ಉಷಾ ಕಟ್ಟೇಮನೆ. ಸಿಕ್ಕಾಪಟ್ಟೆ ಮಾತು. ಮನಸ್ಸು ಬಂದರೆ ಬರೆವಣಿಗೆ. ಲೇಖಕಿ ಎಂಬ ಭ್ರಮೆಗೂ ಉಷಾ ಅವರಿಗೂ ಬೆಂಗಳೂರಿಂದ ಸುಳ್ಯಕ್ಕೆ ಇರುವಷ್ಟೇ ದೂರ.
ಉಷಾ, ಮೂಲತಃ ಸುಳ್ಯದವರಾದರೂ ವಾಸ ಬೆಂಗಳೂರಲ್ಲಿ. ಆದರೆ ಸುಳ್ಯದಂಥ ಗ್ರಾಮೀಣ ಸರಳತೆ ಮತ್ತು ದಿಟ್ಟತನವನ್ನು ಬೆಂಗಳೂರೆಂಬ ಜನನಿಬಿಡ ಕಾಡಲ್ಲೂ ಕಾಪಾಡಿಕೊಂಡವರು. ಉಷಾ ಏನೇ ಬರೆದರೂ ಅಲ್ಲಿ ಹುಡುಗಿಯರ ಲೋಕದ ಚೈತನ್ಯ, ಮುಗ್ಧತೆ, ಲವಲವಿಕೆ, ತುಂಟತನ ಎಲ್ಲವೂ ಇರುತ್ತದೆ. ಅದಕ್ಕಿಂತ, ಹೆಣ್ಣುಮಕ್ಕಳ ಜಗತ್ತಿನ ಹೇಳಲಾರದ ಸಂಕಟಗಳಿಗೂ ಅವರು ಅಕ್ಷರಗಳಲ್ಲಿ ಧ್ವನಿ ತುಂಬುತ್ತಾರೆ.
ಅವರ ಬರವಣಿಗೆ ಬಲು ಆಪ್ತವೆನ್ನಿಸುವುದು, ಕಾಡುವುದು ಅದರ ಸಹಜ ಶಕ್ತಿಯಿಂದಾಗಿ. ಓ ಮನಸೇ ಓದುವವರಿಗೆ, ಹಂಗಾಮ ಓದಿದ್ದವರಿಗೆ ಉಷಾರ ಬರವಣಿಗೆಯ ಸೊಬಗು ಖಂಡಿತ ಗೊತ್ತಿರುತ್ತದೆ. ಹಂಗಾಮದಲ್ಲೇ ಅವರು ಬರೆದಿದ್ದ ಪುಟ್ಟ ಬರಹವೊಂದನ್ನು ಇಲ್ಲಿ ಕೊಡುತ್ತಿದ್ದೇವೆ.





avadhi-
usha avara barahagalannu hungamadalli odidavaralli nanoo obba.
usha barahagalu nijakkoo sookshma
avaru barahagalli torisuva dittatanakke sakshiyagi hungamada lekhanagaliddavu
sadhyavaadare, saadyavadagalella avara baraha prakatisi