ಈ ಪುಸ್ತಕ ಓದುವಾಗ ನೀವು ನೀವೇ ಆಗಿರುತ್ತೀರೆನ್ದು ಖಚಿತತೆ ನನಗಿಲ್ಲ. ನನ್ನ ಈ ತರಹದ ಮಾತು ಧಿಮಾಕಿನಂತೆ ಕಂಡರೆ ಆಶ್ಚರ್ಯವಿಲ್ಲ . ಎಲ್ಲ ಅಧ್ಯಾಯದ ಪ್ರತಿಯೊಂದು ಘಟನೆಯಲ್ಲಿ ಪರಕಾಯ ಪ್ರವೇಶ ಮಾಡಿ ಅಲ್ಲಿ ನನ್ನ ಪಾತ್ರ ಯಾವುದು ಎಂಬ ಯೋಚನೆಯೊಂದಿಗೆ ಪುಸ್ತಕ ಮುಗುಚಿತ್ತಾಗ ನನ್ನೊಳಗೆ ಇನ್ನೊಬ್ಬನಿದ್ದಾನೆಯೇ ಎಂಬ ಸಂದೇಹ ಮೂಡದೆ ಇರಲಾರದು.

ನೀವು ಒಬ್ಬರೆ ಓದುತ್ತಿದ್ದರೂ ನಿಮ್ಮಲ್ಲಿ ಇನ್ನೊಬ್ಬ ಕೇಳಿಸಿಕೊಳ್ಳುತ್ತಿದ್ದಾನೆ. ಈ ಪುಸ್ತಕ ಓದಲು ನಿಮ್ಮ ಬೆಡ್ ರೂಮಿನ ಬೆಡ್ ಲ್ಯಾಂಪೇ ಸಾಕು. ಪ್ರಶಾಂತ ಮನಸ್ಥಿತಿಯಲ್ಲಿ ಮೊದಲನೆಯ ಪುಟ ಓದುವ ಪ್ರಯತ್ನವನ್ನಷ್ಟೇ ಮಾದಿ. ನಿಮ್ಮನ್ನು ಕಡೆಯ ಪುತದವರೆಗೆ ಕರೆದೊಯ್ಯುವ ಪ್ರಾಮಾಣಿಕ ಪ್ರಯತ್ನ ನನ್ನದು. ನೀವು ಓದಿ ಮುಗಿಸುವವರೆಗೆ ನಿಮ್ಮದಿಂಬೆ ಇದಕ್ಕೆ ರಕ್ಷಣೆ ನೀದಲಿ. ಓದಿ ಮುಗಿಸಿ ಮೈ ಕೊಡವಿಕೊಂಡು ಎದ್ದು ನಿಂತಾಗ ನೀವು ಮೊದಲಿಗಿಂತ ಸುಂದರವಾಗಿ ಕಾಣುತ್ತೀರಿ. ನಿಮ್ಮ ಬದಲಾವಣೆಯನ್ನು ಇತರರು ಕೇಳದೆ ಇರಲಾರರು. ಆಗ ನೀವು ಅವರ ಕೈಗೆ ಖಂಡಿತ ಈ ಪುಸ್ತಕ ಕೊಡುತ್ತೀರಿ. ಅವರ ಬದಲಾವಣೆಗೆ ನೀವೂ ಕಾರಣರಾಗುತ್ತೀರಿ.
ಬೆನ್ನುಡಿ
ಸಾವಣ್ಣ ಎಂಟರ್ ಪ್ರೈಸಸ್
ಬೆಲೆ : ರೂ. 150/-


0 Comments