ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಬಿಳುಮನೆ ರಾಮದಾಸ್ ಅವರ ’ಅನಾವರಣ’

ಬಿಳುಮನೆ ರಾಮದಾಸ್

‘ಅನಾವರಣ’ ಸರ್ಕಾರಿ ಇಲಾಖೆಯೊಂದರ ಕಾರ್ಯ ವೈಖರಿ ಕುರಿತು ಬರೆದ ಕಾದಂಬರಿ. ಮೇಲುನೋಟಕ್ಕೆ ಇದು ವಾಣಿಜ್ಯ ತೆರಿಗೆ ಇಲಾಖೆಯ ಕತೆಯಾದರೂ ಎಲ್ಲಾ ಸರ್ಕಾರಿ ಇಲಾಖೆಗಳ ಕತೆ ಕೂಡ ಆಗಿದೆ. ಇಲ್ಲಿ ಭ್ರಷ್ಟಾಚಾರ ಒಂದೇ ಅಲ್ಲ; ವ್ಯಭಿಚಾರ, ಹಿರಿಯ ಅಧಿಕಾರಿಗಳಾಗಲು ಕಿರಿಯ ಅಧಿಕಾರಿಗಳು ನಡೆಸುವ ಷಡ್ಯಂತ್ರ, ಮೂಗರ್ಜಿ ಬರೆದು ಮತ್ತೊಬ್ಬರ ತೇಜೋವಧೆ ಮಾಡುವುದು, ಸಂಸಾರಗಳನ್ನೇ ಒಡೆಯುವುದು, ಮಹಿಳಾ ನೌಕರರ ಶೋಷಣೆ, ಮಾಸಿಕ ನಜರು ಒಪ್ಪಿಸದ ಅಧಿಕಾರಿಗಳ ವಾರ್ಷಿಕ ರಹಸ್ಯ ವರದಿಯನ್ನು ಕೆಡಿಸಿ ಅವರ ಬಡ್ತಿಗೆ ಕಲ್ಲು ಹಾಕುವುದು, ಪ್ರಾಮಾಣಿಕ ಅಧಿಕಾರಿಗಳಿಗೆ ರಾಜಕಾರಣಿಗಳ ಕಿರುಕುಳ, ತಲೆಹಿಡುಕರ ದರ್ಬಾರು, ಪೀತ ಪತ್ರಿಕೆಗಳು ನಡೆಸುವ ಹುನ್ನಾರ, ಪ್ರಾಮಾಣಿಕವಾಗಿ ತೆರಿಗೆ ಸಲ್ಲಿಸದ ವ್ಯಾಪಾರಿಗಳು, ಮಧ್ಯವರ್ತಿಗಳು ಅಧಿಕಾರಿಗಳ ಹೆಸರಿನಲ್ಲಿ ಹಣ ಹೊಡೆಯುವುದು ಇತ್ಯಾದಿ ವಿವರಗಳನ್ನು ದಾಖಲಿಸಿದ್ದಾರೆ. ಇಂತಹ ವಸ್ತುವೊಂದನ್ನು ಆಯ್ಕೆಮಾಡಿಕೊಂಡು ಬರೆದಿರುವ ಕಾದಂಬರಿ ಕನ್ನಡ ಸಾಹಿತ್ಯದಲ್ಲಿ ಹೊಸದು. ಇಂತಹದ್ದೊಂದು ಮಹತ್ವದ ಕೃತಿ ನೀಡಿದ ಮಲೆಯ ಸಂತ ರಾಮದಾಸ್ ಅಭಿನಂದನಾರ್ಹರು.

(ಬೆನ್ನುಡಿ )
ಪ್ರಕಾಶಕ
ಪ್ರಗತಿ ಗ್ರಾಫಿಕ್ಸ್ ಬೆಂಗಳೂರು
ಬೆಲೆ : ೨೨೫/-

‍ಲೇಖಕರು avadhi

19 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading