ಇವತ್ತು ನನ್ನ ಲೈಬ್ರರಿಯಲ್ಲಿ ಪುಸ್ತಕಗಳನ್ನು ತಿರುವಿ ಹಾಕುತ್ತಿದ್ದಾಗ ಕುವೆಂಪು ಅವರ `ಜನಪ್ರಿಯ ವಾಲ್ಮೀಕಿ ರಾಮಾಯಣ’ ಕೈಗೆ ಸಿಕ್ಕಿದೆ. ಮೈಸೂರಿನ ರಾಜ್ಯ ವಯಸ್ಕರ ಶಿಕ್ಷಣ ಮಂಡಳಿ ಈ ಪುಸ್ತಕ ಪ್ರಕಟಿಸಿದೆ. ಪುಸ್ತಕದ ಪುಟಗಳ ಮಧ್ಯೆ ಆಕಷ೯ಕ ರಾಮಾಯಣ ಪಾತ್ರಧಾರಿಗಳ ರೇಖಾ ಚಿತ್ರಗಳು ಎಂಥವರನ್ನು ಥಟ್ಟಂತ ಸೆಳೆದು ಬಿಡುತ್ತದೆ.
ಇನ್ನೇನು ಕಾರಂತರ `ಹುಚ್ಚು ಮನಸ್ಸಿನ ಹತ್ತು ಮುಖಗಳು’ ಓದಿದ್ದು ಮುಗಿಯುತ್ತಾ ಬಂದಿದೆ. ಮುಂದಿನ ಓದು ವಾಲ್ಮೀಕಿ ರಾಮಾಯಣ ಅಂದುಕೊಂಡಿದ್ದೇನೆ




ಉಗಮ ಶ್ರೀನಿವಾಸ
0 Comments