ಮಮತಾ ಜಿ. ಸಾಗರ
ನನ್ನ ಅಭಿಮಾನದ ಬಾಲೆ ಮಮತಾ. ಆಕೆ ಕೈಗೆತ್ತಿಕೊಳ್ಳುವ ಎಲ್ಲ ಕಾರ್ಯದಲ್ಲೂ ಹೊಸ ಚಿಂತನೆ – ಗುರಿ ಇರುತ್ತದೆ. ಬರೆದ ನಾಟಕಗಳಲ್ಲಿ, ಆಡುವ ಮಾತಿನಲ್ಲಿ ಇತರರು ಸರಳಸತ್ಯವೆಂದು ನಿರ್ಲಕ್ಷಿಸಿರುವ ‘ಅಲ್ಲೇ ಇರುವ’ ವಿಷಯಗಳನ್ನೇ ಸೀಳಿ ಮಿಂಚುಗಳನ್ನು ಬಗೆದು ತೆಗೆವ ಬಗೆಗೆ ಬರೆಗಾಗಿದ್ದೇನೆ. ‘ನದಿಯ ನಿರೀನ ತೇವ’ ದ ಮೂಲಕ ಮತ್ತಷ್ಟು ಸೆಳೆ ಮಿಂಚುಗಳು ಹೊರಬರಲು ನಿಮಿತ್ತಳಾದೆನೆಂಬ ಸಂತೋಷ ನನ್ನದು.
ಮೇಲು ನೋಟಕ್ಕೆ ಹೋವಿನೆಸಳೇ ಭಾರ ಎಂಬಷ್ಟು ಸೂಕ್ಷ್ಮದ ಬಾಲೆ ಮಮತಾಳ ಅವರಿವರ ಹಾಡಿಯಲ್ಲಿಲ್ಲದ ತನ್ನದೇ ವಿಚಾರಧಾರೆಯ ಒಜ್ಜೆ ಮಾತ್ರ ‘ಇನ್ನೂ ಸ್ವಲ್ಪ . .. . ಐಸ್ಸಾ. . . ‘ ಅನ್ನಿಸುವಷ್ಟು! ಅದನ್ನು ಮುಂಬಾಲಿಸುವ ಹೊಸತನಕ್ಕೆ ಅದು ನಿಜವಾದ ಹೆದ್ದಾರಿ ಕೂಡಾ. ಬರಿದೆ ಹೇಳದೆ ಕಾಣಿಸುವ, ಕಂಡದ್ದರಲ್ಲಿ ಕಾಣದ್ದೂ ಉಂಟೆಂದು ಎಚ್ಚರಿಸುವ ಧ್ವನಿ ಹಾಗೂ ನಿಶ್ಯಬ್ದಗಳ ಸೋಗಿನ ಮೌನ ಮುರಿದ ಚಿತ್ತಾರದ ಈ ಹಾಡು ನಾನು, ನೀನು ಹೇಳುವ ‘ಅವಳೆಂಬ’ ಚೌಕಟ್ಟಿನಲ್ಲಿಲ್ಲ ಎನ್ನುತ್ತ ರೋಮ ರೋಮಕ್ಕೂ ಲಗ್ಗೆ ಇಟ್ಟು ಕೊಲ್ಲುತ್ತದೆ.ಇಲ್ಲಿದೆ,

ಇದ್ದಲ್ಲೇ.
ಜಡ್ಡುಬಿದ್ದು ಒಣಗುತ್ತಿರುವ ಚಿಂತನೆಗಳಿಗೊಂದಿಷ್ಟು ‘ತೇವ’ ಗೊಳ್ಳುವ ಅವಕಾಶ.
ವಿಜಯಾ
(ಬೆನ್ನುಡಿಯಿಂದ)



abhinandanegaLu.
ಸಾಧಾರಣವಾಗಿ ಕವನ ಸಂಕಲನಗಳು ಪುಸ್ತಕದಂಗಡಿಯಲ್ಲಿ ಸಿಗುವುದು ಕಷ್ಟ. ಈ ಸಂಕಲನದ ಪ್ರಕಾಶಕರ ಹೆಸರು, ವಿಳಾಸ ಮತ್ತು ಬೆಲೆ ತಿಳಿಸಿದರೆ ಉತ್ತಮವಲ್ಲವೆ?