ಡಾ. ಸಿಂಧುವಳ್ಳಿ ಅನಂತಮೂರ್ತಿ ನೆನಪಿನ ಕನ್ನಡ ನಾಟಕ ರಚನಾ ಸ್ಪರ್ಧೆ
ಕನ್ನಡ ರಂಗಭೂಮಿಯ ಉನ್ನತಿಗೆ ಪ್ರಾಮಾಣಿಕ ಕಳಕಳಿಯನ್ನು ಹೊಂದಿದ್ದ ಡಾ. ಸಿಂಧುವಳ್ಳಿ ಅನಂತಮೂರ್ತಿಯವರ ಕೊಡುಗೆಯನ್ನು ಗೌರವಿಸುವ ಧ್ಯೇಯೋದ್ದೇಶದಿಂದ ಮೈಸೂರಿನ ಕಲಾಸುರುಚಿಯು ಅವರ ನೆನಪಿನಲ್ಲಿ ಕನ್ನಡ ನಾಟಕ ರಚನಾ ಸ್ಪರ್ಧೆಯನ್ನು ಆಯೋಜಿಸಿದೆ. ನಾಟಕ ಸ್ವತಂತ್ರ ರಚನೆಯಾಗಿದ್ದು ಆಸಕ್ತಿಯುಳ್ಳ ಸೃಜನಶೀಲರು ಇದರಲ್ಲಿ ಭಾಗವಹಿಸಬಹುದು. ಈ ಸ್ಪರ್ಧೆಯ ನಿಯಮಗಳು ಕೆಳಗಿನಂತಿವೆ.
1. ನಾಟಕಗಳ ವಸ್ತು ಸಮಕಾಲೀನವಾಗಿರಬೇಕು
2. ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳಾಗಿರಬಾರದು ಮತ್ತು ಆ ವಸ್ತುಗಳನ್ನು ಸಮಕಾಲೀನಕ್ಕೆ ಅಳವಡಿಸಿರಬಾರದು
3. ನಾಟಕವು 90 ರಿಂದ 120 ನಿಮಿಷದ ಅವಧಿಯದ್ದಾಗಿರಬೇಕು.
4. ಮುದ್ರಿತ ಪ್ರತಿಯನ್ನು ಕಳಿಸಬೇಕು. ( ಬರಹ ಅಥವಾ ನುಡಿ ತಂತ್ರಾಂಶವನ್ನು ಉಪಯೋಗಿಸಿ ಕೆಳಗೆ ಕೊಟ್ಟಿರುವ ಮಿಂಚಂಚೆಗೆ ಕಳಿಸಿದರೆ ಉತ್ತಮ)
5. ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ನಾಟಕಗಳನ್ನು ಪ್ರಕಟಿಸುವುದಕ್ಕೆ ಲಿಖಿತ ಅನುಮತಿಯನ್ನು ನೀಡಬೇಕು. (ಪ್ರಕಟಿತ ನಾಟಕಗಳ 25 ಪ್ರತಿಗಳನ್ನು ನಾಟಕಕಾರರಿಗೆ ಉಚಿತವಾಗಿ ನೀಡಲಾಗುವುದು) ನಾಟಕಗಳ ಹಕ್ಕು ಸ್ವಾಮ್ಯ ನಾಟಕಕಾರರದ್ದೇ ಆಗಿರುತ್ತದೆ.
6. ರೂ. 5000 ಪ್ರಥಮ ಬಹುಮಾನ; ರೂ. 3000 ದ್ವಿತೀಯ ಬಹುಮಾನ ಹಾಗೂ ರೂ. 2000 ತೃತೀಯ ಬಹುಮಾನ ನೀಡಲಾಗುವುದು. ತೀರ್ಪುಗಾರರ ನಿರ್ಧಾರಕ್ಕೆ ಒಳಪಟ್ಟು ಮೆಚ್ಚುಗೆ ಬಹುಮಾನಗಳೂ ಸಹ ಇರಬಹುದು.
7. ಸ್ಪರ್ಧೆಯ ವೇಳಾಪಟ್ಟಿ ಇಂತಿದೆ.
ಹಸ್ತಪ್ರತಿ ಸಲ್ಲಿಸಲು ಕೊನೆಯ ದಿನಾಂಕ 28-2-2015
ಅವಲೋಕನ ಮತ್ತು ತೀರ್ಪು 15-4-2015
ಬಹುಮಾನ ವಿತರಣೆ ಮತ್ತು ಪುಸ್ತಕ ಬಿಡುಗಡೆ 9-5-2015
8. ನಾಟಕಗಳನ್ನು ಕಳಿಸಬೇಕಾದ ವಿಳಾಸ:
ಕಲಾಸುರುಚಿ
476, ಚಿತ್ರಭಾನು ರಸ್ತೆ
ಕುವೆಂಪುನಗರ
ಮೈಸೂರು 570023
ದೂರವಾಣಿ: 0821-2541795
ಮಿಂಚಂಚೆ: kalasuruchi@gmail.com
ಸಂಪರ್ಕ ವಿಳಾಸ:
ಶ್ರೀ ಭದ್ರಪ್ಪ ಶಿ. ಹೆನ್ಲಿ 09481437600 bshenly@gmail.com
ಶ್ರೀಮತಿ ಹರಿಪ್ರಸಾದ್ 09945101649






0 Comments