ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿಯವರನ್ನೇ ಸ್ಪರ್ಶ ಮಾಡಿದಷ್ಟು ಸಂತೋಷ…

ಅನಂತ್ ಶಾಂಡ್ರೇಯ

ನಾನು ಈಗ ಹೇಳ ಹೊರಟಿರುವುದು, ಡೇರ್ ಡೆವಿಲ್ ಮುಸ್ತಫಾ ಸಿನಿಮಾ ಬಗ್ಗೆ ಅಲ್ಲ, ತೇಜಸ್ವಿಯವರ ಕಟ್ ಔಟ್ ಮುಂದೆ ನಿಂತಿರುವ ಕಾರಿನ ಬಗ್ಗೆ ಈ ಕಾರಿಗೊಂದು ಕಥೆ ಇದೆ, ನಿಮ್ಮಲ್ಲಿ ಯಾರಾದರೂ ಊಹೆ ಮಾಡಿದ್ದರೆ ನಿಜ ಇದು ತೇಜಸ್ವಿಯವರ ಕಾರು!!! 2003 ರ ಮಾಡೇಲ್ಲಿನ ಈ ಓಪಲ್ ಆಸ್ಟ್ರಾ ಕಾರು ತೇಜಸ್ವಿಯವರ ಓಡಾಟದ ಸಂಗಾತಿಯಾಗಿತ್ತು. ಬೆಳ್ಳಿ ಬಣ್ಣದ,9999 ಎಂಬ ಫ್ಯಾನ್ಸಿ ನಂಬರ್ ಇರುವ ಈ ಕಾರನ್ನು 2003 ರಲ್ಲಿ ತೇಜಸ್ವಿ ಖರೀದಿ ಮಾಡಿದ್ದರು, ತೇಜಸ್ವಿಯವರಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ನ ಹುಚ್ಚಿತ್ತೆ? ಈ ನಂಬರ್ ಪಡೆಯಲು ಎಷ್ಟು ದುಡ್ಡು ಕೊಟ್ಟರು ಎಂದೆಲ್ಲ ಕೇಳಬೇಡಿ ಅವರೇನೂ ಬಯಸಿ ಈ ನಂಬರ್ ಪಡೆದಿರಲಿಲ್ಲ, ತೇಜಸ್ವಿಯವರ ಆತ್ಮೀಯ ಗೆಳೆಯರೂ, ಆಗ ಸಾರಿಗೆ ಇಲಾಖೆಯ ಕಮಿಷನರ್ ಆಗಿದ್ದ ಐ ಎ ಎಸ್ ಅಧಿಕಾರಿ ಐ ಎಂ ವಿಠ್ಠಲಮೂರ್ತಿಯವರು ಈ ನಂಬರ್ ಕೊಡಿಸಿದ್ದರಂತೆ.

ಈಗಲೂ ಸುಸ್ಥಿತಿಯಲ್ಲಿರುವ ಈ ಕಾರು ಸದ್ಯಕ್ಕೆ ತೇಜಸ್ವಿಯವರಿಗೆ ಆಪ್ತರಾಗಿದ್ದ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ಕೆ ಸಿ ಶಿವಾರೆಡ್ಡಿಯವರ ಬಳಿ ಇದೆ. ಶಿವಾರೆಡ್ಡಿಯವರಿಗೆ ತೇಜಸ್ವಿಯವರ ಮೇಲೆ ಎಷ್ಟು ಅಭಿಮಾನವಿತ್ತೋ ಅಷ್ಟೇ ಅಭಿಮಾನದಿಂದ ಈ ಕಾರನ್ನು ಜೋಪಾನವಾಗಿ, ಇಟ್ಟುಕೊಂಡಿದ್ದಾರೆ, ತೇಜಸ್ವಿಯವರು ಬಳಸುತ್ತಿದ್ದ ಈ ಕಾರಿನ ಕೀ ಚೈನ್ ಅನ್ನೆ ಈಗಲೂ ಬಳಸುತ್ತಿದ್ದಾರೆ. ಈ ಕಾರು ನೋಡಿದಾಗ ಮುಟ್ಟಿದಾಗ ತೇಜಸ್ವಿಯವರನ್ನೇ ಸ್ಪರ್ಶ ಮಾಡಿದಷ್ಟು ಸಂತೋಷವಾಯ್ತು.

‍ಲೇಖಕರು avadhi

22 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading