ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಕೆ ವಿ ತಿರುಮಲೇಶ್ ಅವರ ’ಪೂರ್ವ ಯಾನ’

ಪೂರ್ವ ಯಾನ


ಕನ್ನಡಕ್ಕೆ : ಕೆ. ವಿ. ತಿರುಮಲೇಶ್
ಜೆರಾರ್ಡ್ ದ ನೆರ್ವಾಲ್ ಫ್ರೆಂಚ್ ರೊಮ್ಯಾಂಟಿಸಿಸಂನ ಆರಂಭ ಕಾಲದ ಲೇಖಕ ಕತೆ, ಕವಿತೆ, ಕಾದಂಬರಿ, ಪ್ರವಾಸ ಸಾಹಿತ್ಯ, ನಾಟಕ, ನಾಟಕ ವಿಮರ್ಶೆ. ಪತ್ರಿಕೆ ಮುಂತಾದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದವ. ಹತ್ತೊಂಬತ್ತನೆಯ ಶತಮಾನದ ಇತರ ಫ್ರೆಂಚ್ ಲೇಖಕರಷ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ ನೆರ್ವಾಲ್ ಹೆಸರುವಾಸಿಯಲ್ಲದೆ ಇದ್ದರೂ, ಫ್ರೆಂಚ್ ರೊಮ್ಯಾಂಟಿಸಿಸಂನ ಆದ್ಯ ಪ್ರವರ್ತಕರಲ್ಲಿ ಒಬ್ಬ.
‘ಪೂರ್ವ ಯಾನ’ ನೆರ್ವಾಲ್ ತನ್ನ ಗೆಳೆಯನೊಬ್ಬನ ಜತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಕೈಗೊಂಡ ಪ್ರವಾಸದ ಅನುಭವವನ್ನು ಬಳಸಿ ರಚಿಸಿದಂಥ ಕೃತಿ. ಅವರು ಸಾಗಿದ ದಾರಿ: ಮರ್ಸೇಯ್, ಮಾಲ್ಟಾ, ಈಜಿಪ್ಟಿನ ಕೈರೋ, ಅಲೆಕ್ಶಾ , ಲೆಬನಾನ್, ಬೇರೂಟ್, ಸಿರಿಯಾ, ಸೈಪ್ರಸ್, ಕಾನ್ ಸ್ಟಾ೦ಟಿನೋಪಲ್, ಮಾಲ್ಟಾ, ನೇಪಲ್ಸ್ ಮುಂತಾಗಿ. ಸುಮಾರು ಒಂದೂವರೆ ವರ್ಷಗಳ ಪ್ರಯಾಣ. ಹೀಗಾಗಿ ಇದು ಪ್ರವಾಸ ಕಥನವೂ ಹೌದು, ಕಾದಂಬರಿಯೂ ಹೌದು. ಜೊತೆಗೆ ವಾಸ್ತವ ಮತ್ತು ಕಲ್ಪನೆಗಳ ಮಿಶ್ರಣದ ವಿಶಿಷ್ಟ ಕೃತಿ ಕೂಡ.
 

‍ಲೇಖಕರು avadhi

12 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading