ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ’ಮೊಗಸಾಲೆಯ ಮುಖಾಂತರ’

 
ಸಾಹಿತ್ಯವೆನ್ನುವುದು ಹಲವು ಅರ್ಥಗಳಲ್ಲಿ ಸ್ವಾಂತಸುಖಾಯ ಆಗುತ್ತಿರುವ ಹೊತ್ತೊಂದರಲ್ಲಿ ಮೊಗಸಾಲೆಯವರು ಹಲವು ಅರ್ಥಗಳಿಂದ ಎತ್ತರದ ವ್ಯಕ್ತಿಯೆನಿಸಿಕೊಳ್ಳುತ್ತಾರೆ. ಅವರು ಕಾಂತಾವರದಲ್ಲಿ ಮಾತ್ರವಲ್ಲ. ಕನ್ನಡನಾಡಲ್ಲೇ ಒಂದು ನಿಶ್ಯಬ್ದ ಕ್ರಾಂತಿಯನ್ನು ಆಗುಮಾಡಿದ್ದಾರೆ ಮಾಡುತ್ತಿದ್ದಾರೆ. ಅದೊಂದು ಕ್ರಾಂತಿಯೆಂದು ನಮಗಾರಿಗೂ ಅನಿಸದ ಸಮಶೀತೋಷ್ಣದಲ್ಲಿ.

ಈ ಕತೆಯಂತಹ ಕತೆ ಆರಂಭವಾಗುವುದು ಕಾಸರಗೋಡು ತಾಲೂಕಿನ ಮೊಗಸಾಲೆಯಲ್ಲಿ. ಆದರೆ ಮುಂದೊಂದು ದಿನ ಈ  ಕವಿ ಹಿಂದೆಂದೊ ಕಂಡಿರದ ಕಾಂತಾವರದಲ್ಲಿ ನೆಲೆಕಂಡದ್ದು. ಅಲ್ಲೊಂದು ಕನ್ನಡದ ಪರ್ಯಾಯ ಸಾಂಸ್ಕ್ರತಿಕ ರಾಜಧಾನಿಯನ್ನು ಕಟ್ಟದ್ದು, ಮಾಗಿ ಅಪ್ರತಿಹತ ಸಾಹಿತ್ಯ ಪರಿಕಕರ್ಮಿಯಾದದ್ದು ಮಾತ್ರ ಕತೆಯನ್ನು ಮೀರಿದ ಕತೆ.

ಐವತ್ತು ವರ್ಷಗಳ ಹಿಂದೆ ಕಾಂತಾವರವೆಂದರೆ ಕರ್ನಾಟಕದ ಮ್ಯಾಪ್ ನಲ್ಲಿ ಕಾಣಿಸದ, ಕಾರ್ಕಳ ಮಂಗಳೂರು ಮೂಡಬಿದಿರೆಗಳ ಮಂದಿ ಕೂಡಾ. ಏನು ಎತ್ತ ಎಲ್ಲಿ ಎಂದು ಕೇಳುತ್ತಿದ್ದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದ ಹಳ್ಳಿ. ಇವತ್ತು ಕನ್ನಡ ಸಂಘ ಮತ್ತು ಅಲ್ಲಮಪ್ರಭು ಪೀಠಗಳಿಂದಾಗಿ ಕಾಂತಾವರದ ಹೆಸರು ನಾಡಿನಾದ್ಯಂತ ಅನುರಣಿಸುತ್ತಿದೆ. ಮೊಗಸಾಲೆಗೆ ಎಪ್ಪತ್ತು ತುಂಬಿದ ಈ ಹೊತ್ತು ಆ ಅನುರಣನ ಯಾವ ಋತ್ವಿಜರ ಮಂತ್ರಘೋಷಕ್ಕೆ ಕಮ್ಮಿಯಿಲ್ಲದಂತಹದು.
Poets are the unacknowledgede legislators of the world ಎಂಬ ಷೆಲ್ಲಿಯ ಮಾತಿಗೆ ಕಾಂತಾವರ ಬರೆದ ಪುನರ್ಭಾಷ್ಯ  ಈ ಮೊಗಸಾಲೆ.
 

‍ಲೇಖಕರು avadhi

28 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading