ರಾಜಶೇಖರ ಅವರು ವೃದ್ಧರ ನೆಲೆಯಲ್ಲಿ ನಿಂತು ಯುವಜನಾಂಗವನ್ನು; ಗ್ರಾಮೀಣ ಜನರ ನೆಲೆಯಲ್ಲಿ ನಿಂತು ಆಧುನಿಕತೆ ಮತ್ತು ಬೃಹತ್ ಯಂಗ್ರಗಳನ್ನು; ಸಾಂಪ್ರದಾಯಿಕ ಜೀವನ ಶೈಲಿಯಲ್ಲಿ ನಿಂತು ಯಾಂತ್ರಿಕ ಭೌತಿಕ ಜೀವನ ಶೈಲಿಯನ್ನು ನೋಡುತ್ತಾರೆ. ಈ ಮೂಲಕ ಶೀಥಿಲಗೊಳ್ಳುತ್ತಿರುವ ‘ಗ್ರಾಮಮೌಲ್ಯ’ಗಳನ್ನು ಶೋಧಿಸುವ ತೀವ್ರ ತುಡಿತ ಇವರ ಕಥೆಗಳ ಅಘೋಷಿತ ಅಂತರ್ ವಾಹಿನಿಯಾಗಿದೆ.
ಸಾಮಾಜಿಕ ಚಲನಶೀಲತೆಯ ವಿಕೃತ ಪರಿಣಾಮಗಳ ಬಗ್ಗೆ ವಿಷಾದ, ವ್ಯಂಗ್ಯ ಮತ್ತು ಸಾತ್ವಿಕ ಆಕ್ರೋಶಗಳು ಇಲ್ಲಿನ ಕತೆಗಳ ತಳಹದಿಯಾಗಿದೆ. ಇವರಿಗೆ ಭಾಷೆಯ ಮೇಲೆ ಸಹಜವಾದ ಹಿಡಿತವಿದೆ. ಕತೆಯನ್ನು ಕಟ್ಟುವ ಕ್ರಿಯೆಗೆ ತಾತ್ವಿಕ ದೃಷ್ಟಿಕೋನವನ್ನು ರೂಢಿಸಿಕೊಂಡರೆ ಮುಂದೆ ಇನ್ನೂ ಒಳ್ಳೆಯ ಕಥೆಗಳನ್ನು ಬರೆಯಬಲ್ಲರು.
ಡಾ.ಬಿ.ಎಂ. ಪುಟ್ಟಯ್ಯ



0 Comments