ಶ್ರೀಮತಿ ಬಿ ಎಂ ರೋಹಿಣಿ-
ನಿವೃತ್ತ ಅಧ್ಯಾಪಿಕೆ, ಲೇಖಿಕೆಯಾಗಿ ಮುಂದುವರಿಕೆ. ವಿಶೇಷವಾಗಿ ಮಹಿಳೆಯರ, ಶಿಕ್ಷಣದ ಸಮಸ್ಯೆಗಳ ಮೇಲೆಯೇ ಇವರ ಚಿಂತನೆಗಳು. ಆದರೆ ಯಾವುದೇ ‘ವಾದಿ’ ಪಟ್ಟಕ್ಕೆ ಸಿಗದ ರೀತಿಯಲ್ಲಿ ಇವರ ನಿರ್ವಹಣೆ. ಆಳವಾದ ಅಧ್ಯಯನ, ನಿಷ್ಪಕ್ಷಪಾತ ದೃಷ್ಟಿಕೋನ, ತಾಳ್ಮೆ- ಇವರ ಶಿಸ್ತು. ‘ಸ್ತ್ರೀ ಸಂವೇದನೆ’ ಕೃತಿಗೆ ದ.ಸಾ.ಪ.ದ ಲಲಿತಾದೇವಿ ಗುರುಸಿದ್ಧಪ್ಪ ಸಿಂಧೂರ ದತ್ತಿ ನಿಧಿ ಪ್ರಶಸ್ತಿ; ‘ಸ್ತ್ರೀ-ಶಿಕ್ಷಣ-ಸಂಸ್ಕೃತಿ’ಗೆ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಶ್ರೇಷ್ಠ ಕೃತಿ ಮಾನ್ಯತೆ- ಹೆಗ್ಗಳಿಕೆಗಳೇ. ಈಗಾಗಲೇ ‘ಅವಿವಾಹಿತ ಮಹಿಳೆಯರ ಸಮಾಜೋ- ಸಾಂಸ್ಕೃತಿಕ ಅಧ್ಯಯನ’ಕ್ಕೆ ಒಡ್ಡಿಕೊಂಡಿರುವ ಶ್ರೀಮತಿ ರೋಹಿಣಿ ‘ತುಳುನಾಡಿನ ಮಾಸ್ತಿಕಲ್ಲುಗಳು ಮತ್ತು ವೀರಗಲ್ಲುಗಳು’ ಬಗ್ಗೆ ನಡೆಯಿಸಿರುವ ಸಂಶೋಧನೆ ಇದೀಗ ಬಿಡುಗಡೆಯ ಹಂತದಲ್ಲಿ. ಕಥೆಗಾರ್ತಿಯೂ ಆಗಿರುವ ಬಿ.ಎಂ. ರೋಹಿಣಿಯವರ ‘ಅಧ್ಯಾಪಿಕೆಯ ಅಧ್ವಾನಗಳು’ ಕಾಡುವ ಅನುಭವ ಕಥನ.
ಕಾಂತಾವರ ಕನ್ನಡ ಸಂಘ (ರಿ.)
ಕಾಂತಾವರ -574129
ಕಾರ್ಕಾಳ, ಉಡುಪಿ ಜಿಲ್ಲೆ
ದೂರವಾಣಿ :08258-276216
ಮೊ :9900701666
ಅಧಿಕೃತ ಮಾರಾಟಗಾರರು : ಕೊಡೆಂಕಿರಿ ಪ್ರಕಾಶನ
ನರಿಮೊಗರು, ಪುತ್ತೂರು- -574202 (ದ.ಕ.)
ದೂರವಾಣಿ : 9480451560
ಬೆಲೆ : ರೂ. 52




0 Comments