ಡಿ ಎಸ್ ರಾಮಸ್ವಾಮಿ
ನನ್ನ ಮೆಚ್ಚಿನ ಹತ್ತು ಪುಸ್ತಕಗಳು :
1. ಕರ್ಣಾಟಕ ಭಾರತ ಕಥಾಮಂಜರಿ – ಕುಮಾರವ್ಯಾಸ
ಭಾರತ ಅಂದೂ ಇಂದೂ ಮುಂದೂ ಹೇಗಿತ್ತು ಹೇಗಿರಬಹುದೆನ್ನುವ ಅದ್ಭುತ ಸಾರ ಸಂಗ್ರಹ. ಪುರುಸೊತ್ತಾದಾಗಲೆಲ್ಲ ರೂಪಕ ಸಾಮ್ರಾಜ್ಯ ಚಕ್ರವರ್ತಿಯೊಂದಿಗೆ ಮಾತು ಕತೆ.
2. ಪುರಾಣ ನಾಮ ಚೂಡಾಮಣಿ- ಬೆನಗಲ್ ರಾಮರಾವ್ –
ಪ್ರಸಾರಾಂಗ, ಮೈಸೂರು ವಿಶ್ವ ವಿದ್ಯಾಲಯದ ಪ್ರಕಟನೆ- ಪುರಾಣೇತಿಹಾಸಗಳ ಪಾತ್ರ ಪ್ರಪಂಚದ ಸೂಕ್ಷ್ಮ ಪರಿಚಯ- ರೂಪಕ, ಪ್ರತಿಮೆಗಳಿಗೆ ತಡಕಾಡುವ ಕವಿಗೆ ಸುಗ್ರಾಸ ಭೋಜನ.
3. ಮಲ್ಲಿಗೆಯ ಮಾಲೆ- ಕೆ ಎಸ್ ನ ಸಮಗ್ರ ಕಾವ್ಯ- ಕವಿತೆಯಲ್ಲಿ ಬಳಸಬಹುದಾದ ಸೂಕ್ಷ್ಮ ಸನ್ನಿವೇಶಗಳ ಬೆಳಕಿಂಡಿ

4. ಸಮಗ್ರ ಕಾವ್ಯ- ಅಡಿಗ – ಕಾವ್ಯೋಪಾಸಕರ ನಿತ್ಯ ಪಾರಾಯಣದ ಪರಮ ಸೂಕ್ತ.
5. ಸಂಪಿಗೆ ಭಾಗವತ- ಲಕ್ಷೀಶ ತೋಳ್ಪಾಡಿ- ಭಾಗವತದ ಸರಳ ನಿರೂಪಣೆ.
6. ಮಂಕುತಿಮ್ಮನ ಕಗ್ಗ- ಡಿ ವಿ ಜಿ

7. ಬಾಳಿಗೊಂದು ಬೆಳಗು- ಜಿಡ್ಡು ಕೃಷ್ಣಮೂರ್ತಿ
8. ರಾಮ ಮನೋಹರ ಲೋಹಿಯ ಪುಸ್ತಕ ಸರಣಿ- ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಣೆ-
9. ಪೂರ್ವಾಪರ- ಯು ಆರ್ ಅನಂತಮೂರ್ತಿ ಚಿಂತನ ಮಾಲಿಕೆ
10. ಹುಳಿಮಾವಿನ ಮರ – ಲಂಕೇಶ್ – ಬರಹದ ತುರೀಯ- ಆತ್ಮವಂಚನೆಯ ನೆರಳಿರದ ಸಹಜ ಆತ್ಮ ವೃತ್ತಾಂತ




pusthakagala ayke ishtavayitu.