ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ – ’ಫಿಡೆಲ್ ಕ್ಯಾಸ್ಟ್ರೋ ವಿಚಾರಗಳ ಸಮರ’

ಫಿಡೆಲ್ ಕ್ಯಾಸ್ಟ್ರೋ

ವಿಚಾರಗಳ ಸಮರ

ನಾವು ಆ ಯುದ್ಧವನ್ನು ಎದುರಿಸಿದ್ದೇವೆ. ಎಲ್ಲ ಸಮರಗಳಲ್ಲಿ-ಅದು ಮಿಲಿಟರಿಯದ್ದಾಗಿರಲಿ,ರಾಜಕೇಯವಾಗಿರಲಿ ಅಥವ ತಾತ್ವಿಕ ಸಮರವಾಗಿರಲಿ-ಇರುವಂತೆ ಇಲ್ಲಿಯೂ ಗಾಯಾಳುಗಳಿದ್ದಾರೆ.

ಕೆಲವರು ಗೊಂದಲಕ್ಕೀಡಾಗಬಹುದು, ಕೆಲವರು ಆರ್ಥಿಕ ಕಷ್ಟಗಳು, ಭೌತಿಕ ಸಂಕಟಗಳು, ಕೊಳ್ಳುಬಾಕ ಸಮಾಜಗಳಲ್ಲಿ ಸುಖಭೋಗಗಳ ಪ್ರದರ್ಶನ ಮತ್ತು ಮಾನವರು ರೊಟ್ಟಿ ತುಣುಕು ತೋರಿಸಿದಾಗ ಅಥವ  ಚಾಟಿಯೇಟು ಬೀಸಿದಾಗ ಮಾತ್ರವೇ ಚಲಿಸುವ ಪ್ರಾಣಿಗಳೆಂಬ ಹೀನ ಕಲ್ಪನೆಯನ್ನಾಧೆರಿಸಿದ ಆರ್ಥಿಕ ವ್ಯವಸ್ಥೆಯ ವೈಭವಪೂರ್ಣ ಪ್ರಯೋಜನಗಳ ಸಿಹಿ ಲೀಪಿತ ಕೊಳೆತ ವಿಚಾರಗಳೆಲ್ಲ ಸೇರಿಕೊಂಡು ದುರ್ಬಲಗೊಳ್ಳಬಹುದು.

ಅವರ ತತ್ವಸಿದ್ಧಾಮತಗಳೆಲ್ಲ ಇದರ ಮೇಲೆಯೆ ನಿಂತಿದೆಯೆನ್ನಬಹುದು. ಗಾಯಾಳುಗಳಿರುತ್ತಾರೆ, ಆದರೆ ಇತರೆಲ್ಲ ಸಮರಗಳಂತೆ ಇತರರು ಅನುಭವವನ್ನೂ ಗಳಿಸುತ್ತಾರೆ, ಹೋರಾಟಗಾರರು ಪರಿಣಿತರಾಗುತ್ತಾರೆ; ಮತ್ತು ಹೋರಾಟವನ್ನು ಮುಂದುವರೆಸಲು ಅಗತ್ಯವಾದ ಸ್ಥೈರ್ಯ ಮತ್ತು ಶಕ್ತಿಯನ್ನು ಬೆಳೆಸಲು ನೆರವಾಗುತ್ತಾರೆ. ನಾವು ವಿಚಾರಗಳ ಸಮರವನ್ನು ಗೆಲ್ಲುತ್ತಿದ್ದೇವೆ.

ನಮ್ಮ ಪುಟ್ಟ ದ್ವೀಪ ಹೋರಾಡಬೇಕಾದರೂ, ಸಮರಭೂಮಿ ನಮ್ಮ ಪುಟ್ಟ ದ್ವೀಪಕ್ಕೇ ಸೀಮಿತವಾಗುವುದಿಲ್ಲ. ಇಂದು ವಿಶ್ವವೇ ಸಮರಾಂಗಣ-ಎಲ್ಲೆಡೆಗಳಲ್ಲಿ, ಪ್ರತಿ ಖಂಡದಲ್ಲಿ,ಪ್ರತಿ ಸಂಸ್ಥೆಯಲ್ಲಿ, ಪ್ರತಿ ವೇದಿಕೆಯಲ್ಲಿ, ಪ್ರತಿ ಖಂಡದಲ್ಲಿ, ಪ್ರತಿ ಸಂಸ್ಥೆಯಲ್ಲಿ, ಪ್ರತಿ ವೇದಿಕೆಯಲ್ಲಿ. ಇದೀಗ ಜಾಗತೀಕರಣಗೊಂಡ ಹೋರಾಟದ ಉತ್ತಮ ಭಾಗ.

ಅವರು ಪ್ರಾಬಲ್ಯ ಮೆರೆಸುತ್ತಿರುವ, ಅಥವ ಮೆರೆಸಬೇಕೆಂದಿರುವ ಬೃಹತ್ ಜಗತ್ತಿಲ್ಲೆಡೆ ಹೋರಾಡುತ್ತಲೇ ಈ ಸಣ್ಣ ದ್ವೀಪವನ್ನೂ ರಕ್ಷಿಸಿಕೊಳ್ಳಬೇಕಾಗಿದೆ. ಕೆಲವು ಕ್ಷೇತ್ರಗಳಲ್ಲಿ ಅವರು ಸುಮಾರಾಗಿ ಸಂಪೂರ್ಣ ಪ್ರಾಬಲ್ಯವನ್ನೇ ಹೊಂದಿದ್ದಾರೆ, ಆದರೆ ಎಲ್ಲ ಕ್ಷೇತ್ರಗಳಲ್ಲಲ್ಲ. ಅಥವಾ ಅದೇ ರೀತಿ, ಅಥವ ಪ್ರತಿಯೊಂದು ದೇಶದಲ್ಲಲ್ಲ.

ಫಿಡೆಲ್ ಕ್ಯಾಸ್ಟ್ರೋ

 

‍ಲೇಖಕರು avadhi

4 March, 2013

1 Comment

  1. pravara

    ಈ ಪುಸ್ತಕ ಎಲ್ಲಿ ಸಿಗಬಹುದು ಯಾರಾದರೂ ಹೇಳುವಿರಾ?????

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading