ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಎಂ ಕೆ ಶಂಕರಲಿಂಗೇಗೌಡ ಅವರ ’ನೆನಪು ಚಿತ್ತಾರ’ – ರಮೇಶ ಕೆಂಗೇರಿ



‘ಸೈರಸ್’ ನ ಕಥೆ ನೆನಪಾಗುತ್ತದೆ. ನನಗದು ತುಂಬ ಮುಖ್ಯವೂ ಆಗಿದೆ. ‘ಸೈರಸ್’ ಪರ್ಷಿಯಾದ ಚಕ್ರವರ್ತಿ, ನೆನಪುಳಿಯುವಂತಹ ರಾಜನಾಗಿದ್ದವನು. ಸಾಧಕ, ಆತ ತನ್ನ ಸಮಾಧಿ ಬರಹ – Epitaphಅನ್ನು ತಾನೇ ಬರೆಸುತ್ತಾನೆ.
‘ನಾನೀಗ ಈ ಆರಡಿ ಮೂರಡಿ ಜಾಗವನ್ನು ಆಕ್ರಮಿಸಿಕೊಂಡಿದ್ದೇನೆ. ದಯಮಾಡಿ ಈ ಅಕ್ರಮಣಕ್ಕಾಗಿ ನನ್ನ ಮೇಲೆ ಸಿಟ್ಟಾಗಬೇಡಿ, ನಾನು ಪರ್ಷಿಯಾದ ಚಕ್ರವರ್ತಿಯಾಗಿದ್ದೆ’ ಎನ್ನುವಾಗ ಅವ ಹುಟ್ಟಿಸುವ ವಿನೀತ ಭಾವ ಮನದುಂಬುತ್ತದೆ. ಅನ್ನುವುದರ ಪರಾಕಾಷ್ಠೆಯಿದು. “ಎನಗಿಂತ ಕಿರಿಯರಿಲ್ಲ” ಎನ್ನುವ ಉನ್ನತಾದರ್ಶದ ಮತ್ತೊಂದು ಮುಖವಿದು.
ಸಾಧ್ಯವಾದರೆ ವಿನೀತರಲ್ಲಿ ವಿನೀತನಾಗುವ ಬಯಕೆ ನನ್ನದು.
-ಎಂ.ಕೆ. ಶಂಕರಲಿಂಗೇಗೌಡ
 

‍ಲೇಖಕರು avadhi

25 January, 2014

1 Comment

  1. jagadishkoppa

    ಎಂ.ಕೆ.ಶಂಕರಲಿಂಗೇಡರ ಅಜ್ಜ( ತಾಯಿಯ ತಂದೆ) ಅವರ ಹೆಸರೂ ಕೂಡ ಶಂಕರಲಿಂಗೇಗೌಡ ಎಂದು. ಅವರು ಬ್ರಿಟೀಷರ ಕಾಲದಲ್ಲಿ ಕರ್ನಾಟಕದ ಬಹು ದೊಡ್ಡ ಅರ್ಥಶಾಸ್ತ್ರಜ್ಞರಾಗಿದ್ದರು. 1930 ಮತ್ತು 40 ರ ದಶಕದಲ್ಲಿ ಅವರು ಬರೆದ ಅನೇಕ ಇಂಗ್ಲೀಷ್ ಕೃತಿಗಳು ಮದ್ರಾಸ್ ಪ್ರೆಸಿಡೆನ್ಸಿ ಅಂದರೆ, ಆಗಿನ ಆಂಧ್ರ, ತಮಿಳುನಾಡು, ಮತ್ತು ದಕ್ಷಿಣ ಕರ್ನಾಟಕ ಇವುಗಳ ಅಭಿವೃದ್ಧಿ ಸಾಧ್ಯತೆಗಳ ಬಗ್ಗೆ ಬರೆದ ಕೃತಿಗಳು ಮದ್ರಾಸ್ನಲ್ಲಿ ಪ್ರಿಂಟಾಗಿದ್ದವು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ವನ್ನು ಬಂದರು ಮಾಡಬೇಕೆಂದು ಸೂಚಿಸಿದ್ದರು. ಅವರ ಕುರಿತು ಮಾಹಿತಿ ಸಂಗ್ರಹಿಸಲು ನಾಗಮಂಗಲ ಬಳಿಯ ಮೈಲಾರ ಪಟ್ಣಕ್ಕೆ ಹೋಗಿಬಂದಿದ್ದೆ.. ಏನೂ ಸಿಗಲಿಲ್ಲ. ಶಾಸಕರಾದ ಡಿ.ಸಿ. ತಮ್ಮಣ್ಣನವರ ಪತ್ನಿ ( ಅವರು ಕೂಡ ಶಂಕರಲಿಂಗೇಗೌಡರ ಮೊಮ್ಮಳು) ಒಂದಿಷ್ಟು ಮಾಹಿತಿ ನೀಡಿದ್ದರು. ದಯವಿಟ್ಟು ಮಾಹಿತಿ ಇದ್ದರೆ ನನಗೆ ತಿಳಿಸಿ.jagadishkoppa@gmail.com

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading