ಸಂಸ್ಕೃತಿಯನ್ನು ಕುರಿತು ಬಹಳಷ್ಟು ಅಧ್ಯಯನಗಳು ನಡೆಯುತ್ತಿವೆ. ‘ಸಂಸ್ಕೃತಿ’ ಪದದ ವ್ಯಾಪ್ತಿಯು ವಿಸ್ತಾರಗೊಂಡಿದೆ. ಬಹು ಸಮುದಾಯಗಳ ಬದುಕಿನ ವಿನ್ಯಾಸಗಳ ಮೂಲಕ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಕ್ರಮ ಬೆಳೆಯುತ್ತಿದೆ. ಈ ಬೆಳವಣಿಗೆಯಲ್ಲಿ ಮಹಿಳೆ ಎಲ್ಲಿದ್ದಾಳೆ ಎಂದು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ಮಂದುವರಿದು ‘ಮಹಿಳಾ ಸಂಸ್ಕೃತಿ’ ಎಂಬುದೊಂದು ಪ್ರತ್ಯೇಕ ಸಂಸ್ಕೃತಿ ಇದೆಯೇ ಎಂದು ಯೋಚಿಸಲಾಗುತ್ತಿದೆ. ಮಹಿಳೆಯದೆ ಜೀವನ ವಿಧಾನವನ್ನು ಸಂಸ್ಕೃತಿ ಎಂದು ಕರೆಯಬಹುದೆ ಎಂಬ ಸಮಸ್ಯೆಯು ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಬರಹಗಳು ಇವೆ.

ಮಹಿಳೆಗೆ ಸಂಬಂಧಿಸಿದ ಕೆಲವು ಆಚರಣೆಗಳನ್ನು ಕೇಂದ್ರವಗಿಟ್ಟುಕೊಂಡು ಈ ಕೃತಿ ಆಲೋಚಿಸುತ್ತದೆ. ಆಚರಣೆಗಳು ಮಹಿಳೆಗೆ ಸಂಬಂಧಿಸಿದವು ಅನಿಸಿದರು ಕೂಡ ಅವು ಪುರುಷಾಧೀನಗೊಳಿಸುವ ಮನಸ್ಸನ್ನು ಹೊಂದಿವೆ ಎಂದು ಈ ಅಧ್ಯಯನ ಹೇಳುತ್ತದೆ. ಆಚರಣೆಗಳನ್ನು ಚರಿತ್ರೆ ಮತ್ತು ಸಮಾಜಿಕ ಆಯಾಮಗಳಲ್ಲಿ ನೋಡಲಾಗಿದೆ. ಮಹಿಳೆಯನ್ನು ಪುರುಷನಷ್ಟೇ ಸಮಾನತೆಯಿಂದ ಕಾಣಬೇಕೆಂಬ ಮನೋಭಾವ ಸಮಾಜಿಕವಾಗಬೇಕೆಂದು ಈ ಬರಹಗಳು ನಂಬುತ್ತವೆ. ಸಮಾನತೆಗೆ ಇರುವ ಸಮಾಜಿಕ ತೊಡಕುಗಳನ್ನು ಹುಡುಕುವ ಪ್ರಯತ್ನ ಈ ಕೃತಿ ಮಾಡುತ್ತದೆ.



0 Comments