ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಿ ವಿ ಕೆ ಮೂರ್ತಿ ಇನ್ನಿಲ್ಲ

ಕನ್ನಡ ಪುಸ್ತಕಗಳಿಗೆ ಒಂದು ಗೌರವ ತಂದುಕೊಟ್ಟ ಹಿರಿಯ ಪ್ರಕಾಶಕ ಡಿ ವಿ ಕೆ ಮೂರ್ತಿ ಇನ್ನಿಲ್ಲ. ಡಿ ವಿ ಕೆ ಮೂರ್ತಿ ಅವರ ನಿಧನಕ್ಕೆ ‘ಅವಧಿ’ ಸಂತಾಪ ಸೂಚಿಸುತ್ತದೆ.  ‘ಕನ್ನಡಪ್ರಭ’ ಪತ್ರಿಕೆಗೆ ಅವರು ನೀಡಿದ ಸಂದರ್ಶನದ ಒಂದು ಭಾಗವನ್ನು ಪ್ರಕಟಿಸುತ್ತಿದ್ದೇವೆ.

ಸರ್ಕಾರ ನಂಬಿಕೊಂಡು ಪ್ರಕಾಶನ ಸಂಸ್ಥೆ ನಡೆಸಬಾರದು. ನಾನು ಕಳೆದ ಐದು ದಶಕಗಳಿಂದ ಇದೇ ಮಾದರಿಯಲ್ಲಿ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದೇನೆ. ಸಾಮಾಜಿಕ ಬದ್ಧತೆ ಹಾಗೂ ಉತ್ತಮ ಗುಣಮಟ್ಟದ ಸಾಹಿತ್ಯವನ್ನು ಜನರಿಗೆ ಒದಗಿಸುವುದು ನನ್ನ ಗುರಿ. ಇದನ್ನು ಜನ ಕೂಡ ಸ್ವೀಕರಿಸಿದ್ದಾರೆ. ಹೀಗಾಗಿ ನಾನು ಯಾವತ್ತೂ ಸರ್ಕಾರದ ಸಗಟು ಖರೀದಿಗೆ ಪುಸ್ತಕಗಳನ್ನು ಕಳುಹಿಸಿದವನಲ್ಲ.
ಪ್ರಕಾಶಕರು ವಾಸ್ತವಿಕತೆ, ಮಹತ್ವ ಅರಿತು ಪುಸ್ತಕಗಳನ್ನು ಪ್ರಕಟಿಸಬೇಕು. ಉತ್ತಮ ಗುಣಮಟ್ಟದ ಸಾಹಿತ್ಯ ತೀರಾ ಅವಶ್ಯಕ. ಪ್ರಕಾಶನ ಸಂಸ್ಥೆಯನ್ನು ನಾನು ಯಾವತ್ತೂ ವ್ಯವಹಾರಿಕವಾಗಿ ನೋಡಿದವನಲ್ಲ. ಲಾಭ ಗಳಿಸಲೇಬೇಕು ಎಂದರೆ ಬೇರೆ ಯಾವುದಾದರೂ ವ್ಯಾಪಾರ ಮಾಡಬಹುದು. ಸಾಮಾಜಿಕ ಬದ್ಧತೆಯಿಂದಲೇ ನಾನು ಅನುಪಮ ನಿರಂಜನ ಅವರ ‘ದಾಂಪತ್ಯ ದೀಪಿಕೆ’, ‘ತಾಯಿ-ಮಗು’ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿದೆ. ವೈಚಾರಿಕ ದೃಷ್ಟಿಕೋನಕ್ಕಾಗಿ ಎ. ಎನ್. ಮೂರ್ತಿರಾವ್ ಅವರ ‘ದೇವರು’ ಕೃತಿ ಪ್ರಕಟಿಸಿದೆ. ‘ದೇವರು’ ಕೃತಿ ಈಗ 10ನೇ ಮುದ್ರಣ ಕಾಣುತ್ತಿದೆ. ತ್ರಿವೇಣಿ, ವಾಣಿ, ನಿರಂಜನ, ಅನಕೃ, ತರಾಸು ಮೊದಲಾದವರ ಪುಸ್ತಕಗಳನ್ನು ಪ್ರಕಟಿಸಿದ್ದು, ಜನಮನ್ನಣೆ ಪಡೆದಿವೆ. ಉತ್ತಮ ಪುಸ್ತಕಗಳನ್ನು ಕೊಟ್ಟರೆ ಓದುಗರು ಒಪ್ಪಿಕೊಳ್ಳುತ್ತಾರೆ.
ಸರ್ಕಾರ ಪುಸ್ತಕಗಳ ಸಗಟು ಖರೀದಿಯಲ್ಲಿ ಆ ವರ್ಷ ಪ್ರಕಟಿಸಿದ್ದು, ಈ ವರ್ಷ ಪ್ರಕಟಿಸಿದ್ದು ಎಂದು ನೋಡಬಾರದು. ಗುಣಮಟ್ಟದ ಕಡೆಗೆ ಗಮನ ನೀಡಬೇಕು. ಪುಸ್ತಕ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಬಾರದು. ಭ್ರಷ್ಟಾಚಾರ ಇದ್ದಲ್ಲಿ ಕಳಪೆ ಪುಸ್ತಕಗಳೆಲ್ಲಾ ಬರುತ್ತವೆ. ಕನ್ನಡ ಪುಸ್ತಕ ಪ್ರಾಧಿಕಾರ, ಸರ್ಕಾರ ಅಥವಾ ಕನ್ನಡ ಸಾಹಿತ್ಯ ಪರಿಷತ್ ಯಾರೇ ಆಗಿರಲಿ ಗುಣಮಟ್ಟದ ಸಾಹಿತ್ಯಕ್ಕೆ ಮನ್ನಣೆ ನೀಡಬೇಕು. ಜನರಿಗೆ ಬೇಕಾದ ಪುಸ್ತಕಗಳನ್ನು ನೀಡಿದರೆ ಭವಿಷ್ಯ ಇದ್ದೆ ಇರುತ್ತದೆ.
05-02-2002 ರಂದು ಕನ್ನಡಪ್ರಭ ಪತ್ರಿಕೆಗೆ ನೀಡಿದ ಸಂದರ್ಶನದ ಬರಹರೂಪ
ಅಭಿನವ  ಪ್ರಕಾಶನ ಹೊರತಂದಿರುವ ಪುಸ್ತಕ ಲೋಕದ ಅನನ್ಯರು ಮಾಲಿಕೆಯ ದಿ ವಿ ಕೆ ಮೂರ್ತಿ ಕೃತಿಯಿಂದ

‍ಲೇಖಕರು avadhi

9 December, 2009

5 Comments

  1. ಡಾ.ಬಿ.ಆರ್.ಸತ್ಯನಾರಾಯಣ

    ತಾವು ಪ್ರಕಟಿಸಿದ ಪುಸ್ತಕಗಳಿಂದಲೇ ನಾಡಿನಾದ್ಯಂತ ಚಿರಪರಿಚಿತರಾಗಿದ್ದ ಗೌರಾನ್ವಿತ ಡಿ.ವಿ.ಕೆ.ಮೂರ್ತಿ ಅವರು ಇನ್ನಿಲ್ಲ ಎಂಬುದು ತುಂಬಾ ದುಃಖದ ವಿಚಾರ. ನಾಡಿನ ಪುಸ್ತಕೋದ್ಯಮದಲ್ಲಿ ಒಂದಿಷ್ಟು ಮೌಲ್ಯಗಳು ಉಳಿದುಕೊಂಡಿದ್ದೇ ಅಂತಹ ಹಿರಿಯರಿಂದ.
    ಅವರಿಗೆ ಚಿರಶಾಂತಿ ಲಭಿಸಲಿ.

  2. armanikanth

    very very bad news.
    manikanth.

  3. sharadabooks

    ತಾವು ಪ್ರಕಟಿಸಿದ ಪುಸ್ತಕಗಳಿಂದಲೇ ನಾಡಿನಾದ್ಯಂತ ಚಿರಪರಿಚಿತರಾಗಿದ್ದ ಗೌರಾನ್ವಿತ ಡಿ.ವಿ.ಕೆ.ಮೂರ್ತಿ ಅವರು ಇನ್ನಿಲ್ಲ ಎಂಬುದು ತುಂಬಾ ದುಃಖದ ವಿಚಾರ. ಕನ್ನಡ ಪ್ರಕಾಶನ ವಿಬಾಗಕ್ಕೆ ದೊಡ್ಡ ನಸ್ಟ.

  4. Ganesh Shenoy

    My deep condolences for the departed soul whose name had become synonymous with book publishing in Mysore. The name will continue to kindle our enthusiasm for reading of good books and forever remain housed in our hearts with love and respect. Mysoreans were blessed to have DVK Murthy among them and so were all Kannadigas.

  5. Punchline-Ganesh

    ಡಿ.ವಿ.ಕೆ. ಮೂರ್ತಿ ಅಂದ ತಕ್ಷಣ ನೆನಪಿಗೆ ಬರೋದು ದೇವರು ಕೃತಿ. ವೈಚಾರಿಕ ದೃಷ್ಟಿಕೋನದ ವ್ಯಕ್ತಿ, ಪ್ರಕಾಶಕ ಮಾತ್ರ ಆ ಪುಸ್ತಕವನ್ನ ಪ್ರಕತಿಸಬಲ್ಲ ಮತ್ತು ಅದರ ಅಗಲ, ಆಳ ಮಹತ್ವಗಳನ್ನ ಅರಿಯಬಲ್ಲ. ಡಿ.ವಿ.ಕೆ ಅಪರೂಪದ ವ್ಯಕ್ತಿ.
    ಗಣೇಶ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading