ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಿದ್ದಿದ್ದನ್ನು ಗುದ್ದು!!

ಅಶ್ವಿನಿ ಶ್ರೀಪಾದ್

ಪತ್ರಿಕಾ ಪ್ರವರ

ಪ್ರತಿ ಮಾದ್ಯಮದ ಕಚೇರಿಯಲ್ಲಿ ಎರಡು ಬಳಗ ಇದ್ದೆ ಇರತ್ತೆ, ವರದಿಗಾರರು ಹಾಗು ಉಪಸಂಪಾದಕರು. ವರದಿಗಾರರು ವರದಿ ಮಾಡಿ ಕೊಡ್ತಾರೆ, ಉಪಸಂಪಾದಕರು ಅದನ್ನು ತಿದ್ದಿ ತೀಡಿ, ಅದಕ್ಕೊಂದು ರೂಪ ಕೊಡ್ತಾರೆ. ವರದಿಗಾರರು ಕಾಗುಣಿತ ಅಥವಾ ಇನ್ಯಾವುದೇ ತಪ್ಪು ಮಾಡಿದಲ್ಲಿ, ಅದನ್ನು ಸರಿಪಡಿಸುವುದು ಇದೆ ಉಪಸಂಪಾದಕರು. ಕೆಲವೊಮ್ಮೆ ಅವರ ಬಳಿಯೇ ತಪ್ಪು ಆಗಿದ್ದು ಉಂಟು, ನನ್ನ ಗಮನಕ್ಕೆ (ಕೇವಲ ನನ್ನ ವರದಿಗಳ ಬಗ್ಗೆ ಹೇಳುತಿದ್ದೇನೆ ) ಬಂದ ತಪ್ಪುಗಳನ್ನು ನೋಡಿ ಸರಿ ಪಡಿಸಿ, ಚಿಕ್ಕ ಪುಟ್ಟ ತೊಂದರೆ ತಪ್ಪಿಸಿದ್ದು ಉಂಟು.

ಒಮ್ಮೆ ಹೀಗೆ ಆಗಿತ್ತು. ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗಾಗಿ ಸ್ಥಿರ ದೂರವಾಣಿ ವ್ಯವಸ್ತೆ ಮಾಡಲಾಗಿತ್ತು. ಅದರ ಉದ್ಘಾಟನೆಗೆ ಹೋಗಿದ್ದೆ. ಅಲ್ಲಿಯ ಒಬ್ಬ ಪೋಲಿಸ್ ನನಗೆ ಸೋರ್ಸ್ ಆಗಿದ್ದ. ಕೆಲ ದಿನಗಳ ನಂತರ ಆ ವ್ಯವಸ್ಥೆ ಹೇಗೆ ನಡಿಯುತ್ತಿದೆ ಅಂತ ನನ್ನ ಸೋರ್ಸ್ಗೆ ಕೇಳಿದೆ. ಆತನ ಸಹೋದ್ಯೋಗಿಯೇ ದೂರವಾಣಿ ಬೂತ್ ಬಳಿ ಕೂತು ಖೈದಿಗಳು ಮಾಡುವ ಕರೆಗಳ ಬಗ್ಗೆ ನಿಗಾ ವಹಿಸುತಿದ್ದ. ಆಗ ಪರಪ್ಪನ ಅಗ್ರಹಾರದಲ್ಲಿ ಐದು ಸಾವಿರಕ್ಕೂ ಹೆಚ್ಚು ಖೈದಿಗಳು ಇದ್ದರು. ಆದರೆ ಒಬ್ಬನೇ ಪೋಲಿಸ್ ಕರೆಗಳನ್ನು ನೋಡಿಕೊಳ್ಳುತಿದ್ದ.

ನಾನು ನನ್ನ ಸೋರ್ಸ್ ಸಹೋದ್ಯೋಗಿ  ಬಳಿ ಮಾತನಾಡಿ ಲೇಖನ ಮಾಡಿದೆ. ” ನಿನ್ನ ಹೆಸರನ್ನು ಗೌಪ್ಯವಾಗಿ ಇಡುತ್ತೇನೆ ” ಎಂದು ಭರವಸೆ ಕೊಟ್ಟೆ. ಲೇಖನ ತಯಾರು ಆಯಿತು. ಮಾಹಿತಿಯನ್ನು ಬಲ್ಲ ಮೂಲಗಳಿಂದ ತಿಳಿದುಪಟ್ಟಿದೆ ಎಂದು ಉಲ್ಲೇಖಿಸಿ ಬರೆದೆ. ನಮ್ಮ ಉಪಸಂಪಾದಕ ಮಹಾಶಯ ನನ್ನನ್ನು ಕರೆದು ಯಾರು ಹೇಳಿದೂ, ಸುಳ್ಳು ಆಗಿದ್ದರೆ, ಹಂಗೆಲ್ಲ ಬರಿಬಾರದು ಅಂತೆಲ್ಲ ಭಾಷಣ ಮಾಡಿದರು. ಅದಕ್ಕೆ ನಾನು ಹೇಳಿದೆ, ಅದನ್ನು ನೋಡಿಕೊಳ್ಳುತಿದ್ದ ಪೇದೆಯೇ ನನಗೆ ತಿಳಿಸಿದ್ದಾರೆ ಎಂದೇ (ನಾನು ಮಾಡಿದ ತಪ್ಪು ಇದಾಗಿತ್ತು). ಅಂತ ಹೇಳಿ ಹೊರತು ಬಂದೆ. ಆದರೆ ಅಂದು ನನಗೆ ಏನಾಗಿತ್ತೋ ಏನೋ, ಅದೇ ಲೇಖನ ಪೇಜ್ ಮಾಡುವವರ ಹತ್ತಿರ ಹೋಗಿ ನೋಡಿದೆ, ನಮ್ಮ ಉಪಸಂಪಾದಕರು ಅದನ್ನು ನೋಡಿಕೊಳ್ಳುವ ಪೇದೆ ಹೀಗೆಂದು ಹೇಳಿದ ಅಂತ ಬದಲಾಯಿಸಿದ್ದರು. (ನಾನು ಬಲ್ಲ ಮೂಲಗಳಿಂದ ಅಂತ ಹಾಕಿದ್ದೆ). ಹೀಗೆ ಹಾಗಿದಲ್ಲಿ ಅಲ್ಲಿ ಒಬ್ಬನೇ ಪೇದೆ ನೋಡಿಕೊಳ್ಳುತಿದ್ದ, ಅವನ ಹೆಸರು ಆಚೆ ಬರುತಿತ್ತು. ಸರಿ ಪೇಜ್ ಮಾಡುವವರ ಬಳಿ ಮತ್ತೊಮ್ಮೆ ಬಲ್ಲ ಮೂಲಗಳಿಂದ ಅಂತ ಬದಲಾಯಿಸಿದೆ.

ಮಾರನೆ ದಿನ ಅದೇ ಪೇದೆ ನನಗೆ ಫೋನ್ ಮಾಡಿ, ಮೇಡಂ ನಮ್ಮ ಸಾಹೇಬರು ತುಂಬಾ ಕೋಪದಲ್ಲಿ ಇದ್ದಾರೆ, ನನ್ನನ್ನು ಕರೆದು ಯಾರು ಹೇಳಿದ್ದು ಅಂತ ಬೈಯ್ದರು. ನಾನು ಏನು ತಿಳಿಯದವನಂತೆ ಗೊತ್ತಿಲ್ಲ ಎಂದಿದ್ದೇನೆ. ಅವರೇನಾದರೂ ನಿಮ್ಮನ್ನು ಸಂಪರ್ಕಿಸಿದರೆ, ನನ್ನ ಹೆಸರು ಹೇಳಬೇಡಿ ಅಂದ. ಒಮ್ಮೆಲೇ ದೇವರಿಗೆ ಥ್ಯಾಂಕ್ಸ್ ಹೇಳಿದೆ. ನಾನು ಅದನ್ನು ನೋಡದೆ ಹೋಗಿದ್ದಲ್ಲಿ, ಅನ್ಯಾಯವಾಗಿ ಈತನಿಗೆ ತೊಂದರೆ ಆಗುತಿತ್ತಲ್ಲ ಅಂತ. ಅದಾಗಿ ಒಂದು ವಾರಕ್ಕೆ ಗೊತ್ತಾಗಿದ್ದು ಏನೆಂದರೆ, ಪರಪ್ಪನ ಅಗ್ರಹಾರದಲ್ಲಿ ಅದೇ ಜಾಗಕ್ಕೆ ಮೂರು ಮಂದಿ ಪೇದೆಗಳನ್ನು ನೇಮಿಸಿದರು ಅಂತ…ಇದು ಒಂತರ Happy ending ಆಯಿತು.

ಮತ್ತೊಮ್ಮೆ Transgenders ಗಳ ಬಗ್ಗೆ ವರದಿಯೊಂದು ಸಿದ್ದ ಪಡಿಸಿದೆ. ಅಂತಹ ಮೂರು ಜನರನ್ನು ಮಾತನಾಡಿಸಿ ಅವರ ಅಭಿಪ್ರಾಯ ಹಾಕಿದ್ದೆ. ಇವರಲ್ಲಿ “ಅವನನ್ನು” , ‘ಅವಳು’ ಅಂತನೋ ಇಲ್ಲ “ಅವಳನ್ನು”, ‘ಅವನು’ ಅಂತನೋ ಸಂಬೋಧಿಸಿದರೆ ತುಂಬಾ ಕೋಪ ಬರುತಿತ್ತು. ನಾನು ಹಾಗೆ ಬರೆದ ಲೇಖನಗಳಲ್ಲಿ “They” (ಅವರು) ಅಂತ ಉಪಯೋಗಿಸಿ ಬರೆದಿದ್ದೆ. ನಮ್ಮ ಉಪಸಂಪಾದಕರು They ಅನ್ನುವ ಕಡೆ she ಅಂತ ಬದಲಾಯಿಸಿದರು. ಅವತ್ತು ಕೂಡ ಅದೃಷ್ಟ ನನ್ನ ಕೈನಲ್ಲಿ ಇತ್ತು ಅಂತ ಅನ್ನಿಸುತ್ತದೆ, ಅದು ನನ್ನ ಕಣ್ಣಿಗೆ ಬಿಟ್ಟು. ಅದನ್ನು ಮೊದಲಿನಂತೆ ಬದಲಾಯಿಸಲು ಹೇಳಿದೆ, ಅದಕ್ಕೆ ನಮ್ಮ ಉಪಸಂಪಾದಕರು ಮನುಷ್ಯರನ್ನು They ಅಂತ ಸಂಭೋದಿಸುವ ಹಾಗಿಲ್ಲ ಅಂದರು. ಕೊನೆಗೆ ವಾದ ವಿವಾದಗಳಾಗಿ, ಕೊನೆ ನಾನು , he, she or they ಯಾವುದು ಬೇಡ, ಅವರ ಹೆಸರು ಹಾಕಿ ಎಂದೇ. ಹಾಗಾಗಿ ಪ್ರತಿ ಬಾರಿ ಪ್ಯಾರ, ಸಾಲುಗಳಲ್ಲಿ ಅವರ ಹೆಸರು ಹಾಕಲಾಯಿತು. ನನ್ನ ವರದಿಗಾರ ಮಿತ್ರರೊಬ್ಬರು “ದೊಡ್ಡ ಸಮಸ್ಯೆ ಇಂದ ಪಾರಾದಿರಿ’ ಅಂತ ಹಾಸ್ಯ ಮಾಡಿದ್ದು ನೆನಪಿದೆ.

ಇನ್ನೊಮ್ಮೆ ಹೀಗಾಯ್ತು. ಆಸಿಡ್ ದಾಳಿಯಿಂದ ಬಳಲುತಿದ್ದ ಮಹಿಳೆಯರ ಬಗ್ಗೆ ಸರಣಿ ಲೇಖನ ತಯಾರು ಮಾಡಬೇಕಾಯ್ತು. ಹಾಗಾಗಿ ಅನೇಕ ಅಂತಹ ದುರಾದೃಷ್ಟರ ಮನೆಗೆ ಹೋಗಬೇಕಾಯ್ತು. ನನ್ನ ಬಳಿಯೇ ಕ್ಯಾಮೆರಾ ಒಂದು ಇತ್ತು. ಹಾಗಾಗಿ ನಮ್ಮ photographers ಗೆ ಬೇಡ ಎಂದು ನಾನೇ ಹೊರಟೆ. ಹೀಗೆ ಹೋದವರ ಮನೆಯ ಪೈಕಿ ಹಾಸಿನಾಳ ಮನೆಯು ಒಂದು. ಜಾಲಹಳ್ಳಿ ಬಳಿ ಇದ್ದ ಅವರ ಮನೆಗೆ ಹೋಗಿ, ಅವರನ್ನು, ಅವರ ಕುತುಮ್ಭಾದವರನ್ನು ಮಾತನಾಡಿಸಿ, ಅವರ ಹಳೆಯ ಫೋಟೋ ಹಾಗು ಇಂದಿನ ಫೋಟೋ ಎರಡನ್ನು ತೆಗೆದುಕೊಂದು ಬಂದೆ. ಲೇಖನ ಹಾಗು ಫೋಟೋ ಎರಡನ್ನು ನಾನೇ ಮಾಡಿದೆ ಎಂಬ ಹುಮ್ಮಸಿನಿಂದ ಆಕೆಯ ಇಂದಿನ ಪೋಟೋ ಆಯ್ಕೆ ಮಾಡಿ ಪೇಜ್ ಮಾಡುವವರಿಗೆ ಕೊಟ್ಟೆ. ಅವರು ಅದನ್ನು JPG format ಬದಲಾಯಿಸಿ ಕೊಡಿ, ನಾನೇ ಮಾಡಬಹುದಿತ್ತು ಆದರೆ ನನಗೆ ಇನ್ನೊಂದು ಪೇಜ್ ಮಾಡುವುದಿದೆ ಎಂದರು. ಆ ಫೋಟೋ ತಕ್ಕಂತೆ ಜಾಗ ಬಿಟ್ಟುಕೊಂಡಿದ್ದೇನೆ ಎಂದರು.

ಅಲ್ಲಿಂದ ನಮ್ಮ Photographer ಶಶಿ ಬಳಿ ಬಂದೆ. ಹಸಿನಾಳ ಇಂದಿನ ಮುಖ ಇರುವ ಫೋಟೋ jpg format ಮಾಡಿಕೊಡಿ ಎಂದೇ. ಶಶಿ ಎರಡು ನಿಮಿಷ ಆ ಫೋಟೋ ನೋಡಿ, ಇದು ಬೇಡ ಅವಳ ಹಳೆಯ ಸುಂದರ ಮುಖ ಹಾಕಿ ಎಂದ. ನನಗೆ ಜಾಲಹಳ್ಳಿ ವರೆಗೆ ಹೋಗಿ ತೆಗೆದ ಫೋಟೋ ಬೇಡ ಅಂತಾನಲ್ಲ ಅಂತ ಸಂಕಟ ಆಯಿತು. ಇಲ್ಲ ಇದೆ ಇರಲಿ ಎಂದು ವಾದ ಮಾಡಿದೆ. ಅದಕ್ಕೆ ಶಶಿ, ” ರೀ ಅಶ್ವಿನಿ ನಿಮ್ಮ ಮುಖ ಹಿಂಗೆ ವಿಕಾರ ಆಗಿ, ಅದರ ಫೋಟೋ ಪತ್ರಿಕೆಗಳಲ್ಲಿ ಬಂದರೆ ಹೆಂಗೆ ಇರತ್ತೆ, ” ಎಂದ. ನಂಗೆ ಆ ಕ್ಷಣದಲ್ಲಿ ನನ್ನ ಬಗ್ಗೆಯೇ ಹೇಸಿಗೆ ಆಯಿತು. ಶಶಿ ನನ್ನ ಕಣ್ಣು ತೆರಸಿದ್ದು ಮಾತ್ರ ನಿಜ. ಮತ್ತೊಮ್ಮೆ ನಮ್ಮ ಪೇಜ್ ಮಾಡುವವರ ಬಳಿ ಹೋಗಿ, ಅವರು ಫೋಟೋಗಾಗಿ ಇಟ್ಟುಕೊಂಡ ಜಾಗವನ್ನು ಸ್ವಲ್ಪ ಬದಲಾಯಿಸಿ, ಹಸಿನಾಳ ಸುಂದರ ಮುಖ ಬರುವಂತೆ ಮಾಡಿದೆ.

ಹೀಗೆ ಕೆಲವೊಮ್ಮೆ ಕೊನೆ ನಿಮಿಷದಲ್ಲಿ ಆದ ಬದಲಾವಣೆ ಸಣ್ಣ ಪುಟ್ಟ ತೊಂದರೆ ದೂರ ಮಾಡುತ್ತದೆ ಎಂದರೆ ತಪ್ಪಾಗಲಾರದು.

‍ಲೇಖಕರು G

13 May, 2011

1 Comment

  1. ಆಸು ಹೆಗ್ಡೆ

    ಅದ್ಯಾಕೋ ಗೊತ್ತಿಲ್ಲ… ಈ ಸುದ್ದಿಮನೆಯ ಸಂಗತಿಗಳ ಬಗ್ಗೆ ಓದುವುದೆಂದರೆ ನನಗೆ ಬಹಳ ಇಷ್ಟ.
    ನನ್ನ ಶಾಲಾ ದಿನಳಿಂದಲೂ ಸುದ್ದಿಮನೆಗಳ ಒಳಗಿನ ಸುದ್ದಿಗಳಿಗೆ ಕಿವಿಯಾಗಿ ರೂಢಿಯಾದುದರಿಂದ ಇರಬಹದೇನೋ…
    ತಾವು ಇಲ್ಲಿ ಬಹಳ ಚೆನ್ನಾಗಿ ಗುದ್ದು ಕೊಡುವಾಗಲೂ, ಕೆಲವು ಕಾಗುಣಿತಗಳು ತಿದ್ದಿಸಿಕೊಂಡು ಗುದ್ದಿಸಿಕೊಳ್ಳಲು ಇನ್ನೂ ಉಳಿದುಕೊಂಡಿವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading