ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಆರ್ನಾಲ್ಡ್ ಕೆಟಲ್ ಬರೆದ ’ಕಾರ್ಲ್ ಮಾರ್ಕ್ಸ್’

ಕನ್ನಡಕ್ಕೆ :
ಜೆ ಆರ್ ಲಕ್ಷ್ಮಣರಾವ್
ಜೀವೂಬಾಯಿ ಲಕ್ಷ್ಮಣರಾವ್
ಕಾರ್ಲ್ ಮಾರ್ಕ್ಸ್ – ಕಾರ್ಮಿಕ ವರ್ಗಕ್ಕೆ ಚಿರಪರಿಚಿತವಾದ ಹೆಸರು. ಲೋಕದ ಬಂಡವಾಳಶಾಹಿ – ಸಾಮ್ರಾಜ್ಯವಾದಿ ಶೋಷಕರಿಗೆ ಕನಸಿನಲ್ಲೂ ಬೆಚ್ಚಿ ಬೀಳಿಸುವ ಹೆಸರು. ವರ್ಗರಹಿತ ಸಮಾಜ ನಿರ್ಮಾಣದ ಕನಸು ಕಂಡು ಅದಕ್ಕಾಗಿ ಅವಿರತ ಶ್ರಮಿಸಿದ ಧೀಮಂತ ಚೇತನ. ಜಗತ್ತಿನ ಕಾರ್ಮಿಕರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ ಒಂದಾಗಿ ಹೋರಾಡಲು ಕರೆ ನೀಡಿದ ಓರ್ವ ಕ್ರಾಂತಿಕಾರಿ ನಾಯಕ. ಈತನ ಸಾಹಿತ್ಯವೆಲ್ಲಾ ಶೋಷಿತ ಶ್ರಮಜೀವಿ ವರ್ಗದ ಪರವಾಗಿ ಬರೆಯಲ್ಪಟ್ಟಿದೆ. ತತ್ವ ಸಿದ್ಧಾಂತಗಳು ಎಲ್ಲ ಕಾಲಕ್ಕೂ ನಿತ್ಯನೂತನವಾಗಿದ್ದು ಸಮಾಜವಾದಕ್ಕೆ ಭದ್ರ ಬುನಾದಿ ನಿರ್ಮಿಸುತ್ತವೆ. ಹೀಗೆ ಮಾನವ ಕೋಟಿಯ ಹಿತವನ್ನು ಬಯಸಿದ ಮಾರ್ಕ್ಸ್ ನ ವೈಯಕ್ತಿಕ ಬದುಕು ಹೇಗಿತ್ತು, ಎಂಥ ಒತ್ತಡದ ಜೀವನವನ್ನು ಆತ ಸ್ವೀಕರಿಸಬೇಕಾಯ್ತು ಎಂಬುದು ಈ ಕೃತಿಯಲ್ಲಿ ನಿರೂಪಿತವಾಗಿದೆ. ಪ್ರೀತಿ ತುಂಬಿದ ಕುಟುಂಬದ ಸದಸ್ಯರು, ಜೀವನದುದ್ದಕ್ಕೂ ಮಿತ್ರನಾಗಿ, ಹೆಗಲೆಣೆಯಾಗಿ ಜೊತೆಗಿದ್ದ ಫ್ರೆಡರಿಕ್ ಎಂಗೆಲ್ಸ್ ಅವರ ಒಡನಾಟ, ಬದುಕನ್ನು ಸಮಚಿತ್ತದಿಂದ ಸ್ವೀಕರಿಸಿದ ಒಬ್ಬ ಹೋರಾಟಗಾರನ ಸಮಗ್ರ ಪರಿಚಯ ಇಲ್ಲಿದೆ.

* * *

ಕೃತಿಯ ಅನುವಾದಕರಲ್ಲೊಬ್ಬರಾದ ಜೆ. ಆರ್. ಲಕ್ಷ್ಮಣರಾವ್ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿ ೩೮ ವರ್ಷ ಸೇವೆ ಸಲ್ಲಿಸಿ ನಿವೃತ್ತರು. ವೈಜ್ಞಾನಿಕ – ವೈಚಾರಿಕ ಬರವಣಿಗೆಯಲ್ಲಿ ನುರಿತ – ಬಹುಶ್ರುತರೆಂದು ಖ್ಯಾತನಾಮರು. ವಿಜ್ಞಾನ ಪುಸ್ತಕಗಳಾದ ಚಕ್ರ, ಹಾರಾಡುವ ತಟ್ಟೆಗಳು, ಬೈಜಿಕ ವಿದ್ಯುತ್ತು ಮುಂತಾದ ಇವರ ಹಲವು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಈ ಕೃತಿಯನ್ನು ಅವರು ಪತ್ನಿ ಶ್ರೀಮತಿ ಜೀವೂಬಾಯಿ ಅವರ ಸಹಭಾಗಿತ್ವದಿಂದ ಅನುವಾದಿಸಿದ್ದಾರೆ. ಶ್ರೀಮತಿ ಜೀವೂಬಾಯಿಯವರು ಅನುವಾದಿಸಿದ ಇನ್ನೊಂದು ಕೃತಿ ಚಾರ್ಲ್ ಡಾರ್ವಿನ್ – ಆತ್ಮಕಥೆ ನವಕರ್ನಾಟಕದಿಂದ ಪ್ರಕಟಗೊಂಡಿದೆ.
ಬೆನ್ನುಡಿ
ನವಕರ್ನಾಟಕ ಪ್ರಕಾಶನ
ಬೆಲೆ : ರೂ. 60/-
 

‍ಲೇಖಕರು avadhi

2 June, 2014

2 Comments

  1. Surya Prakash

    Plz let me know how to orders the books.
    regards
    sp

    • Surya Prakash

      Book is looking good, iam looking forward complete Karnataka history in Kannada, also plz publish complete history of Kannada litr.,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading