ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ’ಸೂರ್ಯನನ್ನು ಹೆತ್ತಿದ್ದು ನಾನೇ…’

’ಅವಧಿ’ಯ ಓದುಗರೂ ಮತ್ತು ತಮ್ಮ ಭಾವಪೂರ್ಣ ಕವನಗಳ ಮೂಲಕ ಅವಧಿ ಬಳಗಕ್ಕೆ ಪರಿಚಿತರೂ ಆಗಿರುವ

ಎಂ ಎಂ ಶೇಕ್ ಅವರ ಕವನ ಸಂಕಲನ ’ಸೂರ್ಯನನ್ನು ಹೆತ್ತಿದ್ದು ನಾನೆ’ ಬಿಡುಗಡೆ ಆಗಿದೆ.

ಅವರಿಗೆ ’ಅವಧಿ’ಯ ಶುಭಾಶಯಗಳು

ಪುಸ್ತಕದ ಮುಖ ಪುಟ ಮತ್ತು ಕಿರು ಪರಿಚಯ ನಿಮಗಾಗಿ

ಎಂ ಎಂ ಶೇಖ್

‘ಸೂರ್ಯನನ್ನು ಹೆತ್ತಿದ್ದು ನಾನೇ’ ತಲೆಬರಹದಲ್ಲಿ ೫೨ ಕವನಗಳ ಗರಿಗಳನ್ನು ಜೋದಿಸಿತ್ತಿರುವ್ ಕವಯತ್ರಿ ಎಂ ಎಂ ಶೇಖ್ ನನ್ನ ಹೆಮ್ಮೆಯ ವಿದ್ಯಾರ್ಥಿನಿ. ಅವರ ಕಾವ್ಯದ ತುಣುಕುಗಳನ್ನು ನನ್ನ ಅವಗಾಹನೆಗೆ ಅವರು ತಾರದೆ ಇದ್ದಿದ್ದರೆ ನನ್ನ ಅಸಂಖ್ಯಾತ ವಿದ್ಯಾರ್ಥಿಗಳೊಂದಿಗೆ ಅವರೂ ನನ್ನ ಪಾಲಿಗೆ ಕಳೆದು ಹೋಗುತ್ತಿದ್ದರೇನೋ… ?

ಶೇಖ್ ಅವರ ಕವನಗಳು ಪರ್ಯಾಯ ಚಿಂತನೆಗಳನ್ನು ರೂಪಿಸುತ್ತವೆ, ಸೂಚಿಸುತ್ತವೆ ಎಂದು ನಾನು ನಂಬುವುದಿಲ್ಲ. ಬದಲಾಗಿ ಈಗಿರುವ್ ವ್ಯವಸ್ಥೆಯನ್ನು ಮರು ಚಿಂತನೆಗೆ ಒಳಪವಿಸಲು ಬೇಕಾಗಿರುವ ಚರ್ಚಾ ಸಾಮಗ್ರಿಯನ್ನು ಒದಗಿಸುತ್ತವೆ. ಭ್ರಷ್ಟಗೊಂಡಿರುವ ಇಡೀ ಷಡ್ಯಂತ್ರದಿಂದ ನೋವುಗಳೇ ನಮ್ಮನ್ನು ಆಳುತ್ತಿರುವ ಈ ದಿನಗಳಲ್ಲಿ ಈ ಕವನಗಳು ವ್ಯವಸ್ಥೆಯ ಅನಿವಾರ್ಯತೆಗೆ ಬೆನ್ನುಕೊಟ್ಟಿರುವ ಎಲುವಿನ ಹಂದರದ ನಿರ್ಭಾಗ್ಯರ ಕಣ್ಣೀರ ಕಥೆಗಳನ್ನು ಹೇಳುತ್ತವೆ, ಕೆಲ ಕವನಗಳು ಬಿರಿದ ಹೃದಯ, ಮನಸ್ಸುಗಳ ಹಾಹಾಕಾರದ ಚೀತ್ಕಾರಗಳಾಗಿವೆ.
ಕವಯತ್ರಿ ಶೇಖ್ ಅವರು ಬೆನ್ನ ಹಿಂದೆ ಬಚ್ಚಿಟ್ಟುಕೊ೦ಡಿರುವ ತಮ್ಮ ಸಾಹಿತ್ಯವನ್ನು ಮುಂದಾದರೂ ಪ್ರಕಾಶಕ್ಕೆ ತರುವ ಮನಸ್ಸು ಮಾಡಲಿ. ಸ್ಪಂದನ ಸ್ಥಗಿತಗೊಂಡಿರುವ ಸಮಾಜದ ಎಲ್ಲಾ ಮನಸ್ಸುಗಳಿಗೆ ಹೊಸ ಚೇತನ ಕೊಡಲಿ ಎಂದು ಶುಭ ಹಾರೈಸುತ್ತೇನೆ.
ಪ್ರೊ ಸಿ ಎಂ ಪಟ್ಟೆದಾರ
ಸಂಪಾದಕರು
‘ಸ್ನೇಹಗಂಗಾ’ ಮಾಸಪತ್ರಿಕೆ, ಯಾದಗಿರಿ

‍ಲೇಖಕರು avadhi

24 February, 2014

3 Comments

  1. h a patil

    – sir naavu m.m.shekha ravar kavanagalannu antarjala taanagalalli kelavannu odiddeve bahala chennagi bareyuttare, avara kavana galalli jeevanad bagegina sookshma olanotagalive oduganannu chintanege hacchuttave. avara kavan sankalana horabaruttiruvudu santasada sangati. samaranbha yashasviyaagali avara saahitya seve heegeye munduvariyili.

  2. mmshaik

    sir,
    thanks..!!

  3. gururaj katriguppe

    good luck, and all the best. m m sheck.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading