ಪ್ರೊ . ಎಚ್. ಆರ್. ರಾಮಕೃಷ್ಣ ರಾವ್
ಪುರಾಣ ಪುರುಷರ ಅಥವಾ ನಮ್ಮ ನಡುವೆ ಈಗಿಲ್ಲದ ಮಹಾಪುರುಷರ ಬಗ್ಗೆ ಕತೆ ಹೇಳುವುದು ಸುಲಭ ಮತ್ತು ನಿರಪಾಯಕಾರಿ. ಆದರೆ ನಮ್ಮ ನಡುವೆಯೇ ಇದ್ದು ನಮಗೆಲ್ಲ ಮಾದರಿಯಂತೆ ಬದುಕುತ್ತಿರುವ ಮನುಷ್ಯನೊಬ್ಬನ ಬಗ್ಗೆ ಬರೆಯುವುದು. ಕತ್ತಿಯ ಅಲಗಿನ ಮೇಲೆ ನಡೆಯುವಂತಹ ಸಾಹಸದ ಕೆಲಸ. ಅಂತಹ ಸಾಹಸದ ಕತೆಯನ್ನು ಮಕ್ಕಳ ಬಗೆಗಿನ ಪ್ರೀತಿಯಿಂದ ಅತ್ಯಂತ ಸರಳ ಮತ್ತು ಸುಲಲಿತ ಭಾಷೆಯಲ್ಲಿ ಬರೆದುಕೊಟ್ಟ ಶ್ರೀ ಎಚ್ ಆರ್. ರಾಮಕೃಷ್ಣ ರಾವ್ ಅವರನ್ನು ನಾನು ಅಭಿನಂದಿಸುವೆ.
ವಿಜ್ಞಾನದ ಬಗ್ಗೆ, ಎಲ್ಲರಿಗೂ ಅರ್ಥವಾಗುವ ಸುಲಭದ ಭಾಷೆಯಲ್ಲಿ ಹತ್ತಾರು ಉಪಯುಕ್ತ ಕೃತಿಗಳನ್ನು ಬರೆದು ಪ್ರಕಟಿಸಿರುವ ಪ್ರೊ ಎಚ್ ಆರ್ ರಾಮಕೃಷ್ಣ ರಾಯರು ಬರಹದುದ್ದಕ್ಕೂ ತಮ್ಮ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
-ಬೋಳುವರು ಮಹಮದ್

ಇದು ವ್ಯಕ್ತಿ ಚಿತ್ರಣ ಮಾತ್ರವಾಗದೆ, ಅಭಿರುಚಿ, ಆಸಕ್ತಿ, ಅನುಭವಜ್ಞಾನ ಹಾಗೂ ಉನ್ನತಭಾವದ ಮಾನವಪ್ರೀತಿ ಮೊದಲಾದ ಪರಿಪೂರ್ಣವತಾರಿ ವ್ಯಕ್ತಿತ್ವದ ದರ್ಶನವೂ ಆಗಿರುವುದು ಈ ಬರಹದ ವಿಶೇಷವಾಗಿದೆ.
ಪ್ರೊ ಎಸ್ ಜಿ ಸಿದ್ಧರಾಮಯ್ಯ
ಈ ಪುಸ್ತಕದ ಲೇಖಕ ನಾನಲ್ಲ! ಹಲವಾರು ಸುಂದರ ತೋಟಗಳಲ್ಲಿ ಅರಳಿದ ಹೂಗಳನ್ನು ಹೆಕ್ಕಿತಂದು ಮಾಲೆಕತ್ತಿರುವ ಹೂವಾಡಿಗ ನಾನು. ಈ ಮಾಲೆ ಕನ್ನಡದ ಮಕ್ಕಳ ಸಿರಿಮುದಿಗೆ ಸಿಂಗಾರವಾದರೆ, ಕಂಠಶ್ರೀಯನ್ನು ಅಲಂಕರಿಸಿದರೆ, ನಾನು ಧನ್ಯ…
ಪ್ರೊ ಎಚ್ ಆರ್ ರಾಮಕೃಷ್ಣ ರಾವ್
(ಬೆನ್ನುಡಿ)
ಇಂಡಿಗೋ ಮಲ್ಟಿಮೀಡಿಯಾ
ಬೆಲೆ : ರೂ ೧೨೫/-



ರಾಷ್ಟ್ರಪತಿಯೊಬ್ಬರು ಭಾರತದ ಎಲ್ಲಾ ನಾಗರಿಕರ ಮಧ್ಯೆ ಬೆರೆತು, ದೇಶದ ಏಳಿಗೆಗೆ ದುಡಿಯುತ್ತಿರುವ ದೃಶ್ಯ ನಿಜಕ್ಕೂ ಅನುಕರಣೀಯ, ಇದರ ಜೊತೆ ರಾಷ್ಟ್ರಪತಿಗಳು ಕೆಲವು ಜ್ವಲಂತ ಸಮಸ್ಯೆಗಳನ್ನು ತೆಗೆದುಜೊಂಡು ಅವಕ್ಕೆ ತೀವ್ರವಾಗಿ ಸ್ಪಂದಿಸಿದ್ದಿದ್ದಾರೆ ಚೆನ್ನಾಗಿತ್ತು ! ಒಬ್ಬ ವಿಜ್ಞಾನಿಯಾಗಿ, ಚಿಂತಕನಾಗಿ, ಆದರ್ಶ ವೈಕ್ತಿಯಾಗಿ ಅವರು ಪ್ರಸಿದ್ಧರು.
The humility and down to earth behavior of Professor, is a great inspiration to all kannada writers…