ಕೆ ಅಕ್ಷತಾ
ಮೈಸೂರಿನಲ್ಲಿ ಪಾಣಿ ಅಂತಿದ್ದ. ಅವನದೊಂದು ಗ್ಯಾರೇಜಿತ್ತು. ನನ್ನ ಪುಣ್ಯಕ್ಕೆ ಪಾಣಿಗೆ ನಾನು ಹೇಳಿದ ಕೆಲವೇ ದಿನದಲ್ಲಿ ನನಗೆ ರಾಯಲ್ ಅಂಡ್ ಫೀಲ್ಡ್ ಕಂಪನಿಯ ಪ್ರಿನ್ಸ್ ಅನ್ನೋ ಸೆಕೆಂಡ್ ಹ್ಯಾಂಡ್ ಗಾಡಿಯನ್ನು 1800 ರೂಪಾಯಿಗೆ ಪಾಣಿ ಕೊಡಿಸಿದ್ರು. ಪಾಣಿ ತಂದುಕೊಟ್ಟ ಮೋಟಾರ್ ಸೈಕಲ್ನ್ನು ನೋಡ್ಲಿಕ್ಕೆ ಹಾಸ್ಟೆಲ್ ಹುಡುಗರು ನೆರೆದರು. ತೇಜಸ್ವಿ ಬಂದ್ರು. ಅವರೆಲ್ಲರ ಅಪೇಕ್ಷೆಯಂತೆ ಅಲ್ಲೆ ಮಾರು ದೂರ ಗಾಡಿ ಓಡಿಸಿ ತೋರಿಸೋದು ಅಂತ ನಿಧರ್ಾರ ಆಯ್ತು. ಆದರೆ ನಾನು ಎಷ್ಟು ಪ್ರಯತ್ನಿಸಿದರೂ ಗಾಡಿ ಸ್ಟಾಟರ್್ ಆಗ್ಲೇ ಇಲ್ಲ. ಪ್ರಿನ್ಸ್ ಸ್ಟಾಟರ್್ ಆಗದೇ ಇರೋಕೂ ಪೆಟ್ರೋಲ್ ರಿಚ್ ಆಗಿದ್ದೆ ಕಾರಣ. ತೇಜಸ್ವಿ ಇದ್ದೋರು, `ರೀ ಶಾಮಣ್ಣ, ನಿಮಗೆ ಹೇಳ್ದೆ ವೆಸ್ಪಾ ಸ್ಕೂಟರ್ ತಗಳ್ರಿ ಅಂತ. ನನ್ನ ಮಾತು ಎಲ್ಲಿ ಕೇಳ್ತೀರಿ. ಈ ಪ್ರಿನ್ಸ್ ಗಿನ್ಸು ಎಲ್ಲ ನನ್ನ ಪ್ರಕಾರ ಮೋಟಾರ್ ಸೈಕಲ್ ಅಲ್ಲ. ಇದು ಈಗ ಸ್ಟಾಟರ್್ ಆಗಿಲ್ಲ ಅಂತ ಮಾತ್ರ ಅನ್ಕೋಬೇಡಿ ಒಂದ್ಸಾರಿ ಸ್ಟಾಟರ್್ ಆದ್ಮೇಲೆ ಇದು ಎಷ್ಟು ಸಮಸ್ಯೆ ಮಾಡತ್ತೆ ನೋಡ್ತಾ ಇರಿ. ಬೇಡ ಅಂದ್ರು ಅಷ್ಟು ದುಡ್ಡು ಕೊಟ್ಟು ತಂದಿದೀರಿ ಅನುಭವಿಸಿ’ ಅಂತ ಬಯ್ಯೋಕೆ ಶುರು ಮಾಡಿದ್ರು. ನನ್ನಿಂದ ಯಾವಾಗ ಗಾಡಿ ಸ್ಟಾಟರ್್ ಮಾಡಕ್ಕೆ ಸಾಧ್ಯವಾಗ್ಲಿಲ್ವೊ ಆವಾಗ ಅಲ್ಲಿದ್ದ ಹುಡುಗರೆಲ್ಲ `ನಾನೊಂದು ಕೈ ನೋಡ್ತೀನಿ, ನಾನೊಂದು ಕೈ ನೋಡ್ತೀನಿ’ ಅಂತ ಗಾಡಿಯನ್ನ ಸ್ಟಾಟರ್್ ಮಾಡೋ ಪ್ರಯತ್ನದಲ್ಲಿ ತೊಡಗಿದರು. ಪೆಟ್ರೋಲ್ ರಿಚ್ ಆದರೆ ಜಾಸ್ತಿ ಬಲಪ್ರಯೋಗ ಮಾಡಿ ಒದ್ದು ಸ್ಟಾಟರ್್ ಮಾಡಬೇಕಲ್ಲ. ಎಲ್ಲರೂ ಗಾಡಿಯನ್ನ ಒದೆಯೋಕೆ ಶುರು ಮಾಡಿದ್ರು. ಹಾಸ್ಟೆಲ್ಗೆ ತಂದ ಕ್ಷಣಾರ್ಧದಲ್ಲಿ ಪ್ರಿನ್ಸ್ನ ಮೇಲೆ ನನ್ನ ಒಡೆತನ ತಪ್ಪಿ ಅದೊಂದು ಸಾರ್ವಜನಿಕ ಆಸ್ತಿಯಂತಾಯ್ತು. ಎಲ್ಲರೂ ತಮ್ಮ ಕಾಲಿನ ತ್ರಾಣ ಎಲ್ಲ ಸೇರಿಸಿ ಒದ್ರೂ ಗಾಡಿ ಬಿಲ್ ಕುಲ್ ಸ್ಟಾಟರ್್ ಆಗ್ಲಿಲ್ಲ. ಆದರೆ ಹೀಗೆ ಮಾಡಿದ್ರಿಂದ ಗಾಡಿಯ ಕಿಕ್ಸ್ಟಾಟರ್್ ಕಳಚ್ಕಂಬಂತು. ಹಾಸ್ಟೆಲ್ನಲ್ಲಿ ಸೋಮಣ್ಣ ಅಂತಿದ್ದ ಕೊಡಗಿನವನು. ಅವನ ಮನೆಯಲ್ಲಿ ಪ್ರಿನ್ಸ್ ಇತ್ತಂತೆ. `ಕಿಕ್ ಮಾಡಿ ಸ್ಟಾಟರ್್ ಮಾಡ್ಲಿಕ್ಕೆ ಆಗದೇ ಇದ್ದಾಗ ದೂಕಿದರೆ ಸ್ಟಾಟರ್್ ಆಗತ್ತೆ’ ಅಂತ ಸಜೆಷನ್ ಕೊಟ್ಟ. ಸ್ಸರಿ ಗಾಡಿಯನ್ನ ದೂಕಲಿಕ್ಕೆ ಶುರು ಮಾಡಿದರು. ದೂಕುವಾಗ ಕ್ಲಚ್ ಹಾಕದೆ ಗಾಡಿಯನ್ನ ಗೇರಿಗೆ ಹಾಕಿದ್ರಿಂದ ಗೇರ್ ಬಾಕ್ಸ್ ಕಥೆ ಮುಗೀತು. ಹೀಗೆ ಎಲ್ಲ ಹುಡುಗರು ಸೇರ್ಕಂಡು ದೂಕದೂ, ಒದೆಯೋದು ಮಾಡ್ತಿದ್ದರೆ ಗಾಡಿಯ ಎಲ್ಲ ಸ್ಪೇರ್ ಪಾಟ್ಸರ್್ ಹರಕು ಮುರಕು ಸ್ಥಿತಿಯಲ್ಲಿ ಕೈಗೆ ಬರ್ತಾವಷ್ಟೆ ಅಂತ ಎಚ್ಚರಗೊಂಡ ನಾನು ಹರ ಸಾಹಸ ಪಟ್ಟು ನನ್ನ ಪ್ರಿನ್ಸ್ನ್ನು ಗೆಳೆಯರಿಂದ ಬಚಾವ್ ಮಾಡಿದೆ.
ಆಮೇಲು ಪ್ರಿನ್ಸ್ನ ಸ್ಟಾಟರ್ಿಂಗ್ ಟ್ರಬಲ್ ಇದ್ದೆ ಇತ್ತು. ನಾನು ಓಡಿಸೋ ಪರಿಗೆ ಎಲ್ಲ ಟ್ರಬಲ್ಗಳು ಬರಲೇಬೇಕು ಹಾಗೆ ಓಡಿಸ್ತಿದ್ದೆ. ದಾರಿ ಎಲ್ಲ ಬೇಕಂತ ಇಲ್ವೆ ಇಲ್ಲ. ಹಾಕ್ಕಂಡು ಹೊಡೀತಿರೋದೆ. ಜೊತೆಗೆ ಅದು ಏನಾದ್ರೂ ಕೈ ಕೊಟ್ರು ಏನೂ ತಲೆ ಬಿಸಿ ಮಾಡಿಕೊಳ್ತಿರಲಿಲ್ಲ. ಪಾಣಿ ಹತ್ರ ಚೂರು ಪಾರು ಸರಿ ಮಾಡಿಸ್ಕಂಡು ಮತ್ತೆ ಹೊಡಿಯೋದು. ಒಂದು ಸರ್ತಿ ರಂಗನತಿಟ್ಟು ಪಕ್ಷಿಧಾಮಕ್ಕೆ ಫೋಟೋ ತೆಕ್ಕಂಡು ಬರ್ಲಿಕ್ಕೆ ನನ್ನ ಪ್ರಿನ್ಸ್ ನಲ್ಲಿ ನಾನು ತೇಜಸ್ವಿ ಹೋಗಿದ್ವಿ ಅರ್ಧದಾರಿಯಲ್ಲಿ ಇದು ನಿಂತಿದ್ದು ಬಿಲ್ ಕುಲ್ ಸ್ಟಾಟರ್ೆ ಆಗ್ಲಿಲ್ಲ. ಅದನ್ನ ಮೈಸೂರಿನ ತನಕ ತಳ್ಕಂಡು ಬಂದಿದ್ದಾಯ್ತು. ಅದಕ್ಕೆ ತೇಜಸ್ವಿ, `ನಾನೇ ನೋಡ್ತಿದ್ದಂಗೆ ಶಾಮಣ್ಣನ್ನ ಅದು ಹೊತ್ತು ಸೇವೆ ಮಾಡಿದ್ದಕ್ಕಿಂತ, ಅದಕ್ಕೆ ಶಾಮಣ್ಣ ಸೇವೆ ಮಾಡಿದ್ದೆ ಜಾಸ್ತಿ’ ಅಂತ ಹೇಳೋರು.]]>





0 Comments