ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಾಯ್ತನದ ವ್ಯಾಪಾರವೇ…? – ಸುಜಾತಾ ವಿಶ್ವನಾಥ್

ಸುಜಾತಾ ವಿಶ್ವನಾಥ್

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ಭೂತಾಯಿ, ಸಹನೆಯ ಒಡಲು ಪೂಜನಿಯಳು ಎಂಬ ಎಲ್ಲಾ ಬಿರುದುಗಳನ್ನು ಕೊಡುವ ಈ ಪುರುಷ ಪ್ರಧಾನ ಸಮಾಜ, ಹೆಣ್ಣು ಮಕ್ಕಳನ್ನು ನೋಡುವ, ಅವಳನ್ನು ನಡೆಸಿಕೊಳ್ಳುವ ರೀತಿಯೇ ಬೇರೆ. ಗೌರವದ ಸ್ಥಾನ-ಮಾನಗಳನ್ನು ನೀಡುತ್ತಿರುವ ಇದರ ಹಿಂದೆಯೇ ಇನ್ನೊಂದು ಕ್ರೋರ ಮುಖ ಅವಿತು ಕುಳಿತ್ತಿರುತ್ತದೆಂಬ ಅರಿವೂ ಹೆಣ್ಣುಮಕ್ಕಳಿಗೆ ಬಾರದಂತೆ ಹೆಣ್ಣನ್ನು ಬಲಿತೆಗೆದುಕೊಳ್ಳುತ್ತಲೇ ಬಂದಿದ್ದಾರೆ. ಇನ್ನೆಷ್ಟು ಪ್ರಕರಣಳೋ, ಅದೆಷ್ಡು ಹೆಣ್ಣು ಮಕ್ಕಳು ಇಲ್ಲಿ ಬಲಿಯಾಗಬೇಕೋ ಎಂಬ ಆತಂಕ ನಮ್ಮಲ್ಲೀಗ ಮನೆಮಾಡಿದೆ. ಅದೆಷ್ಟು ಹೆಣ್ಣು ಮಕ್ಕಳು ಕತ್ತಲ ಕೋಣೆಗಲ್ಲಿ ಉಸಿರು ಕಟ್ಟಿದ ವಾತಾವರಣದಲ್ಲಿ ಬದುಕುತ್ತೊರುವರೋ ತಿಳಿಯದಾಗಿದೆ.
ಹೆಣ್ಣಿನ ಶೋಷಣೆ ಅಂದಿನಿಂದಲೂ ನಡೆದುಕೊಂಡು ಬರುತ್ತಲಿದೆ. ಕೊನೆ ಎಂಬುದಿಲ್ಲವೇ ಈ ಶೋಷಣೆ? ಎಲ್ಲವನ್ನು ಕಾಲವೇ ತಿಮರ್ಾನಿಸಬೇಕು. ಅಂದು ಹೆಣ್ಣನ್ನು ಪಣಕ್ಕಿಟ್ಟು ಪಗಡೆಯಾಟದಲ್ಲಿ ಸೋತದ್ದು ಪುರುಷರೇ, ತುಂಬಿದ ಸಭೆಗೆ ದರ್ಪದಿಂದ ಆಕೆ ತೆಲೆಕೊದಲು ಹಿಡಿದು ಎಳೆದು ತಂದದ್ದೂ ಪುರಷರೇ, ಇದಾವುದರೂ ಸುಳಿವೂ ಇಲ್ಲದ ಆ ಮುಗ್ದ ಹೆಣ್ಣು ಮಗಳು ಆ ಕ್ಷಣ ಧಂಗಾಗಿದ್ದಳು ಏನಾಗುತ್ತಿದೆ ಎಂಬ ಸುಳಿವೂ ಇಲ್ಲದೆ ಕಂಗಾಲಾಗಿದ್ದಳು. ತನಗಾದ ಆ ಕ್ಷಣದ ಅವಮಾನವನ್ನು ಸಹಿಸದ ಆಕೆ, ಆ ತುಂಬಿದ ಸಭೇಯಲ್ಲಿದ್ದವರನ್ನೇಲ್ಲ ಪರಿಪರಿಯಾಗಿ ಬೇಡಿದರೂ, ಮಾನವೀಯತೆಯ ಪದದ ಅರ್ಥವೇ ತಿಳಿಯದೇನೋ ಎಂಬಂತೆ ತಲೆಬಗ್ಗಸಿ ಕೂತಿದ್ದರು. ಕೊನೆಗೆ ದಿಕ್ಕು ತೋಚದಾಗಿ ತನ್ನ ಮಾನ, ಪ್ರಾಣ, ರಕ್ಷಣೆಯ ಬಾರ ಹೊತ್ತ ತನ್ನ ಐವರು ಗಂಡಂದಿರನ್ನು ಪರಿಪರಿಯಾಗಿ ಒಬ್ಬೊರಲ್ಲಿಯೂ ಯಾಚಿಸುತ್ತಾಳೆ. ಆ ಸಮಯದಲ್ಲಿ ಹೆಂಡತಿಯನ್ನು ತನ್ನ ಹೃದಯದಲ್ಲಿಟ್ಟಕೊಂಡು ಬೆಚ್ಚಗೆ ಕಾಪಾಡಬೇಕಿದ್ದ ಗಂಡಂದಿರು ತಲೆಬಗ್ಗಿಸಿ ಕುಳಿತಾಗಿ, ಆ ಹೆಣ್ಣಿನ ಮನಸ್ಥಿತಯನ್ನೊಮ್ಮೆ ಯೋಚಿಸಿ, ಆಕೆ ಆ ಕ್ಷಣ ಅದೆಷ್ಟು ತಲ್ಲಣಗೊಂಡಿರಬೇಕು ರಕ್ಷಿಸಸಬೇಕಾದವರೇ ಇಲ್ಲಿ ತಲೆ ಬಗ್ಗಿಸುಕೊಂಡು ಕುಳಿತಾಗ, ಆಕೆ ಅದೆಷ್ಟು ಆಕ್ರೋಶಗೊಂಡಿರಬೇಕು ತನ್ನ ಗಂಡಂದಿರ ಮೇಲೆ. ಆದರೂ ಆಕ್ಷಣ ಅಷ್ಟು ನೋವು ಇದ್ದರೂ, ಅವಳು ತನ್ನ ಮಾನ ಮೊದಲು ಕಾಪಾಡಿಕೊಳ್ಳಲು ಮುಂದಾಗಿ ಕೃಷ್ಣನಲ್ಲಿ ಮೊರೆ ಇಟ್ಟಳು. ಇಷ್ಟೆಲ್ಲ ನೋವು, ಅವಮಾನಗಳಾದರೂ ಸಹ ಆ ಐವರು ಗಂಡಂದಿರನ್ನು ಮತ್ತೆ ಸ್ವಿಕರಿಸುತ್ತಾಳೆ. ಆ ನೋವು, ದುಃಖ, ಅವಮಾನಗಳೆಲ್ಲಾ ಕ್ಷಣಕ್ಕಷ್ಟೇ ಸೀಮಿರ ಎಂಬಂತೆ ಎಲ್ಲರನ್ನೂ ಮನ್ನಿಸಿ, ಮತ್ತೆ ಬಾಳ ಪಯವನ್ನು ಮುಂದುವರಿಸುತ್ತಾಳೆ. ಇಂದು ಸಹ ಹೀಗೆ ನಮ್ಮ ಹೆಣ್ಣು ಮಕ್ಕಳು ಅದೆಷ್ಟೇ ನೋವು, ಅವಮಾನ, ಶೋಷಣೆಯಾದರೂ ಎಲ್ಲವನ್ನು ಸಹಿಸಿಕೊಂಡು ಜೀವಿಸುತ್ತಿದ್ದಾರೆ.
ಹೀಗೆ ಇನ್ನೊಂದು ಉದಾಹರಣೆ ಕೊಡುವುದಾದರೆ ಸೀತಾಮಾತೆ. ಯಾರೋ ಅಗಸನ ಮಾತು ಕೇಳಿ ತನ್ನ ಅರ್ಧಾಂಗಿಯನ್ನು ಕಾಡಿಗಟ್ಟಿದ ಘಟನೆ. ಅಗಸ ಮೇಲಿದ್ದ ನಂಬಿಕೆ ತನ್ನ ಹೆಂಡತಿಯಾದ, ರಾಜ್ಯದ ರಾಣಿಯಾದ ತನ್ನ ಸತಿಯ ಮೇಲೆ ಇಲ್ಲದಾಗಿತ್ತು. ಇದಾವುದನ್ನೂ ಪ್ರಶ್ನಿಸದೇ ತನ್ನ ತಮ್ಮನಿಗೆ ಆದೇಶವಿತ್ತು, ಸೀತೆಯಲ್ಲಿ ಕಾಡಿನಲ್ಲಿ ಬಿಟ್ಟು ಬರುವಂತೆ ತಿಳಿಸುತ್ತಾನೆ. ಗರ್ಭವತಿಯಾದ ಆಕೆಯನ್ನು ಕಾಡಿನಲ್ಲಿ ಬಿಟ್ಟುಬಂದಿದ್ದು ಸರಿಯೇ ಎಂಬ ಪ್ರಶ್ನೆಗೆ ಇಂದಿಗೂ ಉತ್ತರವಿಲ್ಲ. ಗರ್ಭವತಿಯಾದ ಹೆಣ್ಣು ಸದಾ ತನ್ನ ಗಂಡ ಜೊತೆಗಿರಬೇಕೆಂದು ಬಯಸುತ್ತಾಳೆ. ತನ್ನ ಒಡಲಲ್ಲಿನ ತನ್ನದೇ ರಕ್ತ ಹಂಚಿಕೊಂಡು ಸೃಷ್ಠಿಯಾಗುತ್ತಿರುವ ಆ ಮಗುವಿನ ಚಲನವಲನಗಳ ಸ್ಪರ್ಶ ಸುಖವನ್ನು ತನ್ನ ಗಂಡನಿಗೆ ತೋರಿಸುವ ಹಂಬಲ, ಖುಷಿ ಕಣಕಣದಲ್ಲೂ ತುಂಬಿರುತ್ತದೆ. ನವ ಮಾಸಗಳು ಕತ್ತಲಲ್ಲಿ ಅಮ್ಮನ ಉಸಿರನ್ನೇ ಉಸಿರಾಗಿಸಿಕೊಂಡು ಬೇಳೆಯುವ ಆ ಕಂದನ ಒದ್ದಾಟದಿಂದ ಸಿಗುವ ಆನಂದ, ಖುಷಿಯೇ ತಾಯ್ತನದ ಇನ್ನೊಂದು ರೂಪ. ತನ್ನ ಹೆಂಡತಿಯನ್ನು ಎದೆಗಪ್ಪಿಕೊಂಡು ತನ್ನ ಕಂದನ ಒಡನಾಟದ ಸ್ಪರ್ಶ ಸುಖವನ್ನು ಅನುಭವಿಸಬೇಕಾದ ಪತಿಯೇ ಇಲ್ಲಿ ಕಾಡಿಗಟ್ಟಿದಾಗ ಆಕೆ ಪ್ರಶ್ನಿಸಬಹುದಿತ್ತು. ಆದರೆ ಪ್ರಶ್ನೆ ಮಾಡುವ ದೈರ್ಯವಿರಲಿಲ್ಲವೇ? ಇದ್ದರೂ ಕೇಳುವ ಮನಸ್ಸಾಗಲಿಲ್ಲವೇ?

ನಂತರ ಎಲ್ಲವೂ ಸರಿಯಾಯಿತೆಂಬ ಸಂದರ್ಭದಲ್ಲಿ ತನ್ನ ಹೆಂಡತಿ ಮಕ್ಕಳನ್ನು ಖುಷಿಯಿಂದ ರಾಜ್ಯಕ್ಕೆ ಕರೆದುಕೊಂಡು ಹೋಗುವಾಗ, ಸೀತೆ ಅಗಸ ಮಾಡಿದ ನಿಂದನೆಯನ್ನು ಮರೆತಿರಲಿಲ್ಲ. ಆಕೆ ಪವಿತ್ರೆಳೆಂದು ತೋರಿಸಲಿ ಅಗ್ನಿ ಪ್ರವೇಶ ಮಾಡಬೇಕಾಯಿತು. ಅವಳು ಪವಿತ್ರಳೆಂಬುದನ್ನು ಶ್ರೀರಾಮನಿಗೆ ಗೊತ್ತಿರಲಿಲ್ಲವೇ? ಅಷ್ಟು ವರ್ಷಗಳಿಂದ ಮನದಲ್ಲಿದ್ದ ಮೌನದ ಕಟ್ಟೆ ಹೊಡೆದಿತ್ತು. ಮನಸ್ಸಿಗಾದ ಗಾಯಕ್ಕೆ ಮುಲಾಮು ಬೇಕಿತ್ತೇನೋ ಎಂಬಂತೆ ಆಕೆ ಆಗ್ನಿ ಪ್ರವೇಶ ಮಾಡಿ…ಪವಿತ್ರಳೆಂದು ತಿಳಿಸಿ ಶ್ರೀರಾಮನಿಗೆ ದಕ್ಕದೇ ತನ್ನ ಭೂತಾಯ ಗರ್ಭ ಸೇರಿಬಿಟ್ಟಳು ಮೌನವಾಗಿಯೇ. ಇಂದಿಗೂ ನಮ್ಮ ಹೆಣ್ಣು ಮಕ್ಕಳು ಅದೇ ದಾರಿಯಲ್ಲಿ ನಡೆಯುವಂತಾಗಿದೆ. ಈ ಪುರಷ ಪ್ರಧಾನ ಸಮಾಜದಲ್ಲಿ ಪ್ರಶ್ನಿಸುವ ಹಕ್ಕು, ದೈರ್ಯವಿಲ್ಲದಾಗಿದೆ. ನೋವುಂದ ಅದೆಷ್ಟೋ ಮನಗಳು ಮೌನವಾಗಿ ಇಂದು ಭೂತಾಯ ಒಡಲನ್ನು ಸೇರುತ್ತಿದ್ದಾರೆ.
ಹೆಣ್ಣಿನ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ, ಕಿರುಕೊಳಗಳು ನಡೆಯುತ್ತಲೇ ಇವೆ. ಪ್ರೀತಿಸಿದವಳು ದಕ್ಕಲಿಲ್ಲವೆಂಬ ಕಾರಣದಿಂದಲೋ ಅಥವ ಪ್ರೀತಿಸು ಎಂದು ಕಾಡುವ ಹರೆಯದ ಹುಡುಗರು, ಕೋಮಲವಾದ ಹೆಣ್ಣಿನ ಮೇಲೆ ದಾಳಿಯನ್ನು ಮಾಡುತ್ತಿದ್ದಾರೆ. ಅವಳು ಜೀವನ ಪರ್ಯಂತ ನರಳೀ ನರಳೀ ಕತ್ತಲ ಕೋಣೆಯಲ್ಲಿ ಬದುಕುವ ಸ್ಥಿತಿಗೆ ತಂದು ನಿಲ್ಲಿಸುತ್ತಾರೆ. ಇದರಿಂದ ದೃತಿಗೆಟ್ಟ ಅದೆಷ್ಟೋ ಹೆಣ್ಣು ಮಕ್ಕಳು ಜೀವ ಕಳೆದುಕೊಂಡ ಪ್ರಸಂಗಗಳೂ ಇವೆ. ಹೆಣ್ಣಿನ ಅಂಗಾಂಗ ಪ್ರದರ್ಶನ ಮಾಡಿ ವ್ಯಾಪಾರ ಮಾಡುವವರು ಇದ್ದಾರೆ. ಈ ಪ್ರಸಂಗಗಳಲ್ಲಿಯೂ ಬಲಿಯಾಗುವುದು ಮಾತ್ರ ಹೆಣ್ಣು ಮಕ್ಕಳು.
ಇವೆಲ್ಲವನ್ನೂ ದಿನ ಬೆಳಗಾದರೆ ನೋಡಿ ರೋಸಿಹೋಗಿವೆ ಹೆಣ್ಣು ಜೀವಗಳು ಇದಕ್ಕೆ ಕೊನೆಯೇ ಇಲ್ಲವೇ ಎಂಬ ಆತಂಕವೂ ಮಡುವುಗಟ್ಟಿದೆ. ಇದರ ಮಧ್ಯೆ ಇನ್ನೊಂದು ದೊಡ್ಡ ಶಾಕ್ ಎಂದರೆ, ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಿದ್ದ ಸಂತಾವಹೀನತೆಯಿಂದ ಬಳಲುತ್ತಿದ್ದವರಿಗೆ ಬಾಡಿಗೆ ತಾಯಿಯಿಂದ ಮಗು ಕೊಡಿಸುವ ಆಸೆ ತೋರಿಸಿ, ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ, ಸೃಷ್ಠಿ ಗ್ಲೋಬಲ್ ಟ್ರಸ್ಟ್ನ ಮುಖ್ಯಸ್ಥ ಟಿ.ಕೆ.ಗುರುಮೂರ್ತಿ ವಿರುದ್ಧ ಒಂದೇ ದಿನದಲ್ಲಿ 40 ಪ್ರಕರಣಗಳು ದಾಖಲಾಗಿರುವದನ್ನು ಕಂಡರೆ ನಮಗೆಲ್ಲಾ ದಿಗಿಲಾಗುತ್ತಿದೆ ಇನ್ನೆಷ್ಟು ಹೆಣ್ಣು ಮಕ್ಕಳು ಈ ವಂಚನೆಯಲ್ಲಿ ಬಲಿಯಾಗಿರಬಹುದು ಎಂದು. ಇವನು ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ಕೊನೆಗೆ ಹೆಣ್ಣಿನ ತಾಯ್ತತನವನ್ನೇ ಬಂಡವಾಳವಾಗಿ ಮಾಡಿಕೊಂಡು ಹಣ ಗಳಿಸುವ ಸುಲಭ ಮಾರ್ಗದಲ್ಲಿ ತೊಡಗಿದ್ದಾನೆ. ಇದರಿಂದ ಬರುವ ಲಾಭದಿಂದ ತನ್ನ ಮೋಜು ಮಸ್ತಿ ಮಾಡುವ ಇವನನ್ನು ನೋಡಿದರೆ, ಹೆಣ್ಣು ಮಕ್ಕಳ ಕರುಳು ಕಿತ್ತು ಬರುವಂತಾಗುತ್ತದೆ. ನೊಂದ ಅದೆಷ್ಟೋ ಜೀವಗಳ ಕಣ್ಣೀರಿನ ಶಾಪ ಇವನಿಗೆ ತಕ್ಕ ಶಿಕ್ಷೆ ಸಿಗುವಂತೆ ಮಾಡುತ್ತದೆಯೇ? ಅಥವ ಅವನು ಹಣವನ್ನು ಚೆಲ್ಲಿ ಮತ್ತೆ ಹೊರಬಂದು ತಾಯ್ತತನದ ವ್ಯಾಪಾರ ಮಾಡುವನಾ ಎಂಬ ಆತಂಕ ಮನೆಮಾಡಿದೆ.
ನಮ್ಮ ಹೆಣ್ಣು ಮಕ್ಕಳು ಇನ್ನು ಎಷ್ಟು ಬಗೆಗೆಳಲ್ಲಿ ಬಲಿಯಾದರೆ ಈ ದಾಹ ತಣಿಯಬಹುದು. ಯಾಕಿಷ್ಟು ಕ್ರೋರತೆ ಈ ಸಮಾಜದಲ್ಲಿ ತಲೆ ಎತ್ತಿದೆ? ಅವನ ಮನೆಯ ಹೆಣ್ಣು ಮಕ್ಕಳಿಗೇನಾದರೂ ಈ ರೀತಿಯ ಅನ್ಯಾಯವಾದಲ್ಲಿ ಇವನು ಸುಮ್ಮನಿರುವನೇ? ಬೇರೆ ಹೆಣ್ಣು ಮಕ್ಕಳ ಜೀವದ ಜೊತೆ ಯಾಕಿಷ್ಟು ಕ್ರೋರತೆ ತೋರುತ್ತಿದ್ದಾನೆ.
ತಾಯ್ತನವೆಂಬು ಹೆಣ್ಣಿಗೆ ಮರುಜೀವವಿದ್ದಂತೆ ಆಕೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ಹೆತ್ತು ಕೊಡಲು ಒಪ್ಪುತ್ತಾಳೆಂದರೆ, ಆಕೆಯ ಆಥರ್ಿಕ ಪರಿಸ್ಥಿತಿ ಯಾವ ಮಟ್ಟದಲ್ಲಿಬೇಕು ಎಂದು ಯೋಚಿಸುವ ವ್ಯವದಾನವಿಲ್ಲದಾಗಿದೆ. 9 ತಿಂಗಳು ಮಗುವಿನ ಚಲನ ವಲನಗಳ ಖುಷಿ ಅನುಭವಿಸಿದ ಮನಸ್ಸಿಗೆ ಮಗುವನ್ನು ನೋಡುವ ಭಾಗ್ಯವೂ ಇರುತ್ತದೆಯೋ ಇಲ್ಲವೋ ಅದು ಸಹ ತಿಳಿಯದಾಗಿದೆ. ಅಲ್ಲದೆ ಮುಗು ಈ ಹೊಸ ಪ್ರಂಪಚಕ್ಕೆ ಕಾಲಿಟ್ಟ ತಕ್ಷಣ, ಆ ಮಗುವನ್ನು ಹೆತ್ತ ತಾಯಿ ಕತೆ ಮುಗೆದೇ ಹೋಯಿತು. ಆ ಸಂದರ್ಭದಲ್ಲಿ ಅವಳಿಗೆ ಹೆಚ್ಚಿನ ಹಾರೈಕೆ ಬೇಕಾಗುತ್ತದೆ, ಪೌಷ್ಠಿಕ ಆಹಾರದ ಅವಶ್ಯಕತೆ ಇರುತ್ತದೆ. ಆದರೆ ಅದವುದನ್ನೂ ನೀಡಿದೆ ನಾಯಿಯಂತೆ ಹೊರಗಟ್ಟು ಇಂತಹವರಿಗೆ ತಕ್ಕ ಶಿಕ್ಷೆೆಯಾಗಲೇಬೇಕು. ಇವನ ಪಡೆದ ಹಣದಲ್ಲಿ ಅರ್ಧವನ್ನಾದರೂ ಆ ತಾಯಿಗೆ ನೀಡಬೇಕು.
ಇಷ್ಟೆಲ್ಲ ಪಾಪದ ಕೆಲಸ ಮಾಡಿದ ಇವನ ಪಾಪದ ಬಿಂದಿಗೆ ಇಂದಿಗೆ ತುಂಬಿದೆ ಎನಿಸುತ್ತಿದೆ. ಇಷ್ಟು ಮೋಸ ಮಾಡಿರುವ ಅವನಿಗೆ ಅದೆಷ್ಟು ಹೆಣ್ಣು ಮಕ್ಕಳ ಶಾಪ ಕೊಪ ಇವನ ಮೇಲಿದೆಯೋ ಗೊತ್ತಿಲ್ಲ. ನೊಂದ ಹೆಣ್ಣು ಮಕ್ಕಳ ನೋವು ಆಕ್ರೋಶ, ಸೇಡಿನ ಜ್ವಾಲೆ ಇವನನ್ನು ಸುಡದೆ ಬುಡುವುದಿಲ್ಲ. ಇಂದಲ್ಲ ನಾಳೆ ಅವನಿಗೆ ತಕ್ಕ ಶಿಕ್ಷೆಯಾಗಿಯೇ ಆಗುತ್ತದೆಂಬ ನಂಬಿಕೆ ನಮ್ಮ ನೊಂದ ಹೆಣ್ಣು ಮಕ್ಕಳ ಕಣ್ಣುಗಳಲ್ಲಿ ಆಶಾ ದೀಪದಂತೆ ಪ್ರಜ್ವಲಿಸುತ್ತಿದೆ. ನೊಂದವರಿಗೆ ನ್ಯಾಯ ಸಿಕ್ಕಲಿ ನ್ಯಾಯದೇಗುಲದ ಮೇಲೆ ಇನ್ನಷ್ಟು ಭರವಸೆ ನಮ್ಮ ಹೆಣ್ಣು ಮಕ್ಕಳಲ್ಲಿ ಮೂಡಲಿ ಇದಕ್ಕೆ ಈ ಸಮಾಜದಲ್ಲಿರುವ ಎಲ್ಲರ ಬೆಂಬಲವೂ ಸಿಗಲಿ… ಇವನ ವಿರುದ್ಧ ಎಲ್ಲರೂ ಧ್ನ್ವನಿ ಎತ್ತಲಿ…
 

‍ಲೇಖಕರು G

25 October, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading