ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ’ಇಂದ್ರಜಾಲದ ಅಂತರಂಗ’



ಯಾವುದೋ ಒಂದು ಗುಟ್ಟನ್ನು ತನ್ನೊಡಲಲ್ಲಿಟ್ಟುಕೊಂಡು ಜಾದೂಗಾರ ಆಡುವ ಆಟಗಳಿಗೆ ಲೆಕ್ಕವಿದೆಯೆ? ಅವನ್ನೆಲ್ಲಾ ಕಣ್ – ಬಾಯಿ ಬಿಟ್ಟುಕೊಂಡು ಅಚ್ಚರಿಯಿಂದ ನೋಡುತ್ತಿರುವ ನಮಗೆ ಅದನ್ನು ಕಲಿಯಬೇಕು – ತಾನೂ ಮಾಡಬೇಕೆಂಬ ಹಂಬಲ ಮೂಡುವುದು ಸಹಜ. ಹಿಂದಿನಿಂದಲೂ ಮಾಯಾಮಂತ್ರ – ಕಣ್ಕಟ್ಟು ವಿದ್ಯೆ- ಇಂದ್ರಜಾಲ – ಮಹೇಂದ್ರಜಾಲ ಮುಂತಾಗಿ ಸುದ್ದಿಯಲ್ಲಿದ್ದ ಈ ವಿದ್ಯೆ ಖಂಡಿತ ಪವಾಡವಂತೂ ಅಲ್ಲವೇ ಅಲ್ಲ. ಇದಕ್ಕೆ ಬೇಕಿರುವ ಬಂಡವಾಳವೆಂದರೆ ಕೇವಲ ಚಮತ್ಕಾರ ಮತ್ತು ಕೈಚಳಕ. ಅದೋ ಪಿ.ಸಿ. ಸರ್ಕಾರ್ ಬರುತ್ತಿದ್ದಾರೆ. – ರೈಲನ್ನೇ ಮಾಯ ಮಾಡಿದ ಜಾದೂಗಾರನೀತ! ಪುಸ್ತಕವನ್ನೇ ಮಾಯ ಮಾಡಿಬಿಟ್ಟಾರು. ಅದಕ್ಕಿಂತ ಮುಂಚೆ ಇಲ್ಲಿನ ಜಾದೂ ತಂತ್ರಗಳನ್ನೆಲ್ಲ ಕಲಿಯೋಣ. ಆದರೆ ಜೋಕೆ! ನೀವು ಕಲಿತು ಮಾಡುವ ಮ್ಯಾಜಿಕ್ ನಿರಪಾಯಕಾರಿಯಾಗಿರಲಿ, ಖುಷಿ ಕೊಡಲಿ.
ಕೃತಿ ರಚನೆ ಮಾಡಿದ ಶ್ರೀ ಜಿ. ವಿ. ಗಣೇಶಯ್ಯ ಮೂಲತಃ ಶೃಂಗೇರಿ ಸಮೀಪದ ಒಂದು ಹಳ್ಳಿಯವರು. ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು ನಿವೃತ್ತರು. ಇವರ ಹಲವು ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.
 
 

‍ಲೇಖಕರು avadhi

19 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading