
ವೈಜ್ಞಾನಿಕ ದೃಷ್ಟಿ, ವೈಜ್ಞಾನಿಕ ಮನೋಭಾವ ಎಂದರೇನು? ಈ ಪ್ರಶ್ನೆಯನ್ನು ನಾವು ಯಾರಲ್ಲಿ ಕೇಳಬೇಕು? ಪವಾಡ ಪುರುಷರೋ, ಜ್ಯೋತಿಷಿಗಳೋ, ಪುರೋಹಿತಶಾಹಿಯೋ ಇದಕ್ಕೆ ಸರಿಯುತ್ತರ ನೀಡಲಾರರು ! ಅವರ ವೃತ್ತಿಗೆ ಅದು ಮಾರಕ! ಅಂಥ ಮನೋಭಾವ ನಮ್ಮಲ್ಲಿ ಬೆಳೆಯದಂತೆ ಬೇಕಾದರೆ ಅವರು ನೋಡಿಕೊಂಡಾರು. ಸರಿಯಾದ ವೈಜ್ಞಾನಿಕ ಮಾಹಿತಿ ಲಭ್ಯವಿಲ್ಲದ ಕಾಲದಲ್ಲಿ ಕೇವಲ ನಂಬಿಕೆ – ಊಹೆಗಳ ಆಧಾರದಿಂದ ಸಮಾಜದಲ್ಲಿ ಕೆಲವು ಮೌ ಗಳು ಮನೆಮಾಡಿದವು. ಇಂದು ವಿಜ್ಞಾನದ ನಿಖರ ಲೆಕ್ಕಾಚಾರಗಳಿಂದ ಅವೆಲ್ಲ ತಲೆಕೆಳಗಾಗಿ ಅಂಗೀಕಾರ ಯೋಗ್ಯವಲ್ಲವೆಂದು ಸಿದ್ಧವಾಗಿವೆ. ಕುರುಡು ನಂಬಿಕೆಗಳನ್ನು ತಕ್ಷಣ ನಂಬದೆ ನಿಜಾಂಶ ಏನೆಂದು ತಿಳಿಯುವಲ್ಲಿ ಪ್ರಯತ್ನಿಸುವುದೇ ವೈಜ್ಞಾನಿಕ ಮನೋಭಾವ ಬೆಳೆಯುವುದಕ್ಕೆ ಸಹಕಾರಿ. ವೈಜ್ಞಾನಿಕ ಬರವಣಿಗೆಯಲ್ಲಿ ನುರಿತ ಬಹುಶ್ರುತರೆಂದು ಖ್ಯಾತರಾದ ಜೆ. ಆರ್. ಲಕ್ಷ್ಮಣ ರಾವ್ ಇಲ್ಲಿನ ಬರಹಗಳನ್ನು ಸುಲಭಗ್ರಾಹ್ಯವಾಗುವ ಭಾಷೆಯಲ್ಲಿ ನಿರೂಪಿಸಿದ್ದಾರೆ. ಅವರ ವಿದ್ವತ್ತು ಮತ್ತು ಅನುಭವ ಬಹು ಎತ್ತರದಲ್ಲಿದ್ದು ವಯಸ್ಸಿನಲ್ಲೂ ಹಿರಿಯರು. ಇವರ ಹಲವಾರು ಪುಸ್ತಕಗಳಲ್ಲದೆ ಆತ್ಮಕಥೆಯೊಂದನ್ನು ಸಹ ನವಕರ್ನಾಟಕ ಪ್ರಕಟಿಸಿದೆ.
ಡೈಲಿ ಬುಕ್ : ’ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳುವುದು ಹೇಗೆ?’
ನಿಮಗೆ ಇವೂ ಇಷ್ಟವಾಗಬಹುದು…

ಇಂಥ ಪುಸ್ತಕದ ಅವಶ್ಯಕತೆ ಇತ್ತು.ಸಕಾಲದಲ್ಲಿ ಈ ಪುಸ್ತಕ ಬಂದಿರುವುದು ಸಂತಸದ ಸಂಗತಿ.