
ವಿದ್ಯಾರ್ಥಿಗಳಿಗೆ, ರಂಗಾಸಕ್ತರಿಗೆ ‘ಜೆಎಸ್ಸೆಂ’ ಎಂದೇ ಪರಿಚಿತವಾಗಿರುವ ಶ್ರೀನಿವಾಸಮೂರ್ತಿಯವರ ‘ ಆ ಮುಖ’ ಕೃತಿ ನಾಕುತಂತಿ ಪ್ರಕಾಶನದ ಮೂಲಕ ಹೊರತರಲು ತುಂಬಾ ಸಂತೋಷವಾಗುತ್ತಿದೆ. ಅದರ ಹಿಂದೆ ಒಂದು ಸಾಹಸಗಾಥೆಯೇ ಇದೆ. ಸಂಕೋಚ, ನಮ್ರತೆ, ಅಚ್ಚರಿ ತರುವಷ್ಟು ಸ್ವಾರ್ಥರಹಿತ ಪ್ರವೃತ್ತಿಯ ಜೆ. ಶ್ರೀನಿವಾಸಮೂರ್ತಿಯವರ ಅಪರೂಪದ ರಂಗ ಚಿಂತನೆಗಳು ‘ಆಮುಖ’ ದಲ್ಲಿ ಸಂಕಲಿತವಾಗಿವೆ. ರಂಗಭೂಮಿ ಕುರಿತ ಬರಹಗಳಲ್ಲಿ ಅಕೆಡಮಿಕ್ ಶಿಸ್ತು, ಅಧ್ಯಯನ ಶೀಲತೆಯ ಅಗತ್ಯ ಎಷ್ಟೆಂಬುದನ್ನು ಇಲ್ಲಿರುವ ಲೇಖನಗಳು ಸಾಬೀತು ಮಾಡಿವೆ. ರಂಗವಿಮರ್ಶೆ ಒತ್ತಾಯಿಸುವ ರಂಗಭಾಷೆಯ ಗ್ರಹಿಕೆಯನ್ನು ಸಮರ್ಥವಾಗಿ ನಿರ್ವಹಿಸಿರುವ ಈ ಲೇಖನಗಳು ರಂಗವಿಮರ್ಶೆಯಾ ಆಸಕ್ತರಿಗೆ ಒಂದು ಮಾದರಿ. ಪರಂಪರೆ – ಆಧುನಿಕತೆಯ ಕೊಡುಕೊಳ್ಳುವಿಕೆಯನ್ನು ಬಹು ಸೂಕ್ಷ್ಮ ನೆಲೆಯಲ್ಲಿ ವಿಶ್ಲೇಷಿಸುತ್ತಲೇ ದಾಖಲಿಸುವ ಈ ಚಿಂತನೆಗಳು ರಂಗ ಇತಿಹಾಸಕ್ಕೂ ಅಪರೂಪದ ಮಾಹಿತಿ ಒದಗಿಸುತ್ತಿವೆ. ಜಾಗತೀಕರಣದ ಅಬ್ಬರದಲ್ಲಿ ಕಲಾತ್ಮಕತೆಯೂ ‘ಸರಕೂ’ ಆಗಿಬಿಡುವ ಅಪಾಯದ ನಡುವೆ ರಂಗಭೂಮಿಯ ಅಸ್ಮಿತೆಯನ್ನು ಕಾಪಾಡಿಕೊಳ್ಳಿ ಎಂಬ ಎಚ್ಚರಿಕೆಯಾಗಿಯೂ ‘ ಆ ಮುಖ’ಪ್ರಧಾನ ಭೂಮಿಕೆಯಲ್ಲಿ ನಿಲ್ಲುತ್ತದೆ. ಪ್ರೀತಿಯ ಜೆಎಸ್ಸೆಂಗೆ ರಂಗಾಸಕ್ತರೆಲ್ಲರ ಅಭಿನಂದನೆಗಳು ಸಲ್ಲುತ್ತವೆ.
ವಿಜಯಾ
ಡೈಲಿ ಬುಕ್ : ಜೆ ಶ್ರೀನಿವಾಸಮೂರ್ತಿ ಅವರ ’ಆ ಮುಖ’
ನಿಮಗೆ ಇವೂ ಇಷ್ಟವಾಗಬಹುದು…

0 Comments