್ಟು ಬರ್ತಿದೆ:)
kaayuveyaa kaala nanagagi innodistu ottu,wonderful. nimma kavyada satva, nijakku manamutti,mudaneeduvantide.
d.ravi varma hosapete
“ಇದು ಎಷ್ಟು ಚೆನ್ನಾಗಿದೆ ಅಂದ್ರೆ ಇಷ್ಟೇ ಇಷ್ಟು ಬರೆದು ಕೈ ಜಾಡಿಸಿ ಬಿಟ್ಟರಲ್ಲಾ ಅಂತ ಬರೆದವರ ಮೇಲೆ ಸಿಟ್ಟು ಬರ್ತಿದೆ:)” – Ashok Shettar sir u r 100% right..