ಡಾ ಸ್ವಾಮಿ ಎಚ್ ಆರ್ ಕಂಡಂತೆ ‘ನಾಸ್ತಿಕ ಮೇಳ’

ಡಾ ಸ್ವಾಮಿ ಎಚ್ ಆರ್

**

ಆಂದ್ರದ ಗುಂಟೂರು ಜಿಲ್ಲೆಯ ಮಂಗಳ ಗಿರಿಯ ನಿಡುಮರು ಗ್ರಾಮದ ಚಾರ್ವಾಕ ಆಶ್ರಮದಲ್ಲಿ ನಡೆದ ‘ನಾಸ್ತಿಕ ಸಮಾಜಂ’ ನಲ್ಲಿ ನಡೆದ 50 ವರ್ಷಗಳ ನೆನಪಾರ್ಥ ಹಮ್ಮಿಕೊಂಡಿದ್ದ ಎರಡು ದಿನದ ಸಮ್ಮೇಳನದಲ್ಲಿ. ಪವಾಡಗಳು, ದೇವರುಗಳ ಇರುವಿಕೆಯನ್ನು ಸಾಬೀತು ಮಾಡಿದರೆ ಹತ್ತು ಲಕ್ಷ ರೂಪಾಯಿಗಳನ್ನು ಬಹುಮಾನ ಪಡೆಯಬಹುದು ಎಂಬ ಮುಕ್ತ ಸವಾಲು ಹಾಕಿರುವ ಇವರು 32 ವರ್ಷಗಳಿಂದ ನಾಸ್ತಿಕಮೇಳ ನಡೆಸುತ್ತಾ ಬಂದಿರುವುದು ಆಶ್ಚರ್ಯ. ಈ ನಾಸ್ತಿಕಮೇಳದ ಸಂಸ್ಥಾಪಕರು ಚಾರ್ವಾಕ ರಾಮಕೃಷ್ಣ. ಈ ಸಣ್ಣ ಕುಗ್ರಾಮದಲ್ಲಿ ಒಂದೆರೆಡು ಎಕರೆ ಜಮೀನು ಕೊಂಡು ವೈವಿಧ್ಯಮಯ ಹೂವಿನ ಗಿಡ, ಮರಗಳನ್ನು ಬೆಳೆಸಿಕೊಂಡು ಸರಳವಾದ ಸಣ್ಣ ಆಶ್ರಮ ಕಟ್ಟಿದ್ದಾರೆ.

ಅಲ್ಲಿ ಅಧ್ಯಯನ, ವಿಚಾರ ಸಂಕಿರಣ, ಸಮಾವೇಶಗಳು ನಿರಂತರ. ಈಗ ಸಂಸ್ಥಾಪಕರಾದ ಚಾರ್ವಾಕ ರಾಮಕೃಷ್ಣ ತೀರಿಕೊಂಡ ಮೇಲೆ ಅವರ ಮಕ್ಕಳಾದ ಸುಧಾಕರ ಹಾಗೂ ಮಗಳು ಅರುಣ ಚಟುವಟಿಕೆಗಳನ್ನು ಅಪ್ಪನ ಸಿದ್ದಾಂತಕ್ಕೆ ಚ್ಯುತಿ ಬಾರದಂತೆ ಮುಂದುವರೆಸುತ್ತಿರುವುದೆ ಬೆರಗು. 1973 ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಅಸ್ಪೃಶ್ಯತೆ, ಮೌಢ್ಯದ ವಿರುದ್ಧ, ನಿರಂತರ ಹೋರಾಟ ಮಾಡುತ್ತಾ ಬಂದಿದೆ. ವೈಜ್ಞಾನಿಕ ಮನೋಭಾವ ಬಿತ್ತಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಸುತ್ತಿದ್ದಾರೆ. ಈ ಸಮ್ಮೇಳನಕ್ಕೆ ಕುಟುಂಬ ಸಮೇತ ಬರಲು ಆಹ್ವಾನಿಸಿದ್ದರು. ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಯಾವುದೇ ಪ್ರಯಾಣ ಭತ್ಯೆ ಸರ್ಕಾರಿ ನೌಕರರಿಗೆ OOD , ವಸತಿ ಉಚಿತ ವ್ಯವಸ್ಥೆ ಇರಲಿಲ್ಲ.

ಆದರೆ ಸರಳ ಆಹಾರದೊಂದಿಗೆ ಆದರತೆ ತುಂಬಿತ್ತು. ಕುಟುಂಬ ಸಮೇತ ಬರಲು ಕರೆ ಕೊಟ್ಟಿದ್ದರು ಕರ್ನಾಟಕದಿಂದ ಯಾರೂ ಕರೆದೊಯ್ದಿರಲಿಲ್ಲ, ಆದರೆ ಬೇರೆ ಕಡೆಯಿಂದ ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಬಂದಿದ್ದು ವಿಶೇಷ. ಕಥೆ, ಕಾದಂಬರಿ, ಕವನ ಸಂಕಲನಗಳನ್ನು ಹೊರತು ಪಡಿಸಿ ವಿಚಾರ ಸಾಹಿತ್ಯ, ವಿಜ್ಞಾನ ಲೇಖನಗಳು, ಅಂಬೇಡ್ಕರ್,ಬುದ್ದ, ಪೆರಿಯಾರ್.ಮಾರ್ಕ್ಸ್,ಚೆಗೆವಾರ, ಭಗತ್ ಸಿಂಗ್, ಸಂವಿಧಾನ, ಕ್ರಾಂತಿ ಪುಟಗಳೇ ತುಂಬಿದ್ದ ಪುಸ್ತಕ ಜಾತ್ರೆ ಮನಸೆಳೆದ ಕ್ಷಣ.

ವೈಜ್ಞಾನಿಕ ಮನೋಭಾವ ಕುರಿತು ಕರ್ನಾಟಕದ ನಮ್ಮ ಹೆಮ್ಮೆಯ ಪ್ರೊಫೆಸರ್ ನರೇಂದ್ರನಾಯಕ್. ಮಹಿಳಾ ಚೈತನ್ಯ. ವೈಜ್ಞಾನಿಕ ಮನೋಭಾವ ಕುರಿತು ವಿಮಲಾ ಅತಿಸೂಕ್ಷ್ಮ ಪ್ರಪಂಚ ಕುರಿತು ಡಾ.ಮನ್ನಮ್ ಕೃಷ್ಣಮೂರ್ತಿ, ಸಾಮ್ರಾಜ್ಯವಾದ ಮತ್ತು ಯುದ್ದಗಳು ಎ ನರಸಿಂಹ ರೆಡ್ಡಿ. ಮೂಢನಂಬಿಕೆ ನಿರ್ಮೂಲನೆ ಪಿ ಶ್ರೀನಿವಾಸಲು ನಾಯುಡು, ಆಹಾರ ಮತ್ತು ಆರೋಗ್ಯ ಕುರಿತು ಡಾ ಕೆ ಶಂಕರ್, ಮನಸ್ಸು ಸೃಷ್ಟಿಸುವ ಭಯ ಮತ್ತು ಭ್ರಮೆಗಳು ಕುರಿತು ಪ್ರತಾಪ್ ಕುಮಾರ್ ದತ್ . ಮಾರನೆ ದಿನ ಪೆರಿಯಾರ್ ಸಿದ್ದಾಂತ ಸಾಮಾಜಿಕ ಆಚರಣೆ, ಪ್ರಾಸಂಗಿಕತೆ ಈ ವಿಷಯ ಜಿ ಈಶ್ವರಯ್ಯ, ನಮ್ಮ ಮಾನವ ಮೂಲ ಡಾ ಜಯಕುಮಾರ್, ಜಾತಿ ವ್ಯವಸ್ಥೆ ಕುರಿತು ವೇಣುಗೋಪಾಲ್, ಭಾರತೀಯ ಸಮಾಜ :ಮಾನಸಿಕ ಗುಲಾಮತ್ವ. ಡಾ ಬಿ ವಿ ರಾಘವ.

ಈ ಎಲ್ಲಾ ವಿಷಯಗಳ ಕುರಿತು ಉಪನ್ಯಾಸ, ಚರ್ಚೆ, ಸಂವಾದದಲ್ಲಿ ಭಾಗಿಯಾದ ನಮಗೆ ಕರ್ನಾಟಕದಲ್ಲೂ ಇಂತಹದೊಂದು ಸಮಾವೇಶ ಮಾಡುವ ಪ್ರಯತ್ನಕ್ಕೆ ಚಿಂತಿಸುತ್ತಾ. ವಿಜಯವಾಡಕ್ಕೆ ಪ್ರಯಾಣಿಸಿ ಅತಿ ಎತ್ತರದ ಆಕಾಶದಗಲಕ್ಕೂ ಹಬ್ಬಿರುವ ಬಾಬಾ ಸಾಹೇಬರನ್ನು ಕತ್ತೆತ್ತಿ ನೋಡಲು ಪ್ರಯತ್ನಿಸಿದ ಘಳಿಗೆ ಸಾರ್ಥಕ ಕ್ಷಣ ಪಯಣ ಎನಿಸಿತು.

‍ಲೇಖಕರು Admin MM

February 20, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: