ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೈಮ್ ಪಾಸ್ ಕಡ್ಲೆಕಾಯಿ : `ಮೀನಿಗೆ ಸಮುದ್ರದಲೇ ದೇವರು ಬಿಸ್ಮಿಲ್ಲಾ ಮಾಡಿರ್ತಾನೆ’!!

ಕೆ ಅಕ್ಷತಾ

ಒಂದ್ಸಾರಿ ನಾನು ತೇಜಸ್ವಿ ಶಿಕಾರಿಗೆ ಹೊರಟಾಗ ಜೊತೆಗಿದ್ದ ಖಾಜಿಯವರನ್ನೂ ಒತ್ತಾಯ ಮಾಡಿ ಹೊರಡಸಿದ್ವಿ. ಅವರ ರೈಫಲ್ನಿಂದ ಬಿದಿರು ಮೆಳೆಯಲ್ಲಿ ಬಿಸಿಲು ಕಾಯಿಸುತ್ತ ಕುಳಿತಿದ್ದ ಎಂಟ್ಹತ್ತು

ಹಕ್ಕಿಗಳನ್ನ ತೇಜಸ್ವಿ ಹೊಡೆದರು. ಅದನ್ನ ಚೀಲಕ್ಕೆ ತುಂಬುವ ಕೆಲಸ ಖಾಜಿ ವಹಿಸಿಕೊಂಡಿದ್ರು ಅವರು ಶಿಕಾರಿಗೆ ಬರುವಾಗ್ಲೇ ಚಾಕು ಹಿಡ್ಕೊಂಡು ಬಂದಿದ್ರು ಬಿಸ್ಮಿಲ್ಲಾ ಮಾಡೋಕೆ. ಜೊತೆಗೆ

ಕಂಡೀಷನ್ ಅವರ್ದು `ಬಿಸ್ಮಿಲ್ಲಾ ಮಾಡ್ದೇ ಯಾವುದೇ ಹಕ್ಕಿಯನ್ನು ಚೀಲಕ್ಕೆ ತುಂಬೋ ಹಾಗಿಲ್ಲ. ಹಾಗೇನಾದ್ರೂ ಮಾಡಿದ್ರೆ ಮಾಂಸ ತಿನ್ನಕ್ಕೆ ನಿಮಗೂ ಬಿಡಲ್ಲ’ ಅಂತ. ಬಿದಿರು ಮೆಳೆಯ ನಡುವೆ ಸಿಕ್ಕಿ

ಹಾಕ್ಕಂಡಿದ್ದ ಹಕ್ಕಿಗಳನ್ನೆಲ್ಲ ಚೀಲಕ್ಕೆ ತುಂಬಿಕೊಂಡು ಹೊರಡೋವಾಗ ನನಗೆ ಒಂದು ಹಕ್ಕಿ ಬಿದಿರು ಮೆಳೆ ನಡುವೆ ಕಾಣಿಸಿತು. ನಾನದನ್ನ ಉರುಳಿಸಿ ಅರೆಜೀವವಾಗಿದ್ದ ಅದನ್ನ ಖಾಜಿಗೆ ಹೇಳದೆ

ಹಾಗೆ ಚೀಲಕ್ಕೆ ತುಂಬಿದೆ. ಬಿಸ್ಮಿಲ್ಲಾ ಮಾಡದೇ ಇದ್ದರೆ ಏನೀಗ ಅಂತ ಜೊತೆಗೆ ಖಾಜಿಗೆ ಇದು ಗೊತ್ತಾಗೋದಿಲ್ಲ ಅಂತ ತಿಳಿದಿದ್ದೆ.ಚೀಲ ತಗಂಡು ಹೋಗಿ ಚೌರಿಯಪ್ಪನ ಕೈಗೆ ಒಪ್ಪಿಸೋವಾಗ ಖಾಜಿ

ಇದ್ದೋರು ಎಲ್ಲ ಹಕ್ಕಿಗಳನ್ನ ಮತ್ತೊಮ್ಮೆ ಲೆಕ್ಕ ಮಾಡಿದ್ರು ಒಂದು ಹಕ್ಕಿ ಜಾಸ್ತಿ ಇದೆ ಜೊತೆಗೆ ಅದನ್ನ ಬಿಸ್ಮಿಲ್ಲಾ ಮಾಡಿಲ್ಲ ಅನ್ನೋದು ಅವರ ಅರಿವಿಗೆ ಬಂತು.ಈಗ ಬಿಸ್ಮಿಲ್ಲಾ ಮಾಡ್ರಿ ಅನ್ನೋಣ ಅಂದ್ರೆ

ಅರೆಜೀವವಾಗಿದ್ದು ಇಲ್ಲಿಗೆ ತರೋವಷ್ಟೊತ್ತಿಗೆ ನಿಜರ್ಿವವಾಗಿತ್ತು. ಖಾಜಿಯವರಿಗೆ ಇದರಿಂದ ಸಿಟ್ಟು ಬಂದು `ನೀವು ಮೋಸಗಾರರು. ಬಿಸ್ಮಿಲ್ಲಾ ಮಾಡದ ಹಕ್ಕಿಯನ್ನ ನನಗೆ ಹೇಳದೆ

ತಗಂಬಂದಿದೀರ. ಇಂಥ ಮೋಸ ಎಲ್ಲ ನನಗೆ ಸರಿ ಬರೋದಿಲ್ಲ. ನಾನಿದನ್ನು ತಿನ್ನೋದು ಇಲ್ಲ. ನೀವು ಏನಾದ್ರೂ ಮಾಡ್ಕೊಳ್ಳಿ’ ಅಂತ ಹೊರಟೇ ಬಿಟ್ರು ನಾನು, ತೇಜಸ್ವಿ, ಚೌರಿಯಪ್ಪ ಮೂವರೂ

ತರತರವಾಗಿ ಸಮಾಧಾನ ಮಾಡಿದ್ರೂ ಅವರಿಗೆ ಸಮಾಧಾನ ಆಗ್ಲಿಲ್ಲ. `ನಾನು ಮೊದಲೇ ಹೇಳಿದ್ದೆ ನೀವು ಮೋಸ ಮಾಡಿದ್ರಿ’ ಅಂತ ಅವರ ವಾದ. `ಅಲ್ರಿ, ನೀವೆ ಲೆಕ್ಕ ತಪ್ಪಿದೀರೇನೋ ಕಣ್ರಿ.

ನಾವಿಬ್ರೂ ಎಲ್ಲ ಹಕ್ಕಿಗಳನ್ನ ನಿಮ್ಮ ಕೈಗೆ ಕೊಟ್ಬಿಟ್ಟೆ ಆಮೇಲೆ ಚೀಲಕ್ಕೆ ತುಂಬಿರೋದು’ ಅಂದ್ರೆ ಕೇಳಲೇ ಇಲ್ಲ. `ಇಷ್ಟೆಲ್ಲ ಹೇಳ್ತಿರಲ್ಲ, ಮೀನಿಗ್ಯಾಕೆ ಬಿಸ್ಮಿಲ್ಲಾ ಮಾಡಲ್ಲ? ಅದ್ರದ್ದು ಮಾಂಸವೇ ತಾನೇ

ತಿನ್ನೋದು?’ ಅಂದ್ರೆ `ಮೀನಿಗೆ ಸಮುದ್ರದಲೇ ದೇವರು ಬಿಸ್ಮಿಲ್ಲಾ ಮಾಡಿರ್ತಾನೆ’ ಅಂತ್ಹೇಳಿ ವಾದಿಸಿದ್ರು. ಕೊನೆಗೂ ಬಿಸ್ಮಿಲ್ಲಾ ಮಾಡದ ಒಂದು ಹಕ್ಕಿ ಸೇರ್ಕಂಡಿರೋದ್ರಿಂದ ಮಾಂಸದ ಊಟ

ಉಣ್ಣಲಿಕ್ಕೆ ನಿರಾಕರಿಸಿ ಹೊರಟೇ ಹೋದ್ರು. ಇದರಿಂದ ನಮಗೂ ಬೇಜಾರಾಗಿ ಅಡುಗೆ ಮಾಡಿ ಉಣ್ಣುವ ಮನಸ್ಥಿತಿಯೇ ಹೊರಟ್ಹೋಗಿ ನಾವುಗಳು ಹಕ್ಕಿಗಳನ್ನ ಗುಂಡಿ ತೋಡಿ ಹುಗಿದು ಹಾಕಿ ಬರಿಗೈ,

ಬರಿಹೊಟ್ಟೆಯಲ್ಲಿ ವಾಪಾಸ್ಸಾದೆವು. ಜೊತೆಗೆ `ಅಪರೂಪಕ್ಕೆ ಬಿಳುವಾಗಳು ಸಿಕ್ಕಿದ್ವು. ನೀವು ಖಾಜಿ ಸೇರಿ ಅದನ್ನು ತಿನ್ನದಿದ್ದಂಗೆ ಮಾಡಿ ಹಾಕಿದ್ರಲ್ಲ. ಎಂಥ ಅನ್ಯಾಯ ಮಾಡಿದ್ರಿ. ಇನ್ಯಾವತ್ತೂ

ಖಾಜಿಯನ್ನ ಶಿಕಾರಿಗೆ ಮಾತ್ರ ಕರ್ಕಂಡು ಹೋಗೋದಿಲ್ಲ’. ಅನ್ನೋ ತೇಜಸ್ವಿ ಶಪಥದೊಂದಿಗೆ.

 

 

 

 

‍ಲೇಖಕರು G

8 March, 2012

2 Comments

  1. savitri

    🙂

  2. Girish.S

    🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading