ರೂಪಾ ಹಾಸನ ಅವರ ಹೊಸ ಕವನ ಸಂಕಲನ ಹೊರಬರಲು ಕಾತರಿಸುತ್ತಿದೆ. ಐದು ವರ್ಷಗಳ ತಹ ತಹದ ನಂತರ ಬರುತ್ತಿರುವ ಸಂಕಲನ ಇದು.
ಸೃಷ್ಟಿ ನಾಗೇಶ್ ತಮ್ಮ ದೇಸಿ ಪುಸ್ತಕದಿಂದ ಈ ಕೃತಿಗೆ ಬೆಳಕು ನೀಡುತ್ತಿದ್ದಾರೆ. ಸಂಕಲನಕ್ಕೆ ರೂಪಾ ಬರೆದ ಮಾತು ಅವರದ್ದೇ ರೇಖಾ ಚಿತ್ರದೊಂದಿಗೆ..

ಒಂದಿಷ್ಟು ಮಾತು
..ಇಷ್ಟೆಲ್ಲ ..ಎಷ್ಟೆಲ್ಲದರ ನಡುವೆ ಕೂಡ ‘ತನ್ನಷ್ಟಕ್ಕೆ’ ಇರುವ ಕ್ಷಣಗಳನ್ನು ಅನುಭವಿಸಲು ಸಾಧ್ಯವಾಗಿರುವುದಕ್ಕೆ ಸಮಾಧಾನವೆನಿಸುತ್ತದೆ. ಆ ಕ್ಷಣಕ್ಕೆ ಸಂಗಾತಿಗಳಾಗುವ ಜೀವಗಳಿಗೆ, ಕವಿತೆಗಳಿಗೆ, ಚಿತ್ರಗಳಿಗೆ, ಹಾಡುಗಳಿಗೆ, ಅಸಂಖ್ಯ ಕಲ್ಪನೆಗಳಿಗೆ.. ನನ್ನ ಒಳತೋಟಿಗಳ
ಮಿಡಿತ ಒಂದಿಷ್ಟಾದರೂ ಅರ್ಥವಾಗುವುದೇ ಒಂದು ಧನ್ಯತೆ. ಅದರ ಕಿರು ಸಾಕಾರ ರೂಪ ನನ್ನ ಮತ್ತೊಂದು ಕವನ ಸಂಕಲನ.
ನನ್ನ ಕವಿತೆಗಳನ್ನು ಪ್ರೀತಿಯಿಂದ ಪ್ರಕಟಿಸಿದ ಎಲ್ಲಾ ಪತ್ರಿಕೆಗಳಿಗೆ, ವಿಶೇಷಾಂಕಗಳಿಗೆ, ಅದರ ಸಂಪಾದಕ ಬಳಗಕ್ಕೆ ಅನಂತ ವಂದನೆಗಳು.
ನನ್ನ ಕೆಲ ಕವಿತೆಗಳನ್ನು ಇಂಗ್ಲಿಷ್ ಗೆ ಅನುವಾದಿಸಿದ ಸಹೃದಯರಾದ ಸೂಸಾನ್ ಡೇನಿಯಲ್, ಹೆಚ್.ಎಸ್. ಕೋಮಲೇಶ, ಪ್ರೊ.ಸಿ.ಪಿ.ರವಿಚಂದ್ರ ಮತ್ತು ಸ್ಪ್ಯಾನಿಷ್ ಗೆ ಅನುವಾದಿಸಿದ ರೊವೆನಾ ಹಿಲ್ಸ್, ಡಚ್ ಗೆ ಭಾಷಾಂತರಿಸಿದ ಎವಿಲಿನ್ ಡಿ ಹೂಪ್ ಅವರ ಪ್ರೀತಿಗೆ ಹೃದಯಪೂರ್ವಕ ನಮಸ್ಕಾರಗಳು.
ಮುಖಪುಟ ಮತ್ತು ಹಿಂಬದಿಯ ಛಾಯಾಚಿತ್ರಗಳನ್ನು ತೆಗೆದ ಫೋಟೋ ಗೀಳಿನ ಮಗ ನಿಶಾಂತನಿಗೆ, ರಕ್ಷಾಪುಟವನ್ನು ಅಚ್ಚುಕಟ್ಟಾಗಿ ರೂಪಿಸಿದ ಕಲಾವಿದರಾದ ಕೆ.ಜೆ.ಸಚ್ಚಿದಾನಂದ ಅವರಿಗೆ, ಪುಸ್ತಕವನ್ನು ಆಸಕ್ತಿಯಿಂದ ಮುದ್ರಿಸುತ್ತಿರುವ ಸೃಷ್ಟಿ ನಾಗೇಶ್ ಅವರಿಗೆ ವಿಶ್ವಾಸದ ವಂದನೆಗಳು.
ಎಂದಿನಂತೆ ನನ್ನೆಲ್ಲಾ ಚಟುವಟಿಕೆಗಳಿಗೆ ಜೊತೆಯಾಗುವ ಅಪಾರ ಮಿತ್ರ ಬಳಗ, ಕುಟುಂಬ ವರ್ಗ, ‘ತನ್ನಷ್ಟಕ್ಕೆ’ ಇರುವ ಕ್ಷಣಗಳನ್ನು ಸದ್ದಿಲ್ಲದೇ ನೀಡಿ ಜೊತೆಯಾಗುವ ನನ್ನ ಬದುಕಿನ ಭಾಗವಾದ ಪತಿ ಮತ್ತು ಮಗ, ನನ್ನ ಕವಿತೆಗಳನ್ನು ಪ್ರೀತಿಯಿಂದ ಓದುತ್ತಿರುವ ನೀವು.. ಎಲ್ಲರಿಗೆ, ವಂದನೆ ಎಂಬುದು ಸಣ್ಣ ಮಾತು.
ರೂಪ ಹಾಸನ




Wah! Wonderful! Must read…..
ಅಭಿನಂದನೆ ಗೆಳತಿ.
ಇನ್ನಷ್ಟು ಪುಸ್ತಕಗಳು ನಿಮ್ಮಿಂದ ಹೊರಬರಲಿ.