ಸಾಮಾನ್ಯವಾಗಿ ಪ್ರಚಾರ ಮಾಡಲಾಗುತ್ತಿರುವಂತೆ ಭಯೋತ್ಪಾದಕರು ಇಸ್ಲಾಮಿನ ಫಸಲು ಅಲ್ಲ. ಆದರೆ ಬಲಾಢ್ಯ ಶಕ್ತಿಯ ಮೂಲಕ ನಡೆಯುತ್ತಿರುವ ಇನ್ನೂ ಹೆಚ್ಚುಭೀಕರವಾದ ಹಿಂಸಾಚಾರಕ್ಕೆ ಅದು
ಹಿಂಸಾತ್ಮಕ ಪ್ರತಿಕ್ರಿಯೆ. ಅದು ಸಹ ಸಾವಿರಾರು ಅಮಾಯಕರನ್ನು ಕೊಲ್ಲುತ್ತಿದೆ. ಈ ಮಾರಣ ಹೋಮಕ್ಕೆ ಕೊನೆ ಇಲ್ಲವೇನೊಎನಿಸುತ್ತಿದೆ. ರಾಷ್ಟ್ರ ರಾಜ್ಯಗಳಲ್ಲಿ ಸಾಮುದಾಯಿಕವಾಗಿ ಜನಾಂಗೀಯ ಹಿಂಸೆ ನಡೆದರೆ ವೈಶ್ವಿಕವಾಗಿ ಯುದ್ಧಗಳು ನಡೆಯುತ್ತಿವೆ. ಇದು ಆಧುನಿಕ ಜಗತ್ತಿನ ಶಾಂತಿಹಾಗೂ ಸೌಹಾರ್ದವನ್ನು ದೋಚಿಬಿಟ್ಟಿದೆ.
ಅತ್ಯಂತ ಮಹತ್ವದ ಪ್ರಶ್ನೆಯೆಂದರೆ ಒಂದೆಡೆ ಧರ್ಮವನ್ನು ಇನ್ನೊಂದೆಡೆ ಆಧುನಿಕತೆಯನ್ನು ಪಟ್ಟಭದ್ರ ಹಿತಾಸಕ್ತಿಗಳ ಆ ಕ್ಟೊಪಸ್ ಹಿಡಿತದಿಂದವಿಮೋಚನೆಗೊಳಿಸಬಹುದೆ ಎನ್ನುವುದಾಗಿದೆ. ಇದು ತುಂಬ ಕಷ್ಟಕರವಾದ ಸಂಕೀರ್ಣ ಸಮಸ್ಯೆ. ನಮಗೆ ಬೇಕಾಗಿರುವುದು ಧರ್ಮ ಹಾಗೂ ಆಧುನಿಕತೆಯ ರಚನಾತ್ಮಕ ಸಂಯೋಜನೆ. ಆದರೆ ಅದಕ್ಕೆ ಮನ್ನಣೆ ಸಿಗುವಂತೆ ಮಾಡುವುದೇ ತುಂಬ ಕಷ್ಟಸಾಧ್ಯವಾಗಿದೆ. ತನ್ನ ಆಧ್ಯಾತ್ಮಿಕ ಅರ್ಥದಲ್ಲಿ ಧರ್ಮ ಹಾಗೂ ವಿವೇಚನೆಯ ಮೇಲೆ ಒತ್ತಿನೊಂದಿಗೆ ಆಧುನಿಕತೆ ಮನುಕುಲಕ್ಕೆ ವಿಮೋಚನೆಯ ಪ್ರಬಲ ಶಕ್ತಿಯೆನಿಸಬಲ್ಲದು.
ಇಸ್ಲಾಂ ಇವೆರಡರ ಇಂಥದೊಂದು ರಚನಾತ್ಮಕ ಸಂಯೋಜನೆಯಾಗಿತ್ತು ಎಂದರೆ ಹೆಚ್ಚಿನ ಜನ ನಂಬುವುದಿಲ್ಲ. ಆದರೆ ದುರದೃಷ್ಟವಶಾತ್ ಅದು ಪಟ್ಟಭದ್ರ ಹಿತಾಸಕ್ತಿಗಳ ಅದರಲ್ಲೂ ಪಾಳೆಯಗಾರಿ ಆಡಳಿತ ವರ್ಗ ಹಾಗೂ ಮಧ್ಯಕಾಲೀನ ಮೌಲ್ಯಗಳ ಹಿಡಿತಕ್ಕೆ ಸಿಕ್ಕು ತನ್ನ ವಿಮೋಚನಾ ಸಾಮಥ್ಯವನ್ನು ಕಳೆದುಕೊಂಡಿತು.ಈ ದುರ್ದೆಸೆಯಿಂ ತಪ್ಪಿಸಿಕೊಳ್ಳುವುದು ಇಸ್ಲಾಮಿಗೆ ಕಷ್ಟ ಸಾಧ್ಯವಾಗಿತ್ತು. ಅದೇನೇ ಇರಲಿ ಕುರ್ ಆನ್ ನ ಇಸ್ಲಾಮಿಗೆ ಮನ್ನಣೆ ದೊರಕಿಸುವುದು ತುಂಬ ಕಷ್ಟಕರವಾದರೂ ಅದನ್ನು ಶೋಧಿಸುವುದಕ್ಕೆ ಇದು ಸಕಾಲ.

hasan avare khndita odalebekaad pustaka..