ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಚಂದ್ರಶೇಖರ ಕಂಬಾರರ ’ಎಲ್ಲಿದೆ ಶಿವಾಪುರ’

ಚಂದ್ರಶೇಖರ ಕಂಬಾರ

… ಸರ್ವನಾಶವಾಗುತ್ತಿರುವ ಇಂದಿನ ಜಗತ್ತಿನಲ್ಲಿ ನಾವು ಸಾಮಾನ್ಯನೆಂದು ತಿಳಿಯುವ ನರಜೀವಿಗೆ ಪಾರಾಗಬಲ್ಲ ಹಲವು ಉಪಾಯಗಳು ಇವೆ ಎಂಬುದನ್ನು ಕಂಬಾರರ ಇಡೀ ಕಾವ್ಯ ತೋರಿಸುತ್ತದೆ.
ರಾಷ್ಟ್ರಗಳು ಅಳಿದರೂ ಶಿವಾಪುರ ಅಳಿಯುವುದಿಲ್ಲ.
….
ಕಂಬಾರರು ಅಚ್ಚಕನ್ನಡವಾಗಿರುವ ಒಂದು ಸಣ್ಣ ಪ್ರದೇಶದ ಬಾಳುವ ಶಕ್ತಿಯನ್ನು ಬಿಂಬಿಸಬಲ್ಲ ಕವಿ. ನಮ್ಮೂರಿನ-ಗಾಢವಾದ ಲೋಕಪ್ರಜ್ಞೆಯ-ಕವಿ, ಜನರ ನಡುವಿನಿಂದ ಹುಟ್ಟಿಬಂದ, ಹಾಡುವ, ಕುಣಿಯುವ, ಅಣಕಿಸುವ, ಅಪರೂಪದ ಕವಿ ಈ ಕಾಲದಲ್ಲಿ ಕಂಬಾರ ಒಬ್ಬರೇ.
ಯು. ಆರ್. ಅನಂತಮೂರ್ತಿ (ಮುನ್ನುಡಿಯಿಂದ )

ಕಂಬಾರರ ನಾಟಕಗಳಲ್ಲಿ ‘ದೇಹಭಾಷೆ’ ಯೊಂದು ಹೆಚ್ಚಾಗಿ ಮಾತನಾಡುತ್ತದೆ. ಆದರೆ ಅವರ ಕಾವ್ಯಕ್ಕೆ ಬಂದೊಡನೆ ಈ ದೇಹದ ಭಾಷೆ ಮುಸುಕುಗೊಂಡು ಸೃಜನಶೀಲತೆ ತರುವ ವಿಸ್ಮಯ, ಆ ವಿಸ್ಮಯದಲ್ಲದಗಿರುವ ದೈವಿ ಶಕ್ತಿ ಮತ್ತು ಇವುಗಳಿಂದ ಒಡಮೂಡುವ ದಾರ್ಶನಿಕ ದೃಷ್ಟಿಕೋನ ಇವುಗಳೆಲ್ಲ ಏಕತ್ರವಾಗಿ ಧ್ವನಿಸತೊಡಗುತ್ತವೆ. ಸದ್ಯ ಬರೆಯುತ್ತಿರುವ ಯಾವ ಕನ್ನಡದ ಕವಿಯಲ್ಲಿಯೂ ಇಂಥ ಉಚ್ಚಮಟ್ಟದ ಕಾವ್ಯಶಕ್ತಿಗಳ ಮಿಳಿತವನ್ನು ನಾವು ಕಾಣಲಾರೆವು.
ಮಾಧವ ಕುಲಕರ್ಣಿ
(ಬೆನ್ನುಡಿ )
ಅಭಿನವ
ಬೆಲೆ: ೧೦೦/-
 

‍ಲೇಖಕರು avadhi

15 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading