ರಚನೆ: ಅ. ನಾ. ರಾವ್ ಜಾದವ್
ಅ. ನಾ. ರಾವ್ ಜಾದವ್ ಹತ್ತು-ಹಲವಾರು ಹವ್ಯಾಸಗಳುಳ್ಳ ವ್ಯಕ್ತಿ. ನಟನೆ, ನಾಟಕರಚನೆ, ನಿರ್ದೇಶನ, ಚಾರಣ, ಛಾಯಾಗ್ರಹಣ, ಬರವಣಿಗೆ, ಪಕ್ಷಿವೀಕ್ಷಣೆ, ಮರ-ಗಿಡಗಳ ಅಧ್ಯಯನ . . . ಹೀಗೆ ಅನೇಕ ಕ್ಷೇತ್ರಗಳನ್ನು ಹಚ್ಚಿಕೊಂಡವರು.
ಅನೇಕ ನಾಟಕಗಳಲ್ಲಿ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಂಗದಲ್ಲಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ಮತ್ತು ‘ಕರ್ವಾಲೊ’ ಕೃತಿಗಳನ್ನಾಧರಿಸಿ ನಾಟಕಗಳನ್ನು ರಚಿಸಿದ್ದಾರೆ. ‘ಬೆಕ್ಕಿಗೆ ಘಂಟೆ ಕಟ್ಟಿದವರು ಯಾರು?; ಎಂಬ ಮಕ್ಕಳ ನಾಟಕವನ್ನೂ ರಚಿಸಿದ್ದಾರೆ. ‘ಹಿಮಗಿರಿಯ ಕಣಿವೆಗಳಲ್ಲಿ’ ಇವರ ಪ್ರಕಟಗೊಂಡಿರುವ ಚಾರಣ ಕಥನ ಕೃತಿ. ‘ಪ್ರಕೃತಿ – ಪರಂಪರೆ ‘ ಕುರಿತಾದ ಇವರ ಅಸಂಖ್ಯ ಚಿತ್ರ ಲೇಖನಗಳು ನಾಡಿನ ಪ್ರಸಿದ್ಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಹಾಗೇ ಇವರ ಅನೇಕ ಹನಿಗವನಗಳೂ ಪ್ರಕಟಗೊಂಡಿವೆ. ಇವರ ಛಾಯಾಚಿತ್ರಗಳು ರಾಷ್ಟಮಟ್ಟದ ಪ್ರಶಸ್ತಿ – ಪುರಸ್ಕಾರಗಳನ್ನು ಪಡೆದಿವೆ. ನಮ್ಮ ಸುತ್ತಮುತ್ತಲಿನ ಮರ-ಗಿಡಗಳು ಮತ್ತು ಪಕ್ಷಿ ಸಮೂಹಗಳ ಮಾಹಿತಿಯನ್ನು ಸಹ ಒದಗಿಸಬಲ್ಲರು. ದೇಶದ ಉದ್ದಗಲಕ್ಕೂ ‘ಚಾರಣ’ ವೆಂದು ಕಾಡು-ಮೇಡು ಅಲೆದಿದ್ದಾರೆ. ನಾಟಕ ಪ್ರದರ್ಶನಗಳನ್ನು ನೀಡುತ್ತಿರುವ, ಇವರ ‘ರಂಗ ವಿಸ್ಮಯ’ ತಂಡದ ಮೂಲಕ ಇದೀಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಸುವುದರೂಂದಿಗೆ ಅಭಿನಯದ ಪಾಠಗಳನ್ನೂ ಬೋಧಿಸುತ್ತಿದ್ದಾರೆ.



0 Comments