ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಡಾ ಮೈ ಶ್ರೀ ನಟರಾಜ ಅವರ ’ಭಾಷೆಯಿಂದ ಭಾಷೆಗೆ’

ಡಾ ಮೈ ಶ್ರೀ ನಟರಾಜ

ಅಂತರ್ಜಾಲದ ಈ ಯುಗದ ಹಲವು ಸಾಧ್ಯತೆಗಳನ್ನು ಬಳಸಿಕೊಂಡು ಡಾ. ಮೈ. ಶ್ರೀ ನಟರಾಜರು ಹಲವಾರು ಕವಿತೆಗಳನ್ನು ಇಲ್ಲಿ ಅನುವಾದಿಸಿದ್ದಾರೆ. ‘ಅನುವಾದಿತ ಕವಿತೆ’ ಎಷ್ಟು ಪರಿಣಾಮಕಾರಿಯಾಗಿ ‘ಅನುವಾದಿತ’ವಾಗಿದೆ ಎಂಬ ಪ್ರಶ್ನೆಯನ್ನು ಎತ್ತಿ ಎಚ್. ಎಸ್. ಬೆಂಕಟೇಶಮೂರ್ತಿ ಅವರು ಗಂಭೀರವಾದ ಕೆಲವು ಮಾತುಗಳನ್ನು ಆಡಿದ್ದಾರೆ.
ನಟರಾಜರ ಮಾತಿಗೆ ಒಂದು ಕೊಕ್ಕೆಯ ಗುಣವಿದೆ. ಇದು ಪಾತಾಳಗರಡಿಯ ಕೊಕೆಗಳಂತೆ ಕಣ್ಮರೆಯಾದ ಏನನ್ನೂ ಎತ್ತಬಲ್ಲದು. ಸತತವಾಗಿ ನಟರಾಜ್ ಈ ಕೆಲಸವನ್ನು ದೂರದಲ್ಲೆಲ್ಲೋ ಇದ್ದು ಕನ್ನಡದಲ್ಲಿ ಮಾಡುತ್ತಿದ್ದಾರೆಂಬುದು ಸಂತೋಷದ ಸಂಗತಿ.

ಇಲ್ಲಿನ ಕವಿತೆಗಳ ವಿಷಯಗಳು ವೈವಿಧ್ಯಮಯವಾಗಿವೆ. ಆದ್ದರಿಂದ ಭಾಷಾಂತರದ ಈ ಪುಸ್ತಕ ಸುಮ್ಮನೆ ಕುತೂಹಲಕ್ಕಾಗಿಯಾದರೂ ಓದುಗನಿಗೆ ಉಲ್ಲಾಸ ತರುವಂತೆ ಬರೆಯುವುದೇ ಆಗಿದೆ. ಅಲ್ಲದೆ ಎಲ್ಲಿಂದ ಕವಿತೆ ಸಿಕ್ಕಿತು, ಮೂಲದಲ್ಲಿ ಯಾರು ಮುಂತಾದ ಎಲ್ಲ ವಿವರಗಳಿವೆ. ಪ್ರತಿಯೊಬ್ಬ ಓದುಗನಿಗೂ ಇಲ್ಲಿರುವ ಕವನಗಳನ್ನು ತನಗೆ ಬೇಕಾದಂತೆ ಅನುವಾದಿಸಿಕೊಳ್ಳಬಲ್ಲ ಆಹ್ವಾನವೂ ಈ ಸಂಗ್ರಹದಲ್ಲಿದೆ.
-ಯು. ಆರ್. ಅನಂತಮೂರ್ತಿ
(ಬೆನ್ನುಡಿಯಿಂದ)
ಬೆಲೆ : ರೂ. 150/-
ಪ್ರಕಾಶನ : ಅಭಿನವ
 

‍ಲೇಖಕರು avadhi

10 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading