ಇದೇ ಮೊದಲಬಾರಿಗೆ ಥಾಯ್ ಲ್ಯಾಂಡ್ನ ಪ್ರವಾಸ ಕಥನವೊಂದು ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದೆ. ಸಮಾಜವಿಜ್ಞಾನಿಯಾದ ಲೇಖಕ ಡಾ. ಸಿ.ಜಿ. ಲಕ್ಷ್ಮೀಪತಿ ತಮ್ಮ ಥಾಯ್ ಲ್ಯಾಂಡ್ ನ ಪ್ರವಾಸದ ಅನುಭವಗಳನ್ನು ಇಲ್ಲಿ ನಿರೂಪಿಸಿದ್ದಾರೆ.
ಥಾಯ್ ಲ್ಯಾಂಡ್ನ ಇತಿಹಾಸ, ಸಮಕಾಲೀನ ರಾಜಕೀಯ ಹಾಗೂ ಆರ್ಥಿಕತೆಯ ಚೌಕಟ್ಟಿನಲ್ಲಿ ನಿರೂಪಿತವಾಗಿರುವ ಈ ಬರಹ ಅಲ್ಲಿನ ಜನಜೀವನ ಶಿಕ್ಷಣ ಹಾಗೂ ಲೈಂಗಿಕ ಉದ್ದಿಮೆಯ ಕರಾಳ ದರ್ಶನ ಮಾಡಿಸುತ್ತದೆ. ಅವರ ಬರಹದುದ್ದಕ್ಕೂ ಮಾನವೀಯ ಕಳವಳದ ಧಾರೆಯಿದೆ.
ನವಿರಾದ ಹಾಸ್ಯ, ವಿಷಾದಗಳೊಂದಿಗೆ ಸಮಾಜ ವಿಜ್ಞಾನಿಯೊಬ್ಬರಿಗೆ ಇರಬೇಕಾದ ಎಚ್ಚರವೂ ಕಾಣುತ್ತದೆ. ಮನುಷ್ಯರ ಘನತೆಯನ್ನೇ ಕುಗ್ಗಿಸುವ ಮಟ್ಟದಲ್ಲಿ ಥಾಯ್ ಲ್ಯಾಂಡ್ ಯಾಕೆ ಬದಲಾಗಿದೆ ಎಂಬ ಪ್ರಶ್ನೆಗೆ ಲಕ್ಷ್ಮೀಪತಿಯವರ ಬರಹ ಅನೇಕ ಒಳನೋಟಗಳನ್ನು ನೀಡುತ್ತದೆ.
–ಪಾರ್ವತೀಶ




0 Comments