ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ರಾಜ್ ಮನೆಯಲ್ಲಿ ಪಚ್ಚೆ

ಪಚ್ಚೆ ನಂಜುಂಡಸ್ವಾಮಿ

ಚಾಮರಾಜನಗರ ಜಿಲ್ಲೆಯ ದೊಡ್ಡ ಗಾಜನೂರಿನಲ್ಲಿರುವ ಪದ್ಮಭೂಷಣ, ಕರ್ನಾಟಕ ರತ್ನ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕನ್ನಡದ ಮೇರು ನಟ, ನಟಸಾರ್ವಭೌಮ ಡಾ.ರಾಜಕುಮಾರ್ ರವರ ಹುಟ್ಟಿದ ಮನೆ ಮತ್ತು ಅವರು ವೃದ್ಧಾಪ್ಯದಲ್ಲಿ ಕಾಲ ಕಳೆಯಬೇಕೆಂದು ಕಟ್ಟಿಸಿದ್ದ ಎರಡೂ ಮನೆಗಳಿಗೆ ಅಚಾನಕ್ಕಾಗಿ ಭೇಟಿಕೊಟ್ಟೆವು.

ರಾಜಕುಮಾರ್ ರವರ ತಂಗಿ ಮತ್ತವರ ಮಗ ಹಾಗೂ ಸಂಬಂಧಿಕರನ್ನು ಭೇಟಿ ಮಾಡಿದೆವು. ಪ್ರಾರಂಭದಲ್ಲಿ ನಾನ್ಯಾರು ಎಂದು ಹೇಳಿಕೊಂಡಿರಲಿಲ್ಲ. ಜೊತೆಯಲ್ಲಿದ್ದ ಗೆಳೆಯ ಅಜೇಯ್ ಹೆಗ್ಗವಾಡಿಪುರ ಪರಿಚಯಿಸಿದ ಮೇಲೆ, ಆ ಕುಟುಂಬ ತುಂಬಾ ಖುಷಿಪಟ್ಟಿತು. ನಾನು ರಾಜಕುಮಾರ್ ರವರ ಗುಣಗಾನ ಮಾಡಲು ಶುರುಮಾಡಿದೆ. ಅವರು ಪ್ರೊಫೆಸರ್ ರವರ ಗುಣಗಾನ ಮಾಡಲು ಶುರು ಮಾಡಿದರು. ಅದೊಂದು ಧನ್ಯ ಮಿಲನ. ಇನ್ನೇನು ಪರಿಚಯವಾಯ್ತಲ್ಲ,ಆಗಾಗ ಬರ್ತಾ ಇರಿ ಎಂದಾಕ್ಷಣ, ಧನ್ಯತಾ ಮನೋಭಾವ ಮೂಡಿತು. ಅದೊಂದು ಕಲಾವಿದರ ದೇವಾಲಯವೇ ಅನ್ನಿಸಿತು.

‍ಲೇಖಕರು Admin

24 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading