

ನುಡಿಚಿತ್ರಗಳು ಗದ್ಯದಲ್ಲೇ ಕಾವ್ಯದ ಮಿಂಚು ಮೂಡಿಸುತ್ತವೆ; ಅಕ್ಷರತೋರಣದಿಂದ ನವರಸಗಳ ವಾಗ್ಬಾಣಗಳನ್ನು ಹೊಮ್ಮಿಸುತ್ತವೆ. ಸೊಗಸಾಗಿ ಮಾತಾಡುವ ಕಲೆ ಕೆಲವರಿಗೆ ಸಿದ್ಧಿಸಿದ ಹಾಗೆ ರಸವತ್ತಾದ ಬವಣಿಗೆ ಕೂಡ ಕೆಲವರಿಗೆ ಮಾತ್ರ ಸಿದ್ಧಿಸಿರುತ್ತದೆ. ಇನ್ನು ಕೆಲವರು ಅದನ್ನು ಪ್ರಯತ್ನಪಟ್ಟು ಸಾಧಿಸುತ್ತಾರೆ. ಆದರೆ ಅಂಥ ಸಾಧನೆಗೆ ಬೇಕಾದ ಗರಡಿಮನೆಗಳೇ ಇದುವರೆಗೆ ಕನ್ನಡದಲ್ಲಿ ಇರಲಿಲ್ಲ. ಮುದ್ರಣ ಮಾಧ್ಯಮದಲ್ಲಿ ‘ನುಡಿಚಿತ್ರ’ ಗಳು ಹಾಸುಕೊಕ್ಕಾಗಿದ್ದರೂ ಅದರ ಒಟ್ಟಾರೆ ನೇಯ್ಗೆಯನ್ನು ಅಧ್ಯಯನ ಮಾಡಿ ವಿಶ್ಲೇಷಣೆ ಮಾಡಿದವರಿರಲಿಲ್ಲ.
ಇನ್ನು ಮುಂದೆ ಹೀಗೆ ಹೇಳುವಂತಿಲ್ಲ. ‘ತರಂಗ’ ಓದುಗರೆಲ್ಲರ ಮನತಟ್ಟಿರುವ ಪತ್ರಕರ್ತೆ ಯು. ಬಿ. ರಾಜಲಕ್ಷ್ಮೀ ತಮ್ಮ ಈ ಡಾಕ್ಟರೇಟ್ ಥೀಸಿಸ್ ನಲ್ಲಿ ನುಡಿಚಿತ್ರಗಳ ಎಲ್ಲ ಆಯಾಮಗಳನ್ನೂ ಸಮರ್ಥವಾಗಿ ಪರಿಚಯಿಸಿದ್ದಾರೆ. ಕನ್ನಡ ಪತ್ರಿಕಾರಂಗಕ್ಕೆ ಇಂಥ ತೋರುಗಂಬವೊಂದರ ಅಗತ್ಯವಿತ್ತು.
ಓದುಗರನ್ನು ಓದುಗರನ್ನಾಗಿ ಮಾಡುವ ಶುಷ್ಕ ಬರವಣಿಗೆಯನ್ನು ಇಂದು ನಾವು ಎಲ್ಲೆಲ್ಲೂ ಕಾಣುತ್ತೇವೆ. ವಾಕ್ಯಗಳಲ್ಲಿ ಗಜರ್ಿಸುವ ಹೆಬ್ಬುಲಿಗಳೇನೊ ಅಲ್ಲಲ್ಲಿ ಸಿಗಬಹುದು. ಆದರೆ ಮೋಡಿ ಮಾಡುವ ಮೆಲ್ಲುಲಿಗಳು, ಕಂಪು ಸೂಸುವ ನುಡಿಮಲ್ಲಿಗೆಗಳು ಅಪರೂಪಕ್ಕೆ ಮಾತ್ರ ಸಿಗುತ್ತವೆ. ಅಂಥ ನುಡಿಮಂಟಪಗಳನ್ನು ಸೃಷ್ಟಿಸುವವರ ಬಗ್ಗೆ, ಸೃಷ್ಟಿಸುವ ತಂತ್ರಗಾರಿಕೆಯ ಬಗ್ಗೆ, ಅವುಗಳ ಇತಿಮಿತಿಗಳ ಬಗ್ಗೆ ತಿಳಿಸುವ ಕನ್ನಡದ ಆಯ್ದ ವಾರಪತ್ರಿಕೆಗಳ್ಲಿ ನುಡಿಚಿತ್ರ – ಒಚಿದು ಗುಣಾತ್ಮಕ ಅಧ್ಯಯನ ಕೃತಿ ಪತ್ರಿಕಾರಂಗದ ಇಂದಿನವರಿಗೂ ನಾಳಿನವರಿಗೂ ಬೇಕಾಗುವಂತಿದೆ. ಬೆಳಕಾಗುವಂತಿದೆ.
ನಾಗೇಶ ಹೆಗಡೆ
ಖ್ಯಾತ ನುಡಿಚಿತ್ರ ಲೇಖಕ
ಡೈಲಿ ಬುಕ್ : ಡಾ ಯು ಬಿ ರಾಜಲಕ್ಷ್ಮೀ ಅವರ ನುಡಿಚಿತ್ರ
ನಿಮಗೆ ಇವೂ ಇಷ್ಟವಾಗಬಹುದು…

0 Comments