ರಹಮತ್ ತರೀಕೆರೆ
ನಲವತ್ತರ ದಶಕದ ಜನಪ್ರಿಯ ಹಾಡುನಟಿ ಅಮೀರ್ ಬಾಯಿ ಕರ್ನಾಟಕಿ (೧೯೧೨-೧೯೬೫) ಅವರ ಜೀವನ ಕಥನವಿದು . ಬಿಜಾಪುರ ಸೀಮೆಯ ಈ ಮಹಾನ್ ಗಾಯಕಿ ಹುಟ್ಟಿ ಈಗ ಶತಮಾನ ತುಂಬಿದೆ. ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ಮನ್ಸೂರ್ ಮುಂತಾದವರ ಜತೆಗೂಡಿ, ‘ಕಿತ್ತೂರ ರುದ್ರಮ್ಮ’ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದ ಇವರು, ಕನ್ನಡದ ಐದನೇ ವಾಕ್ಚಿತ್ರ ‘ಚಿರಂಜೀವಿ’ (೧೯೩೫) ಒಳಗೊಂಡಂತೆ, ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿ ಹಾಡಿದರು.

ಇವರ ಮಧುರವಾದ ಹಾಡುಗಳಿಂದ ಪ್ರಸಿದ್ಧವಾದ ‘ಕಿಸ್ಮತ್’ (೧೯೪೩) ಚಿತ್ರ, ಮೂರು ವರ್ಷ ಎಂಟು ತಿಂಗಳ ಕಾಲ ಪ್ರದರ್ಶನಗೊಂಡು, ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿತು. ಬಿಜಾಪುರ ಸೀಮೆಯ ಬೀಳಗಿಯಂತಹ ಪುಟ್ಟ ಊರಿನ ಸಾಮಾನ್ಯ ಕುಟುಂಬದಿಂದ ಮುಂಬೈ ಶಹರಿಗೆ ಹೋದ ಅಮೀರ್, ೩೦-೪೦ ರ ದಶಕಗಳಲ್ಲಿ ಮುಂಬೈ ಚಿತ್ರರಂಗದಲ್ಲಿ ತಮ್ಮ ಗಾಯನದ ಮೂಲಕ ದೊಡ್ಡ ಸಾಧನೆ ಮಾಡಿದರು. ‘ವೈಷ್ಣವ ಜನತೋ’ ಹಾಡಿನ ಮೂಲಕ ಗಾಂಧೀಜಿಗೆ ಪ್ರಿಯವಾಗಿದ್ದ ಇವರ ಅನೇಕ ಹಾಡುಗಳು ಬ್ರಿಟಿಷ್ ವಿರೋಧಿ ಚಳುವಳಿಯಲ್ಲಿ ಪ್ರಭಾತ್ ಫೇರಿ ಗೀತೆಗಳಾದವು; ಮುಂಬೈ ಲೋಕಲ್ ಟ್ರೈನುಗಳಲ್ಲಿ ಭಿಕ್ಷುಕರ ಹಾಡುಗಳಾಗಿಯೂ ಬಳಕೆಯಾದವು. ಕಾಲಗರ್ಭದಲ್ಲಿ ಹೂತುಹೋಗಿದ್ದ ಈ ಗಾಯಕಿಯ ಚರಿತ್ರೆಯನ್ನು, ನೂರಾರು ಜನರ ಭೇಟಿ ಮತ್ತು ಐದು ವರ್ಷದ ತಿರುಗಾಟದಲ್ಲಿ ಸಿಕ್ಕ ಚಿಕ್ಕಪುಟ್ಟ ಎಳೆಗಳನ್ನು ಜೋಡಿಸಿ ಕಟ್ಟಲಾಗಿದೆ. ಮೇಲ್ನೋಟಕ್ಕೆ ಇದು ಹಾಡುನಟಿಯೊಬ್ಬಳ ಜೀವನ ಚರಿತ್ರೆ; ಆದರೆ ಆಳದಲ್ಲಿ ೧೯೨೦-೧೯೫೦ ರ ರಂಗಭೂಮಿ, ಸಿನಿಮಾ, ಸಂಗೀತ ಹಾಗೂ ವಸಾಹತುಶಾಹಿ ವಿರೋಧಿ ಆಂದೋಲನಗಳು ಏಕೀಭವಿಸಿರುವ ಸಾಂಸ್ಕೃತಿಕ ಕಥನ.
ಪಲ್ಲವ ಪ್ರಕಾಶನ
ಬೆಲೆ : ರೂ. ೩೦೦/-



naanu mayuradalli odida nenapu…aa lekhana kuuda sir avaradde..!!!!