ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : 'ಜೋಗಜ್ಜನ ಹಾಡು ಮತ್ತು ಇತರ ಕತೆಗಳು'

ಕನ್ನಡ ಕಥಾ ಪರಂಪರೆಯಲ್ಲಿ ತನ್ನದೇ ಛಾಪು ಮೂಡಿಸುವ ಭರವಸೆಯಲ್ಲಿ ಬರೆಯುತ್ತಿರುವ ಜಡೇಕುಂಟೆ ಮಂಜುನಾಥ್ ಅವರದ್ದು ವಿಶಿಷ್ಟ ದನಿ. ಜೋಗಜ್ಜನ ಹಾಡು, ಕಣ, ದ್ಯಾಮವ್ವ, ಅಪ್ಪನ ಗುಡ್ಡೆ, ದೂರ ಸರಿದವರು.. ಮುಂತಾದ ಅಪರೂಪದ ಕತೆಗಳನ್ನು ಬರೆಯಬಲ್ಲ ಕತೆಗಾರರು ತಮ್ಮ ಅನುಭವಗಳನ್ನು ಕನ್ನಡದ ಕತಾ ಪರಂಪರೆಗಳ ನೆರಳಿನಲ್ಲಿ ನೋಡಿ ತಮ್ಮ ಭಾಷೆಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡರೆ ಕನ್ನಡದ ಅನನ್ಯ ಕತೆಗಾರರಾಗುವುದರಲ್ಲಿ ಸಂದೇಹವಿಲ್ಲ.
-ಇಂದ್ರಕುಮಾರ್ ಎಚ್. ಬಿ. ದಾವಣಗೆರೆ
ಜಡೇಕುಂಟೆ ಮಂಜುನಾಥ್ ತನ್ನ ವಿದ್ಯಾರ್ಥಿ ಜೀವನದಲ್ಲಿ ‘ದಿಕ್ಕಿಲ್ಲದವರು’ ಮತ್ತು ‘ನಾಳೆಯ ನಿರೀಕ್ಷೆಯಲ್ಲಿ’ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಇದೀಗ ‘ಜೋಗಜ್ಜನ ಹಾಡು’ ಎಂಬ ಕಥಾ ಸಂಗ್ರಹ ಹೊರತರುವ ಮೂಲಕ ತಾನು ಹುಟ್ಟಿ ಬೆಳೆದ ಸಮುದಾಯದಲ್ಲಿ ಕಂಡಂತಹ ವಾಸ್ತವ ಸಂಗತಿಗಳನ್ನು ಆಡು ಭಾಷೆಯಲ್ಲಿ ಅತ್ಯಂತ ಮನೋಜ್ಞವಾಗಿ ಓದುಗರ ಮುಂದಿಟ್ಟಿದ್ದಾರೆ.
-ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ
 

ಜಡೇಕುಂಟೆ ಮಂಜುನಾಥ್ ಕಥೆಗಳಲ್ಲಿ ಗ್ರಾಮೀಣ ಸಮುದಾಯಗಳ ಆಚರಣೆ, ಅಲ್ಲಿ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನಾವಳಿಗಳನ್ನು ದೇಸೀ ಭಾಷೆಯ ಮೂಲಕ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾನು ಕಂಡುಂಡ ಅನುಭವಗಳನ್ನು ಕಲ್ಪಿತ ವಾಸ್ತವಗಳ ನೆಲೆಗಟ್ಟಿನಲ್ಲಿ ಬರೆಯುವುದನ್ನು ರೂಢಿಸಿಕೊಂಡರೆ ಮಂಜುನಾಥ್ ಭರವಸೆಯ ಕಥೆಗಾರನಾಗುವುದರಲ್ಲಿ ಎರಡು ಮಾತಿಲ್ಲ.
-ಡಾ. ಕರಿಯಪ್ಪ ಮಾಳಿಗೆ
ದಿಗಂತ ಪುಸ್ತಕ ಪ್ರಕಾಶನ
ಬೆಲೆ: ರೂ. 80/-
 
 

‍ಲೇಖಕರು avadhi

27 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading